ಅಪ್ರಾಪ್ತ ಕ್ರಿಕೆಟ್ ಆಟಗಾರ್ತಿ ಮೇಲೆ ಲೈಂಗಿಕ ದೌರ್ಜನ್ಯ: ಕೇರಳದ ಕೋಚ್‌ಗೆ 35 ವರ್ಷ ಕಠಿಣ ಜೈಲು ಶಿಕ್ಷೆ
ತಿರುವನಂತಪುರಂ: ತರಬೇತಿಗಾಗಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ತಿರುವನಂತಪುರಂನ ವಿಶೇಷ ನ್ಯಾಯಾಲಯವು ಕ್ರಿಕೆಟ್ ತರಬೇತುದಾರನಿಗೆ 35 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 66,000 ರೂಪಾಯಿ ದಂಡ ವಿಧಿಸಿ ಗುರುವಾರ (ಜೂನ್ 25) ಮಹತ್ವದ ಆದೇಶವನ್ನು ನೀಡಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನು ವಲ್ಲಕ್ಕಡವು ಶ್ರೀವರಾಹಂ ನಿವಾಸಿ ಎಂ. ಮನು (40) ಶಿಕ್ಷೆಗೊಳಗಾದ ಕ್ರಿಕೆಟ್ ಕೋಚ್. ಕೋರ್ಟ್ ಈ ಆದೇಶದಲ್ಲಿ ದಂಡ ಪಾವತಿಸಲು ಕೋಚ್ ವಿಫಲರಾದರೆ, 6 ವರ್ಷ 9 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಅಂಜು ಮೀರಾ ಬಿರ್ಲಾ ಅವರ ನ್ಯಾಯಪೀಠ ಆದೇಶಿಸಿದೆ.

ನ್ಯಾಯಾಲಯದ ಆದೇಶ
ದಾಖಲಾಗಿರುವ 6 ಪ್ರಕರಣಗಳ ಪೈಕಿ ಈಗಾಗಲೇ 4 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಈಗಾಗಲೇ ಒಂದು ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಗುರುವಾರ ಎರಡನೇ ಪ್ರಕರಣದ ಶಿಕ್ಷೆ ಹೊರ ಬಿದ್ದಿದೆ. ಇನ್ನು ಮೂರನೇ ಪ್ರಕರಣದಲ್ಲೂ ಕೋಚ್‌ನನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ್ದು, ಅದಕ್ಕೆ ಸಂಬಂಧಿಸಿದ ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಲಿದೆ.
ಪ್ರಕರಣದ ಹಿನ್ನೆಲೆ
2018ರಲ್ಲಿ ಅಪ್ರಾಪ್ತ ಬಾಲಕಿ ತಿರುವನಂತಪುರಂನ ಕ್ರಿಕೆಟ್ ತರಬೇತಿ ಕೇಂದ್ರ ಸೇರಿದಳು. ಈ ವೇಳೆ ಕೋಚ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಬಾಲಕಿಯ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಇವುಗಳ ಸಹಾಯದಿಂದ ಆತ ಬಾಲಕಿಗೆ ಬೆದರಿಕೆ ಹಾಕುವುದು ಪೀಡಿಸುವುದನ್ನು ಮಾಡಿದ್ದಾನೆ. ಬಾಲಕಿಗೆ ಕೋಚ್ ಬೇಡಿಕೆಗಳನ್ನು ತಿರಸ್ಕರಿಸಿದಾಗ ಕ್ರಿಕೆಟ್ ತರಬೇತಿ ನೀಡದೆ ಸತಾಯಿಸುತ್ತಿದ್ದನು. ಇದರಿಂದ ಬೇಸತ್ತು ಬಾಲಕಿ 2019 ರಲ್ಲಿ ಬೇರೆಡೆಗೆ ತರಬೇತಿಗೆ ತೆರಳಿದ್ದಳು. ಈ ವಿಷಯವನ್ನು ಬೇರೆಯವರಿಗೆ ತಿಳಿಸಿದರೆ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡುವುದಾಗಿ ಕೋಚ್ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಆರೋಪಿ ಕೋಚ್ ಮನು ತರಬೇತಿಗೆ ಬರುತ್ತಿದ್ದ ಐದು ಬಾಲಕಿಯರ ಮೇಲೂ ಇದೇ ರೀತಿ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆದರೆ ಇತನ ಬಗ್ಗೆ ಬಾಲಕಿಯರು ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಆದರೆ 2024ರಲ್ಲಿ ತಿರುವನಂತಪುರಂನಲ್ಲಿ ನಡೆದ ಹುಡುಗಿಯರ ಕ್ರಿಕೆಟ್ ಟೂರ್ನಿಯಲ್ಲಿ ಮನುವನ್ನು ಕಂಡು, ಸಂತ್ರಸ್ತ ಬಾಲಕಿ ಹೆದರಿ ಜೋರಾಗಿ ಚೀರಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಕೋಚ್ ಮನು ಕಂಡು ಸಂತ್ರಸ್ತ ಬಾಲಕಿ ದೂರು ನೀಡಿದ ಬೆನ್ನಲ್ಲೆ, ದೌರ್ಜನ್ಯಕ್ಕೆ ಒಳಗಾದ ಬಾಲಕಿಯರೂ ಸಹ ದೂರು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications