Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಲ್ಮಾನ್ ಖಾನ್ or ಎಂಎಸ್ ಧೋನಿ: ಕೇದಾರ್ ಜಾಧವ್ ಫೇವರಿಟ್ ಯಾರು?

Kedar Jadhav Picks His Favourite Superstar Between Dhoni And Salman

ಟೀಮ್ ಇಂಡಿಯಾದ ಆಲ್‌ರೌಂರ್ ಕೇದಾರ್ ಜಾಧವ್ ಲಾಕ್‌ಡೌನ್ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಕೇದಾರ್ ಜಾಧವ್ ಉತ್ತರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮಧ್ಯೆ ಫೇವರೀಟ್ ವ್ಯಕ್ತಿ ಯಾರು ಎಂಬುದನ್ನು ಜಾಧವ್ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ಆಟಗಾರನಾಗಿರುವ ಕೇದಾರ್ ಜಾಧವ್ ಸಲ್ಮಾನ್ ಖಾನ್ ಮತ್ತು ಧೋನಿ ಮಧ್ಯೆ ಮಾಹಿ ಹೆಸರನ್ನು ಆಯ್ದುಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶವನ್ನು ಮಾಡಿಕೊಟ್ಟಿದ್ದು ಧೋನಿ ಇದಕ್ಕೆ ಆತನ ಹೆಸರನ್ನು ಆಯ್ದುಕೊಳ್ಳುತ್ತೇನೆ ಎಂದಿದ್ದಾರೆ.

ನನಗೆ ಇಬ್ಬರೂ ಸೂಪರ್ ಸ್ಟಾರ್‌ಗಳನ್ನು ಬೇರೆಬೇರೆಯಾಗಿ ನೋಡಲು ಸಾಧ್ಯವಿಲ್ಲ, ಆದರೆ ಧೋನಿ ಕಾರಣದಿಂದ ನಾನು ಕ್ರಿಕೆಟ್‌ ಆಡಲು ಅವಕಾಶವನ್ನು ಪಡೆದೆ ಮಾತ್ರವಲ್ಲ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲೂ ಮಾಹಿಯೇ ಕಾರಣ ಎಂದು ಕೇದಾರ್ ಜಾಧವ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್, ಧೊನಿ ಮತ್ತು ಸಲ್ಮಾನ್ ಖಾನ್ ಮಧ್ಯೆ ಒಬ್ಬರನ್ನು ಆಯ್ಕೆ ಮಾಡುವುದೆಂದರೆ ನನಗೆ ತಂದೆ ತಾಯಿ ಮಧ್ಯೆ ಒಬ್ಬನ್ನು ಆಯ್ಕೆ ಮಾಡು ಎಂಬ ಪ್ರಶ್ನೆಯಷ್ಟೇ ಕಠಿಣ, ತಂದೆ ಮತ್ತು ತಾಯಿ ಮಧ್ಯೆ ಯಾರನ್ನಾದರು ಒಬ್ಬರನ್ನು ಆಯ್ಕೆ ಮಾಡು ಅಂದರೆ ಅದು ನನ್ನ ಪಾಲಿಗೆ ಕಷ್ಟವಾದ ಪ್ರಶ್ನೆ ಎಂದು ಕೇದಾರ್ ಜಾಧವ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಬಗ್ಗೆಯೂ ಕೇದಾರ್ ಜಾಧವ್ ಹೇಳಿಕೊಂಡಿದ್ದಾರೆ. ಎಲ್ಲರಂತೆಯೇ ನಾನೂ ಕೂಡ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ನೋಡುತ್ತಾ ಬೆಳೆದವನು. ಆದರೆ ಅಂತಾ ಗ್ರೇಟ್ ಆಟಗಾರನೊಂದಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಇದು ನನಗೆ ಯಾವಾಗಲು ಕಾಡುತ್ತದೆ ಎಂದಿದ್ದಾರೆ ಕೇದಾರ್ ಜಾಧವ್

Story first published: Sunday, April 19, 2020, 9:57 [IST]
Other articles published on Apr 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+