IPL 2024: ಫೈನಲ್‌ನಲ್ಲಿ ಕೆಕೆಆರ್ ಎದುರು ಎಸ್‌ಆರ್‌ಹೆಚ್ ಸೋಲುತ್ತಿದ್ದಂತೆ ಕಣ್ಣೀರಿಟ್ಟ ಕಾವ್ಯಾ ಮಾರನ್!
ಮೇ 26 ಭಾನುವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಐಪಿಎಲ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.
2014ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಕೆಕೆಆರ್ ಇದೀಗ ವರ್ಷಗಳ ನಂತರ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಹೈದರಾಬಾದ್ ತಂಡವನ್ನು ಕೇವಲ 113 ರನ್‌ಗಳಿಗೆ ಆಲೌಟ್ ಮಾಡಿದ್ದರಿಂದ ಕೆಕೆಆರ್ ಆರಂಭದಿಂದಲ್ಲೇ ಆಟದ ಮೇಲೆ ಪ್ರಾಬಲ್ಯ ಸಾಧಿಸಿತು.

ಹೈದರಾಬಾದ್ ನೀಡಿದ 114 ರನ್‌ಗಳ ಗುರಿಯನ್ನು ಕೆಕೆಆರ್ ಇನ್ನೂ 57 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 52 ರನ್ ಗಳಿಸಿ ಔಟಾಗದೆ ಉಳಿದರು. ಹೀಗಾಗಿ 2024ರ ಐಪಿಎಲ್ ಚಾಂಪಿಯನ್ ಕೆಕೆಆರ್ ಆಗಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಬಲಿಷ್ಠ ಹೈದರಾಬಾದ್ ತಂಡ ಕೂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮತ್ತೊಂದೆಡೆ ಟೂರ್ನಿಯುದ್ದಕ್ಕೂ ತನ್ನ ತಂಡವನ್ನು ಉತ್ಸಾಹದಿಂದ ಎಸ್‌ಆರ್‌ಹೆಚ್ ಮಾಲೀಕಿ ಕಾವ್ಯ ಮಾರನ್ ಬೆಂಬಲಿಸಿದ್ದರು. ಹೀಗಾಗಿ ಫೈನಲ್ ಹೈದರಾಬಾದ್ ಸೋತಿದಕ್ಕೆ ಕಾವ್ಯ ಮಾರನ್ ಕಣ್ಣೀರಿಟ್ಟಿದ್ದಾರೆ.
ಈ ದೃಶ್ಯಗಳನ್ನು ಮೈದಾನದ ಕ್ಯಾಮರಾಗಳು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಪಿಎಲ್ ಫೈನಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಹೈದರಾಬಾದ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications