Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಳಿದೆ ಕ್ರಿಸ್ ಗೇಲ್ ಅಬ್ಬರ: ಬೆಂಗಳೂರಿಗೆ ಬಂದಿಳಿದ ವೆಸ್ಟ್ ಇಂಡೀಸ್ ದಿಗ್ಗಜ

KCC 2023: Chris Gayle arrives in Bengaluru to play Kannada Chalanachitra cup

ಕನ್ನಡ ಚಲನಚಿತ್ರ ಕಪ್ 2023ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ದಿಗ್ಗಜರು ಒಟ್ಟಾಗಿ ಆಡುವ ಈ ಟೂರ್ನಿ ಎರಡು ಆವೃತ್ತಿಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದ್ದು ಮೂರನೇ ಆವೃತ್ತಿ ಫೆಬ್ರವರಿ 24 ಹಾಗೂ 25ರಂದು ಆಯೋಜನೆಯಾಗಲಿದೆ. ಈ ಬಾರಿಯ ಕೆಸಿಸಿ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಭಾಗಿಯಾಗಲಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಎರಡು ದಿನಗಳ ಕಾಲ ಕ್ರಿಕೆಟ್ ಗೇಲ್ ಅಬ್ಬರ ನಡೆಯಲಿದೆ.

ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳನ್ನು ಒಳಗೊಂಡ ಆರು ತಂಡಗಳ ನಡುವೆ ಈ ಟೂರ್ನಿ ನಡೆಯಲಿದ್ದು ಪ್ರತಿ ತಂಡದಲ್ಲಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತಲಾ ಒಬ್ಬ ಸ್ಟಾರ್ ಆಟಗಾರ ಆಡಲಿದ್ದಾರೆ. ಈ ಪೈಕಿ ಕ್ರಿಸ್ ಗೇಲ್ ಕೂಡ ಒಬ್ಬರಾಗಿದ್ದು ಕಿಚ್ಚ ಸುದೀಪ್ ನಾಯಕತ್ವದ ತಂಡದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯಲಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಕ್ರಿಸ್ ಗೇಲ್: ಕೆಸಿಸಿ ಟೂರ್ನಿಯಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಕ್ರಿಸ್ ಗೇಲ್ ಗುರುವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಲೀಗ್ ಕ್ರಿಕೆಟ್‌ನಿಂದ ಸದ್ಯ ದೂರವಿರುವ ಕ್ರಿಸ್ ಗೇಲ್ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶ ದೊರೆತಂತಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮತ್ತಷ್ಟು ಸ್ಟಾರ್‌ಗಳು: ಈ ಬಾರಿಯ ಕನ್ನಡ ಚಲನಚಿತ್ರ ಕಪ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರು ಸ್ಟಾರ್ ಕ್ರಿಕೆಟಿಗರು ಭಾಗಿಯಾಗಲಿದ್ದಾರೆ. ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ ಸೇರಿದಂತೆ ಭಾರತದ ಆಟಗಾರರಾದ ಸುರೇಶ್ ರೈನಾ ಹಾಗೂ ಸುಬ್ರಮಣಿಯನ್ ಬದ್ರಿನಾಥ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಹಾಗೂ ತಿಲಕರತ್ನೆ ದಿಲ್ಶನ್ ಆಡಲಿದ್ದಾರೆ.

ಕೆಸಿಸಿಯ ವಿಶೇಷತೆಗಳು: ಕನ್ನಡ ಚಲನಚಿತ್ರ ಕಪ್‌ನಲ್ಲಿ ಒಟ್ಟು ಆರು ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿದೆ. ಸ್ಟಾರ್ ನಟರು, ಅಂತಾರಾಷ್ಟ್ರೀಯ ಕ್ರಿಕೆಟಿಗರ ಜೊತೆಗೆ ಕೆಪಿಎಲ್‌ನ ಇಬ್ಬರು ಆಟಗಾರರು ಕೂಡ ಪ್ರತಿ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದು ಸಾಕಷ್ಟು ಪೈಪೋಟಿಯ ಪಂದ್ಯ ನಡೆಯುವದರಲ್ಲಿ ಅನುಮಾನವಿಲ್ಲ ಕಿಚ್ಚ ಸುದೀಪ್, ಡಾರ್ಲಿಂಗ್ ಕೃಷ್ಣ, ಪ್ರದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಜಯರಾಮ್ ಕಾರ್ತಿಕ್ ಹಾಗೂ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಆರು ತಮಡಗಳ ನಾಯಕನಾಗಿ ತಂಡಗಳನ್ನು ಮುನ್ನಡೆಸಲಿದ್ದಾರೆ.

Story first published: Thursday, February 23, 2023, 14:14 [IST]
Other articles published on Feb 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+