Kavya Maran: ಎಸ್‌ಆರ್‌ಎಚ್ ಬ್ಯಾಟರ್‌ಗಳ ಜೋಶ್ ಹೆಚ್ಚಿಸಿದ ಕಾವ್ಯಾ ಮಾರನ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸ್ಪೋಟಕ ಆಟವನ್ನು ಆಡಿ ಗಮನ ಸೆಳೆಯಿತು. ಸ್ಟೇಡಿಯಂನಲ್ಲಿ ಹೈದರಾಬಾದ್ ಬ್ಯಾಟರ್‌ಗಳು ಸುನಾಮಿ ಬ್ಯಾಟಿಂಗ್ ಒಂದು ಕಡೆ ಆದರೆ, ಗ್ಯಾಲರಿಯಲ್ಲಿ ಎಸ್‌ಆರ್‌ಎಚ್ ತಂಡದ ಸಹ ಮಾಲೀಕಿ ಕಾವ್ಯಾ ಮಾರನ್ ಆಟಗಾರರು ಜೋಶ್ ಹೆಚ್ಚಿಸುತ್ತಲೇ ಇದ್ದರು. ಐಪಿಎಲ್ ಇತಿಹಾಸದಲ್ಲಿ ತಮ್ಮ ತಂಡ ಗರಿಷ್ಠ ರನ್ ಕಲೆ ಹಾಕಿದ ಮೇಲಂತೂ ಕಾವ್ಯಾ ಖುಷಿಗೆ ಪಾರವೇ ಇರಲಿಲ್ಲ.
ಮಯಾಂಕ್ ಅಗರ್‌ವಾಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೊತೆಗೂಡಿ ಅಬ್ಬರದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯ ಆಟವನ್ನು ಕಂಡು ಕಾವ್ಯಾ ಕುರ್ಚಿಯಲ್ಲಿ ಕೂಡಲು ಆಗದೇ ಎದ್ದು ನಿಂತು ಕ್ಲ್ಯಾಪ್ಸ್ ತಟ್ಟಿ ಪ್ರೋತ್ಸಾಹ ನೀಡಿದರು. ಮೈದಾನದಲ್ಲಿ ಎಸ್‌ಆರ್‌ಎಚ್ ಬ್ಯಾಟರ್ ಆರ್ಭಟ, ಗ್ಯಾಲರಿಯಲ್ಲಿ ಕಾವ್ಯಾ ಮಾರನ್ ಅವರ ಜೋಶ್ ಕಂಡ ಅಭಿಮಾನಿಗಳು ಫುಲ್ ಫಿದಾ ಆದರು.

ಗ್ಯಾಲರಿಯಲ್ಲಿ ಕುಣಿದ ಕಾವ್ಯಾ
ಟ್ರಾವಿಸ್ ಹೆಡ್ ಎಸ್‌ಆರ್‌ಎಚ್ ಪರ ವೇಗದ ಅರ್ಧಶತಕ ಬಾರಿಸಿದಾಗಲೂ ಅವರಿಗೆ ಕಾವ್ಯಾ ಪ್ರೋತ್ಸಾಹವನ್ನು ನೀಡಿದರು. ಅದೇ ರೀತಿ ಯುವ ಆಟಗಾರ ಅಭಿಷೇಕ್ ಬ್ಯಾಟ್ ಬೀಸಿದಾಗಲೂ ಸಹ ಕಾವ್ಯಾ ಚಪ್ಪಾಳೆ ತಟ್ಟಿ ರಂಜಿಸಿದರು.
ಇನ್ನು ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ಗೆ ಬಂದಾಗ ಕಾವ್ಯ ಕೊಂಚ ಸೈಲೆಂಟ್ ಆಗಿಯೇ ಇದ್ದರು. ಅವರಿಗೆ ರೋಹಿತ್ ಶರ್ಮಾ ವಿಕಟ್ ಎಷ್ಟು ಮಹತ್ವದ್ದು ಎಂದು ತಿಳಿದಿತ್ತು. ರೋಹಿತ್ ಶರ್ಮಾಗೆ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದ ತಕ್ಷಣ ಕಾವ್ಯಾ ಮಾರನ್ ಖುಷಿಯಿಂದ ಕುಣಿದಾಡಿದರು. ರೋಹಿತ್ ಶರ್ಮಾ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಕಾವ್ಯಾಳ ಪ್ರತಿಕ್ರಿಯೆ ನಿಜಕ್ಕೂ ನೋಡಲೇಬೇಕು.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಔಟ್ ಆದಾಗಲೂ ಇದೇ ರಿಯಾಕ್ಷನ್ ನೀಡಿದ ಕಾವ್ಯಾ ಅಭಿಮಾನಿಗಳ ಚಿತ್ತ ಕದ್ದರು.
ಬುಧವಾರ ನಡೆದ 17ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 277 ರನ್ ಸೇರಿಸಿತು. ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ 62, ಅಭಿಷೇಕ್ ಶರ್ಮ 63, ಹೆನ್ರಿಚ್ ಕ್ಲಾಸೆನ್ ಅಜೇಯ 80 ರನ್ ಸಿಡಿಸಿ ಮಿಂಚಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 246 ರನ್ ಸೇರಿಸಿ, 31 ರನ್ ಸೋಲು ಕಂಡಿತು. ಇದು ಮುಂಬೈ ಇಂಡಿಯನ್ಸ್ ಪ್ರಸಕ್ತ ಋತುವಿನಲ್ಲಿ ಕಂಡ ಎರಡನೇ ಸೋಲು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications