ಮದುವೆ ಆಗುತ್ತಿದ್ದಾರಾ ಕಾವ್ಯಾ ಮಾರನ್? ಹುಡುಗ ಯಾರು?
ಐಪಿಎಲ್‌ನ ಚಾಂಪಿಯನ್ ತಂಡಗಳಲ್ಲಿ ಒಂದಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕೆ ಕಾವ್ಯ ಮಾರನ್ ಮದುವೆ ಕುರಿತಾದ ಸುದ್ದಿ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಇವರನ್ನು ಮದುವೆ ಆಗುತ್ತಿರುವ ಹುಡುಗ ಯಾರು? ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮ ಮನಸ್ಸಿನಲ್ಲಿ ಮೂಡಬಹುದು ಅದಕ್ಕೆ ಉತ್ತರ ಇಲ್ಲಿದೆ.
ಕಾವ್ಯಾ ಮಾರನ್ ಸನ್ ತಂಡದ ಮಾಲೀಕರ ಮಗಳು. ಇವರು ಐಪಿಎಲ್ ಹರಾಜಿನಿಂದ ಹಿಡಿದು, ಪಂದ್ಯಗಳ ನಡೆಯುವ ಸ್ಥಳದ ವರೆಗೆ ಕಾಣಿಸಿಕೊಳ್ಳುತ್ತಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕೆ ಕಾವ್ಯ, ಶೀಘ್ರದಲ್ಲಿ ಸಂಗೀತ ಸಂಯೋಜಕ ಅನಿರುದ್ಧ ರವಿಚಂದ್ರ ಅವರೊಂದಿಗೆ ವಿವಾಹವಾಗುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ. ಈ ಸುದ್ದಿಯ ಬಗ್ಗೆ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

ಇವರಿಬ್ಬರ ಮದುವೆಯ ಬಗ್ಗೆ ಹಿರಿಯರು ಮಾತುಕತೆ ನಡೆಸಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕಲಾನಿಧಿ ಮಾರನ್ ಅವರೊಂದಿಗೆ ವೈಯಕ್ತಿಕವಾಗಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಅನಿರುದ್ಧ್ ಮತ್ತು ಕಾವ್ಯ 2024 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಇತ್ತೀಚೆಗೆ ಲಾಸ್ ವೇಗಾಸ್‌ನಲ್ಲಿ ಕಾಣಿಸಿಕೊಂಡರು ಎಂದು ಕೌಮುದಿ ಆನ್‌ಲೈನ್ ವರದಿ ಮಾಡಿದೆ.
ಅನಿರುದ್ಧ್ ಹೇಳಿದ್ದೇನು?
ಸಾಮಾಜಿಕ ತಾಣದಲ್ಲಿ ಕಾವ್ಯಾ ಹಾಗೂ ಅನಿರುದ್ಧ್ ಇಬ್ಬರೂ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದು ಶೀಘ್ರದಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿಯ ಬಗ್ಗೆ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮೌನ ಮುರಿದಿದ್ದಾರೆ. ಅಲ್ಲದೆ ಈ ಬಗ್ಗೆ ಒಂದು ಪೋಸ್ಟ್ ಸಹ ಮಾಡಿದ್ದಾರೆ. "ಮದುವೆ ಆಹ್? ಲೋಲ್... ಶಾಂತವಾಗಿರಿ. ಮತ್ತು ದಯವಿಟ್ಟು ಈ ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ" ಎಂದು ಬರೆದಿದ್ದಾರೆ.
ಅನಿರುದ್ಧ್ ಯಾರು?
ದಕ್ಷಿಣ ಭಾರತದ ಸುಪ್ರಸಿದ್ದ ಸಂಗೀತ ಸಂಯೋಜಕರಲ್ಲಿ ಅನಿರುದ್ಧ್ ಸಹ ಒಬ್ಬರು. ಇವರು ನಟ ರವಿ ರಾಘವೇಂದ್ರ ಮತ್ತು ಶಾಸ್ತ್ರಿಯ ನೃತ್ಯಗಾರ್ತಿ ಲಕ್ಷ್ಮಿ ಅವರ ಮಗ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅನಿರುದ್ಧ್ ಅವರ ಚಿಕ್ಕಮ್ಮ. ಅನಿರುದ್ಧ್ "ಜವಾನ್" ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇವರು ಕೊಲವೆರಿ-ಡಿ ಹಾಡಿನ ಮೂಲಕ ಪ್ರಸಿದ್ಧಿಯನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications