KBC 16: 6.4 ಲಕ್ಷ ರೂ.ಗೆ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಗೆ ಹಾಟ್ ಸೀಟ್‌ನಲ್ಲಿದ್ದವನು ಫುಲ್ ಕನ್‌ಫ್ಯೂಸ್
ಟೆಲಿವಿಷನ್ ಇತಿಹಾಸದ ಅತ್ಯಂತ ಹಳೆಯ ರಿಯಾಲಿಟಿ ಶೋ ಕೌನ್ ಬನೆಗಾ ಕರಡೋ ಪತಿ ಮತ್ತೆ ಆರಂಭವಾಗಿದೆ. ಈ ಶೋದಲ್ಲಿ ಆಗಾಗ ಕ್ರಿಕೆಟ್ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬುಧವಾರ (ಅ.2) ಪ್ರಸಾರವಾದ ಶೋದಲ್ಲೂ ಇಂತಹದ್ದೇ ಒಂದು ಪ್ರಶ್ನೆ ಕೇಳಲಾಯಿತು. ಕೌನ್ ಬನೆಗಾ ಕರೋಡಪತಿ ಹೋಸ್ಟ್ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯನ್ನು ಕೇಳಿ ಬರೀ, ಹಾಟ್ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಮಾತ್ರ ಕನ್‌ಫ್ಯೂಸ್ ಆಗಿಲ್ಲ. ಬದಲಿಗೆ ಆಡಿಯನ್ಸ್ ಸಹ ಫುಲ್ ಕನ್‌ಫ್ಯೂಸ್ ಆದರು. ಹಾಗಿದ್ದರೆ, ಆ ಪ್ರಶ್ನೆ ಯಾವುದು?
ಕೌನ್ ಬನೆಗಾ ಕರೋಡಪತಿ ಸೀಜನ್‌ನ 16ನೇ ಆವೃತ್ತಿ ಆರಂಭವಾಗಿದೆ. ಈ ಶೋದಲ್ಲಿ ಹಲವು ಸ್ಟಾರ್‌ಗಳ ಚಿತ್ತವನ್ನು ಕದ್ದಿದೆ. ಈ ಶೋದಲ್ಲಿ ಕಠಿಣ ಸವಾಲುಗಳನ್ನು ಕೇಳಿ, ಹಾಟ್ ಸೀಟ್‌ನಲ್ಲಿ ಕೂತ ವ್ಯಕ್ತಿಗೆ ಕನ್ಫೂಸ್ ಮಾಡುವುದೇ ಒಂದು ಕಾಯಕ. ಈ ಶೋವನ್ನು ಜನ ಬಹು ದಿನಗಳಿಂದ ಪ್ರೀತಿಸುತ್ತಾ ಬಂದಿದ್ದಾರೆ. ಬುಧವಾರ ಅಮಿತಾಬ್ ಬಚ್ಚನ್ 6.4 ಲಕ್ಷ ರೂಪಾಯಿಗೆ ಕೇಳಿದ ಪ್ರಶ್ನೆ ನಿಜಕ್ಕೂ ಹಾಟ್ ಸೀಟ್‌ನಲ್ಲಿ ಕುಳಿತವನ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದವು.

ಕೇಳಿದ ಪ್ರಶ್ನೆ ಏನು?
ಸುನಿಲ್ ಗವಾಸ್ಕರ್ ಬಳಿಕ ಒಂದೇ ಟೆಸ್ಟ್ ಸರಣಿಯಲ್ಲಿ 700ಕ್ಕೂ ಅಧಿಕ ರನ್ ಬಾರಿಸಿದ ಎರಡನೇ ಭಾರತೀಯ ಆಟಗಾರ? ಈ ಪ್ರಶ್ನೆಯನ್ನು 6.4 ಲಕ್ಷ ರೂ.ಗೆ ಕೇಳಲಾಯಿತು. ಇದಕ್ಕೆ ನಾಲ್ಕು ಆಕ್ಷನ್ ಸಹ ಇದ್ದವು. ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರೋಹಿತ್ ಶರ್ಮಾ ಎಂದು ನಾಲ್ಕು ಆಯ್ಕೆಗಳನ್ನು ನೀಡಲಾಯಿತು. ಈ ಪ್ರಶ್ನೆಗೆ ಹಾಟ್ ಸೀಟ್‌ನಲ್ಲಿ ಕುಳಿತವನು ಆಡಿಯನ್ಸ್ ಪೋಲ್ ತೆಗೆದುಕೊಂಡರು.
ಆಡಿಯನ್ಸ್ ಸಹ ಕನ್‌ಫ್ಯೂಸ್
ಈ ಪ್ರಶ್ನೆಗೆ ಆಡಿಯನ್ಸ್ ಸಹ ಕನ್‌ಫ್ಯೂಸ್ ಆದರು. 37 ಪ್ರತಿಷತಕ್ಕಿಂತಲೂ ಹೆಚ್ಚಿನ ಜನರು ವಿರಾಟ್ ಕೊಹ್ಲಿ ಅವರಿಗೆ ವೋಟ್ ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಿಲ್ಲ. ಅಲ್ಲದೆ ಒಂದೇ ಸರಣಿಯಲ್ಲಿ ವಿರಾಟ್ 700ಕ್ಕೂ ಹೆಚ್ಚು ರನ್ ಬಾರಿಸಿಲ್ಲ. ಇನ್ನು 49 ಪ್ರತಿಷತ ಜನರು ಯಶಸ್ವಿ ಜೈಸ್ವಾಲ್‌ಗೆ ವೋಟ್ ಮಾಡಿದರು. ಶುಭಮನ್ ಗಿಲ್‌ಗೆ ಶೇಕಡಾ 4, ರೋಹಿತ್ ಶರ್ಮಾಗೆ ಶೇಕಡಾ 10 ಮತಗಳು ಬಿದ್ದವು.

ಸರಿ ಉತ್ತರ ಏನು?
ಸುನಿಲ್ ಗವಾಸ್ಕರ್ ಬಳಿಕ ಟೆಸ್ಟ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಬಾರಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಯಶಸ್ವಿ ಜೈಸ್ವಾಲ್ ಅವರದ್ದಾಗಿದೆ. ಇವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಸಾಧನೆ ಮಾಡಿದ್ದರು. ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ಹಿರಿಮೆ ಹೊಂದಿರುವ ಮೊದಲ ಭಾರತೀಯ ಬ್ಯಾಟ್ಸ್‌ಮನ್. ಅವರು 1970/71 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಮತ್ತು 1978/79 ರಲ್ಲಿ 732 ರನ್ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications