IPL 2024: ಅಂದು ಹರಾಜಿನಲ್ಲಿ ನೋಡಿ ನಕ್ಕವರಿಗೆ ತಿರುಗೇಟು ಕೊಟ್ಟ ಕಾವ್ಯ ಮಾರನ್!
ಮೇ 25 ಶನಿವಾರ, ಐಪಿಎಲ್ 2024ರ ಕ್ವಾಲಿಫೈಯರ್-2ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಈ ಗೆಲುವಿನ ನಂತರ ಕಾವ್ಯಾ ಮಾರನ್ ಒಡೆತನದ ಬಲಿಷ್ಠ ಹೈದರಾಬಾದ್ ತಂಡ ಫೈನಲ್ ತಲುಪಿದೆ.
ನಾಳೆ (ಮೇ 26) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2024ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಸೆಣಸಾಡಲಿದೆ.

ಕಳೆದ ಋತುವಿನಲ್ಲಿ ಸತತ ಸೋಲಿನಿಂದ ಅಂಕಪಟ್ಟಿಯಲ್ಲಿದ್ದ ಹೈದರಾಬಾದ್ ಈ ಬಾರಿ ಬಲಿಷ್ಠ ತಂಡವಾಗಿ ಬಂದು ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಜೊತೆಗೆ ಈ ಋತುವಿನ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಇದೀಗ ಹೈದರಾಬಾದ್ ಫೈನಲ್ ತಲುಪುವ ಮೂಲಕ ಹರಾಜಿನಲ್ಲಿ ಕಾವ್ಯ ಮಾರನ್ ಅವರನ್ನು ನೋಡಿ ನಕ್ಕವರಿಗೆ ತಕ್ಕ ಉತ್ತರ ಕೊಟ್ಟಿದೆ.
2023ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಹೈದರಾಬಾದ್ ತಂಡಕ್ಕೆ ಕರೆ ತರಬೇಕು ಎಂದು ಕಾವ್ಯಾ ಮಾರನ್ ಅಂದುಕೊಂಡಿದ್ದರು. ಹಾಗಾಗಿ ಕಾವ್ಯಾ ಮಾರನ್, ಪ್ಯಾಟ್ ಕಮ್ಮಿನ್ಸ್‌ಗೆ ನಿರಂತರವಾಗಿ ಹರಾಜು ಹಾಕುತ್ತಿದ್ದಾಗ, ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ರಾಜಸ್ಥಾನ ರಾಯಲ್ಸ್ ಕೋಚ್ ಕುಮಾರ್ ಸಂಗಕ್ಕಾರ ನಗುತ್ತಿದ್ದರು.
ಆದರೆ ಪ್ಯಾಟ್ ಕಮ್ಮಿನ್ಸ್‌ಗೆ 20.5 ಕೋಟಿ ರೂ.ಗಳನ್ನು ನೀಡಿ ಹೈದರಾಬಾದ್‌ಗೆ ಬಿಡ್ ಮಾಡುವಲ್ಲಿ ಕಾವ್ಯ ಮಾರನ್ ಯಶಸ್ವಿಯಾಗಿದ್ದರು. ಆ ವೇಳೆ ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಹರಾಜಾಯಾಗಿತ್ತು. ಬಳಿಕ ಕಾವ್ಯಾ ಮಾರನ್ ಒತ್ತಾಯದ ಮೇರೆಗೆ ಪ್ಯಾಟ್ ಕಮ್ಮಿನ್ಸ್ ಅವರನ್ನು ತಂಡದ ನಾಯಕನಾಗಿ ಮಾಡಲಾಗಿತ್ತು.
ಇದರ ನಂತರ ಪ್ಯಾಟ್ ನಾಯಕತ್ವದಲ್ಲಿ ಹೈದರಾಬಾದ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಅಂಕಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿತ್ತು. ಇಷ್ಟೇ ಅಲ್ಲ, ಕ್ವಾಲಿಫೈಯರ್-2ರಲ್ಲಿ ಹರಾಜಿನ ವೇಳೆ ನಗೆ ಬೀರಿದ ಕುಮಾರ ಸಂಗಕ್ಕಾರ ಅವರ ರಾಜಸ್ಥಾನ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ.
ಇದಕ್ಕೂ ಮುನ್ನ ಸಂಜೀವ್ ಗೊಯೆಂಕಾ ಮಾಲೀಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಹೈದರಾಬಾದ್ ಸೋಲಿಸಿತ್ತು. ಆ ಪಂದ್ಯದಲ್ಲಿ ಲಕ್ನೋ ನೀಡಿದ 165 ರನ್‌ಗಳ ಗುರಿಯನ್ನು ಹೈದರಾಬಾದ್ ಯಾವುದೇ ವಿಕೆಟ್ ನಷ್ಟವಿಲ್ಲದೆ 9.5 ಓವರ್‌ಗಳಲ್ಲಿ ತಲುಪುವ ಮೂಲಕ ದಾಖಲೆ ನಿರ್ಮಿಸಿತು.
ಈ ಸೋಲಿನ ಬಳಿಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಅವರ ಮೇಲೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಈಗ ಕಾವ್ಯಾ ಮಾರನ್ ಅವರ ಹೈದರಾಬಾದ್ ತಂಡ ಫೈನಲ್ ತಲುಪಿದೆ. ಇವರನ್ನು ನೋಡಿ ನಕ್ಕವರ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಎರಡನೇ ಬಾರಿಗೆ ಹೈದರಾಬಾದ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಮತ್ತೊಂದು ಕಪ್ ಮೇಲೆ ಕಣ್ಣಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications