ಕೇಕಿ ತಾರಾಪೋರ್ ಟು ಗೌತಮ್ ಗಂಭೀರ್; ಈವರೆಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಳು
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸ್ತುತ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಿದೆ.
ಟೀಮ್ ಇಂಡಿಯಾವನ್ನು 2024ರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಮಾರ್ಗದರ್ಶನ ಮಾಡಿದ ನಂತರ, ರಾಹುಲ್ ದ್ರಾವಿಡ್ ಅಧಿಕಾರಾವಧಿ ಅಂತ್ಯಗೊಂಡಿತು. ಈ ಮೂಲಕ ಮತ್ತೊಬ್ಬ ವಿಶ್ವಕಪ್ ಚಾಂಪಿಯನ್ ಗೌತಮ್ ಗಂಭೀರ್ ಅವರು ರಾಹುಲ್ ದ್ರಾವಿಡ್ ಅವರ ಪಾತ್ರವನ್ನು ವಹಿಸಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್ ಆರಂಭದಲ್ಲಿ ಎರಡು ವರ್ಷಗಳ ಒಪ್ಪಂದದ ಮೇಲೆ ನವೆಂಬರ್ 2021ರಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಂಡರು. 2023ರ ಏಕದಿನ ವಿಶ್ವಕಪ್ ನಂತರ ಅದನ್ನು 2024ರ ಟಿ20 ವಿಶ್ವಕಪ್‌ವರೆಗೆ ವಿಸ್ತರಿಸಲಾಯಿತು.
ಭಾರತ ತಂಡಕ್ಕೆ ಇದೀಗ 27ನೇ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಕಳೆದ ಹಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಭಾರತ ಕ್ರಿಕೆಟ್ ತಂಡದ ಮೊದಲ ಮುಖ್ಯ ಕೋಚ್ ಅನ್ನು 1971ರಲ್ಲಿ ನೇಮಿಸಲಾಯಿತು. ಭಾರತ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡುವ ಮೊದಲ ಜವಾಬ್ದಾರಿಯನ್ನು ಕೇಕಿ ತಾರಾಪೋರ್ ವಹಿಸಿಕೊಂಡರು.
ಇನ್ನು ಪಿಆರ್ ಮ್ಯಾನ್ ಅವರು 1983ರ ಐಸಿಸಿ ವಿಶ್ವಕಪ್ ಪ್ರಶಸ್ತಿಗೆ ಭಾರತ ತಂಡವನ್ನು ಮುನ್ನಡೆಸಿದ ಮೊದಲ ಮ್ಯಾನೇಜರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೋಚ್ ಆಗಿ ಅಲ್ಲದಿದ್ದರೂ, ಪಿಆರ್ ಮ್ಯಾನ್ ಆ ಪಾತ್ರದಲ್ಲಿ ಸೇವೆ ಸಲ್ಲಿಸಿದರು.
1992ರ ಹೊತ್ತಿಗೆ, ಭಾರತ ತನ್ನ ರಾಷ್ಟ್ರೀಯ ತಂಡದ ಕೋಚ್‌ಗಳನ್ನು ನಿರ್ದಿಷ್ಟ ಪ್ರವಾಸಗಳಿಗೆ ನೇಮಿಸುವ ಬದಲು ದೀರ್ಘ ಒಪ್ಪಂದಗಳನ್ನು ನೀಡುವ ನೀತಿಯನ್ನು ಅಳವಡಿಸಿಕೊಂಡಿತು. ಈ ಹೊಸ ವಿಧಾನದ ಅಡಿಯಲ್ಲಿ ಚಂದು ಬೋರ್ಡೆ ಮತ್ತು ಬಿಶನ್ ಸಿಂಗ್ ಬೇಡಿಯಂತಹ ಹಂಗಾಮಿ ವ್ಯವಸ್ಥಾಪಕರನ್ನು ಬದಲಾಯಿಸಲಾಯಿತು.
ಇದರ ಪರಿಣಾಮವಾಗಿ ಭಾರತ ರಾಷ್ಟ್ರೀಯ ತಂಡದ ತರಬೇತುದಾರರಾದ ಅಜಿತ್ ವಾಡೇಕರ್, ಸಂದೀಪ್ ಪಾಟೀಲ್, ಮದನ್ ಲಾಲ್ ಮತ್ತು ಇತರರನ್ನು ಹೆಚ್ಚು ವಿಸ್ತೃತ ಒಪ್ಪಂದಗಳೊಂದಿಗೆ ತರಲಾಯಿತು.
ಗಮನಾರ್ಹವಾಗಿ, ಕಪಿಲ್ ದೇವ್ ಅಲ್ಪಾವಧಿಗೆ ಕೋಚ್ ಆಗಿಯೂ ಸೇವೆ ಸಲ್ಲಿಸಿದರು. ಮನೋಜ್ ಪ್ರಭಾಕರ್ ಅವರು 1994ರ ಸರಣಿಯ ಸಂದರ್ಭದಲ್ಲಿ ಲಂಚ ನೀಡಲು ಪ್ರಯತ್ನಿಸಿದರು ಎಂದು ಆರೋಪಿಸಿದ ನಂತರ ಕಪಿಲ್ ದೇವ್ ರಾಜೀನಾಮೆ ನೀಡಿದರು.
ಭಾರತೀಯ ಕ್ರಿಕೆಟ್ ತಂಡದ ಕೋಚ್‌ಗಳ ಪಟ್ಟಿ
1) ಕೇಕಿ ತಾರಾಪೋರ್ - 1971 - ಭಾರತ
2) ಹೇಮು ಅಧಿಕಾರಿ - 1971-74 - ಭಾರತ
3) ಗುಲಾಬ್ರೈ ರಾಮಚಂದ್ - 1975 - ಭಾರತ
4) ದತ್ತಾ ಗಾಯಕ್ವಾಡ್ - 1978 - ಭಾರತ
5) ಸಲೀಂ ದುರಾನಿ - 1980-81 - ಭಾರತ
6) ಅಶೋಕ್ ಮಂಕಡ್ - 1982 - ಭಾರತ
7) ಪಿಆರ್ ಮಾನ್ ಸಿಂಗ್ (ಮ್ಯಾನೇಜರ್) - 1983-87 - ಭಾರತ
8) ಚಂದು ಬೋರ್ಡೆ - 1988 - ಭಾರತ
9) ಬಿಶನ್ ಸಿಂಗ್ ಬೇಡಿ - 1990-91 - ಭಾರತ
10) ಅಬ್ಬಾಸ್ ಅಲಿ ಬೇಗ್ - 1991-92 - ಭಾರತ
11) ಅಜಿತ್ ವಾಡೇಕರ್ - 1992-96 - ಭಾರತ
12) ಸಂದೀಪ್ ಪಾಟೀಲ್ - 1996 - ಭಾರತ
13) ಮದನ್ ಲಾಲ್ - 1996-97 - ಭಾರತ
14) ಅಂಶುಮಾನ್ ಗಾಯಕ್ವಾಡ್ - 1997-99 - ಭಾರತ
15) ಕಪಿಲ್ ದೇವ್ - 1999-2000 - ಭಾರತ
16) ಜಾನ್ ರೈಟ್ - 2000-05 - ನ್ಯೂಜಿಲೆಂಡ್
17) ಗ್ರೆಗ್ ಚಾಪೆಲ್ - 2005-07 - ಆಸ್ಟ್ರೇಲಿಯಾ
18) ರವಿಶಾಸ್ತ್ರಿ (ಮಧ್ಯಂತರ) - 2007 - ಭಾರತ
19) ಲಾಲಚಂದ್ ರಜಪೂತ್ - 2007-08 - ಭಾರತ
21) ಗ್ಯಾರಿ ಕರ್ಸ್ಟನ್ - 2008-11 - ದಕ್ಷಿಣ ಆಫ್ರಿಕಾ
22) ಡಂಕನ್ ಫ್ಲೆಚರ್ - 2011-15 - ಜಿಂಬಾಬ್ವೆ
23) ಸಂಜಯ್ ಬಂಗಾರ್ (ಮಧ್ಯಂತರ) - 2016 - ಭಾರತ
24) ಅನಿಲ್ ಕುಂಬ್ಳೆ - 2016-17 - ಭಾರತ
25) ಸಂಜಯ್ ಬಂಗಾರ್ - (ಮಧ್ಯಂತರ) - 2017 ಭಾರತ
26) ರವಿಶಾಸ್ತ್ರಿ - 2017-21 - ಭಾರತ
27) ರಾಹುಲ್ ದ್ರಾವಿಡ್ - 2021- ಭಾರತ
28) ಗೌತಮ್ ಗಂಭೀರ್ - 2024ರಿಂದ - ಭಾರತ
ಭಾರತ ತಂಡದ ಅತ್ಯಂತ ಯಶಸ್ವಿ ಕೋಚ್‌ಗಳು
ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರನ್ನು ಭಾರತ ತಂಡದ ಅತ್ಯಂತ ಯಶಸ್ವಿ ಕೋಚ್ ಎಂದು ಪರಿಗಣಿಸಲಾಗಿದೆ. ಅವರ ಕೋಚಿಂಗ್‌ನಲ್ಲಿ ಭಾರತ ತಂಡ 2011ರ ಏಕದಿನ ವಿಶ್ವಕಪ್ ಗೆದ್ದು, ಟೆಸ್ಟ್‌ನಲ್ಲಿ ನಂಬರ್ ಒನ್ ತಂಡವೆನಿಸಿತು.
2018ರಲ್ಲಿ ಭಾರತದ ಅಂಡರ್-19 ತಂಡವನ್ನು ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಯಶಸ್ಸಿನ ನಂತರ, ರಾಹುಲ್ ದ್ರಾವಿಡ್ ಅವರನ್ನು ಹಿರಿಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್ ತಲುಪಿತು ಮತ್ತು ಟಿ20, ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಭಾರತ ನಂಬರ್ ಒನ್ ತಂಡವೆನಿಸಿತು. ಅಲ್ಲದೆ, 2024ರ ಟಿ20 ವಿಶ್ವಕಪ್ ಟ್ರೋಫಿ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications