ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಸೋಲುಗಳನ್ನು ಕಂಡಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು, ಪ್ರಸಕ್ತ ಲೀಗ್‌ನಲ್ಲಿ ನಾಲ್ಕನೇ ಸೋಲು ಕಂಡಿರುವ ಎಸ್‌ಆರ್‌ಎಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್‌ಗಳ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದೆ.
ಈ ಲೀಗ್‌ನಲ್ಲಿ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಸನ್, ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಈ ವೇಳೆ ತಂಡ ಸಹ ಎಲ್ಲಿ ಎಡವಿದೆ ಎಂಬ ಬಗ್ಗೆ ಒಮ್ಮೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯತೆ ಇದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಅಂಗಳದಲ್ಲಿ ಮೈದಾನಕ್ಕೆ ಇಳಿದ್ರೂ, ಆಟಗಾರರನ್ನು ಹುರಿದುಂಬಿಸಲು ಮಾಲೀಕಿ ಕಾವ್ಯಾ ಮಾರನ್ ಹಾರಜರಿರುತ್ತಾರೆ. ಕಾವ್ಯ ಮೈದಾನದಲ್ಲಿ ಇದ್ದಾರೆ ಎಂದರೆ, ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಪೋಕಸ್ ಆಗಿರುತ್ತವೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲೂ ಕಾವ್ಯ ಮೈದಾನದಲ್ಲಿ ಕಾಣಿಸಿಕೊಂಡರು. ಈ ವೇಳೆ ತಮ್ಮ ತಂಡದ ಬ್ಯಾಟರ್‌ಗಳು ನೀಡುತ್ತಿದ್ದ ಪ್ರದರ್ಶನ ಕಂಡು ನಿರಾಸೆ ಗೊಂಡರು. ಇವರ ರಿಯಾಕ್ಷನ್ ವಿಡಿಯೋಗಳು ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸತತ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ 16 ಎಸೆತಗಳಲ್ಲಿ 18 ರನ್ ಬಾರಿಸಿ ಔಟ್ ಆದರು. ಇವರು ಸಿರಾಜ್ ಎಸೆತದಲ್ಲಿ ಇಲ್ಲದ ಶಾಟ್‌ಗೆ ಮುಂದಾಗಿ ತೆವಟಿಯಾಗೆ ಕ್ಯಾಚ್ ನೀಡಿದರು. ಅಭಿಷೇಕ್ ಔಟ್ ಆಗುತ್ತಿದ್ದಂತೆ ಕಾವ್ಯ ಮಾರನ್ ಸಿಟ್ಟಾದರು. ವಿಡಿಯೋದಲ್ಲಿ ಕಾವ್ಯಾ ಅಭಿಷೇಕ್ ಬಿಗ್ ಹೊಡೆತಕ್ಕೆ ಮುಂದಾಗಿದ್ದು, ಇಷ್ಟವಾಗಲಿಲ್ಲ. ಅಲ್ಲದೆ ವಿಡಿಯೋದಲ್ಲಿ ಹೀಗೆ ಮಾಡಬೇಕಿತ್ತು ಎಂದು ಸನ್ನೆ ಮಾಡಿ ತೋರಿಸಿದಂತೆ ಕಂಡು ಬಂದಿತು. ಅವರು ಕೈ ಸನ್ನೆಗಳ ಮೂಲಕವೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬ್ಯಾಟ್ಸ್‌ಮನ್‌ಗಳ ನಿರಾಶಾದಾಯಕ ಪ್ರದರ್ಶನದಿಂದಾಗಿ ಕಾವ್ಯ ಮಾರನ್ ಅವರ ತಾಳ್ಮೆ ಕಳೆದುಕೊಂಡರು. ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನಕ್ಕೆ ಅವರು ನಿರಾಶೆ ವ್ಯಕ್ತಪಡಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ಪರ ನಿತೀಶ್ ಕುಮಾರ್ ರೆಡ್ಡಿ 31, ಹೆನ್ರಿಕ್ ಕ್ಲಾಸೆನ್ 27, ನಾಯಕ ಪ್ಯಾಟ್ ಕಮಿನ್ಸ್ 22 ರನ್ ಬಾರಿಸಿ ಮಿಂಚಿದರು. ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ 16.4 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ ಸೇರಿಸಿ ಸೋಲು ಕಂಡಿತು.