KCC Teams: ಆಟಗಾರರ ಹರಾಜಿನ ಬಳಿಕ 6 ಕೆಸಿಸಿ ತಂಡಗಳು ಹೀಗಿವೆ; ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಯಾವ ತಂಡದಲ್ಲಿ?
ಬಣ್ಣದ ಲೋಕದ ತಾರೆಗಳು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವುದು ಮಾತ್ರವಲ್ಲದೆ, ಬ್ಯಾಟ್ ಮತ್ತು ಬಾಲ್‌ನೊಂದಿಗೆ ಮೈದಾನಕ್ಕಿಳಿದು ಕ್ರಿಕೆಟ್ ಆಡಿಯೂ ಕೂಡ ರಂಜಿಸಲು ಬರುತ್ತಿದ್ದಾರೆ.
ಈ ಹಿಂದೆ ಸಿಸಿಎಲ್ ಟೂರ್ನಿಯಲ್ಲಿ ಬೇರೆ ಬೇರೆ ಚಿತ್ರರಂಗದ ಸೆಲೆಬ್ರಿಟಿಗಳು ಆಡಿದರೆ, ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಟೂರ್ನಿಯಲ್ಲಿ ಕನ್ನಡ ಸಿನಿಮಾ ತಾರೆಯರು ಆಡುತ್ತಾ ಬರುತ್ತಿದ್ದಾರೆ.

ಖ್ಯಾತ ನಟ ಕಿಚ್ಚ ಸುದೀಪ್ ಮಾರ್ಗದರ್ಶನದಲ್ಲಿ ಶುರುವಾದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 23, 24, 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವುದಾಗಿ ಸುದೀಪ್ ಅವರು ಘೋಷಿಸಿದ್ದಾರೆ.
ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮ ಲೋಕದಲ್ಲಿ ಕೆಲಸ ಮಾಡುವವರ ಕ್ರಿಕೆಟ್ ಪಂದ್ಯಾವಳಿಗಾಗಿ ಕೆಸಿಸಿ ಕಪ್ ಸೀಸನ್ 4ರ (Kannada Chalanachitra Cup 4) ಹರಾಜು ಪ್ರಕ್ರಿಯೆ ಭಾನುವಾರ, ನವೆಂಬರ್ 26ರಂದು ಮುಗಿದಿದೆ. ಹೊಸಕೆರೆಹಳ್ಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.

ಕೆಸಿಸಿ ಹರಾಜು ಪ್ರಕ್ರಿಯೆಯಲ್ಲಿ ಬಹುತೇಕ ಕಲಾವಿದರು ಭಾಗಿಯಾಗಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಆರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಆರು ತಂಡಗಳಿಗೂ ಸ್ಟಾರ್ ನಟರು ನಾಯಕ ಆಗಿದ್ದಾರೆ.
ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ (ಶಿವಣ್ಣ), ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ದುನಿಯಾ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವರು ಹರಾಜಿನಲ್ಲಿ ಭಾಗಿಯಾಗಿದ್ದರು.
ಇನ್ನು ಈ ಬಾರಿಯ ಕೆಸಿಸಿ ಪಂದ್ಯಾವಳಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರೂ ಭಾಗಿಯಾಗಲಿದ್ದಾರೆ. ಎಸ್ ಬದ್ರಿನಾಥ್, ಸುರೇಶ್ ರೈನಾ, ತಿಲಕರತ್ನೆ ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ, ಹರ್ಷ್ವಲ್ ಗಿಬ್ಸ್ ತಲಾ ಒಂದೊಂದು ತಂಡದ ಪರವಾಗಿ ಆಡಲಿದ್ದಾರೆ.

ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.
1) ಗಂಗಾ ವಾರಿಯರ್ಸ್ - ಎಂಕೆಜೆ ಗ್ರೂಪ್
ಗೋಲ್ಡನ್ ಸ್ಟಾರ್ ಗಣೇಶ್ (ನಾಯಕ), ಮುರಳಿ ವಿಜಯ್, ರಾಜಕುಮಾರ, ಕರಣ್ ಆರ್ಯನ್, ಪ್ರತಾಪ್, ಸುನೀಲ್ ರಾವ್, ವಿಕಾಸ್, ಮಲ್ಲಿಕಾರ್ಜುನ್, ನಾಗಾರ್ಜುನ, ಗರುಡ ರಾಮ, ರೋಹಿತ್ ಪದಕಿ, ಚೇತನ್, ಕಾರ್ತಿಕ್, ರಾಜು ಗೌಡ, ಪ್ರಜ್ವಲ್.
2) ಹೊಯ್ಸಳ ಈಗಲ್ಸ್ - ಸೂರಜ್ ಪ್ರೊಡಕ್ಷನ್ಸ್
ಕಿಚ್ಚ ಸುದೀಪ್ (ನಾಯಕ), ತಿಲಕರತ್ನೆ ದಿಲ್ಶನ್, ಡಾರ್ಲಿಂಗ್ ಕೃಷ್ಣ, ನಂದ ಕಿಶೋರ್, ತ್ರಿವಿಕ್ರಮ್, ಅರುಣ್ ಬಚ್ಚನ್, ನವೀನ್ ರಘು, ವಾಸುಕಿ ವೈಭವ್, ಇಶಾನ್, ಸಚಿನ್ ಸಿ, ಮಹೇಶ್ ಕೃಷ್ಣ, ಜಗ್ಗಿ, ಎಸ್‌ಆರ್‌ಕೆ - ರಂಜಿತ್, ಹೇಮಂತ್, ರಾಜೇಶ್, ಸಂಜಯ್ ಅಶ್ವಿನ್, ಆದರ್ಶ್.
3) ವಿಜಯನಗರ ಪೇಟ್ರಿಯಾಟ್ಸ್ - ಕೆಆರ್‌ಜಿ ಸ್ಟುಡಿಯೋಸ್ & ಡಾಲಿ ಸಿನಿಮಾಸ್
ಜಯ್ ಕಾರ್ತಿಕ್ (ನಾಯಕ), ದುನಿಯಾ ವಿಜಯ್, ಹರ್ಷಲ್ ಗಿಬ್ಸ್, ಎನ್‌ಸಿ ಅಯ್ಯಪ್ಪ, ಪ್ರತಾಪ್ ನಾರಾಯಣ, ರಾಘವೇಂದ್ರ, ಪವನ್ ಕುಮಾರ್, ಆರ್ಯನ್, ಮಧು, ಸುದರ್ಶನ್, ಯಶವಂತ, ಮಂಜು ಪಾವಗಡ, ಗಿರಿ ವಿನೋದ್, ಪವನ್ ಒಡೆಯರ್, ಸಿದ್ದು, ದೇಸಾಯಿಗೌಡ.
4) ಕದಂಬ ಲಯನ್ಸ್ - ವೃಷಾದ್ರಿ
ರಾಜೀವ (ನಾಯಕ), ಧನಂಜಯ್, ರಾಬಿನ್ ಉತ್ತಪ್ಪ, ಸಾಗರ್ ಗೌಡ, ಹರ್ಷ, ಪ್ರಮೋದ್, ಅನುಪ್ ಬಂಡಾರಿ, ಚಂದನ್, ತರುಣ್ ಸುದೀರ್, ನವೀನ್ ಸಜ್ಜು, ಪೃಥ್ವಿ ಅಂಬರ್, ಶಬರಿ, ಕರಿಬಸವ, ಸ್ವಸ್ತಿಕ್, ಮೋಹಿತ್.
5) ರಾಷ್ಟ್ರಕೂಟ ಪ್ಯಾಂಥರ್ಸ್ - ಗೀತಾ ಪಿಕ್ಚರ್ಸ್
ಪ್ರದೀಪ್ (ನಾಯಕ), ಶಿವಣ್ಣ, ಸುರೇಶ್ ರೈನಾ, ಸಂಜಯ್, ಅಭಿಷೇಕ್ ಬಾಡ್ಕರ್, ದಿಲೀಪ್ ಕೆಂಪೇಗೌಡ, ವಿಜಯ್, ಅರ್ಜುನ್ ಯೋಗಿ, ಸಂತೋಷ್, ಸೈಯದ್, ಪ್ರೀತಂ ಗುಬ್ಬಿ, ಕಿರಣ್ ಟಿವಿ9, ಅಭಿಲಾಷ್, ಸಾಗರ್ ಗುರುರಾಜ್, ಸಾಗರ್ ಬಿಳೇಗೌಡ, ಜಗದೀಶ್ ಚಂದ್ರ, ರಕ್ಷಿತ್ ಶಿವಕುಮಾರ್.
6) ಒಡೆಯರ್ ಚಾರ್ಜರ್ಸ್ - ರ್ಯಾಬಿಟ್ ರಿಯಲ್ ಸೌಂಡ್ ಮ್ಯಾಟರ್ಸ್
ವಿಕ್ರಾಂತ್ (ನಾಯಕ), ಉಪೇಂದ್ರ, ಎಸ್ ಬದರಿನಾಥ್, ವಿಶ್ವ, ರೇಣುಕ್, ರಾಜೇಶ್ ಗಾಂಧಿ, ವಿಜಯ್, ವ್ಯಾಸ, ಧರ್ಮ, ಪ್ರಸನ್ನ, ಸಿಂಪಲ್ ಸುನಿ, ಮನು ಅಯ್ಯಪ್ಪ, ಸಿನಿಲೋಕ ಸುನಿಲ್, ವಿವಾನ್, ವಿನಯ್ ಸಾಗರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications