ಕೆಸ್ರಿಕ್ ವಿಲಿಯಮ್ಸ್ ''ಶ್ಶ್ '' ಅಂದಿದ್ದು ಕೊಹ್ಲಿ ಭಯಕ್ಕೋ, ಅಥವಾ ಮತ್ತೆ ಅಣಕವೋ!

ಇತ್ತೀಚೆಗೆ ಬೌಲರ್‌ಗಳು ವಿಕೆಟ್ ಪಡೆದಾಗ ವಿಶಿಷ್ಟವಾಗಿ ಸಂಭ್ರಮಿಸುವುದು ಸಾಮಾನ್ಯ. ಅದರಲ್ಲೂ ವೆಸ್ಟ್ ಇಂಡೀಸ್ ಬೌಲರ್‌ಗಳು ಇದರಲ್ಲೂ ಇನ್ನೂ ಒಂದು ಕೈ ಮೇಲು. ಆದರೆ ಭಾರತದ ಮೊದಲ ಟಿ20 ಪಂದ್ಯದಲ್ಲಿ ವಿಂಡಿಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಎಸೆತವನ್ನು ಬೌಂಡರಿಗೆ ಅಟ್ಟಿ ಸಹಿ ಹಾಕುವಂತೆ ಅಣಕಿಸಿ ಹಿಂದಿನ ಸೇಡು ತೀರಿಸಿಕೊಂಡಿದ್ದರು ವಿರಾಟ್ ಕೊಹ್ಲಿ.
ನಿನ್ನೆಯ ಪಂದ್ಯದ ವೇಳೆ ಅದೇ ಕೆಸ್ರಿಕ್ ವಿಲಿಯಮ್ಸ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಆದರೆ ಸಂಭ್ರಮಿಸಿ ವಿರಾಟ್ ಕೊಹ್ಲಿಯನ್ನು ಅಣಕಿಸಬಹುದು ಎಂದು ಅಂದುಕೊಂಡಿದ್ದವರಿಗೆ ಕೆಸ್ರಿಕ್ ವರ್ತನೆ ಮತ್ತೆ ನಗು ತರಿಸಿತ್ತು. ಅದಕ್ಕೆ ಕಾರಣ ವಿಕೆಟ್ ಪಡೆದಾಕ್ಷಣ ಕೆಸ್ರಿಕ್ 'ಶ್ಶ್' ಸನ್ನೆಮಾಡಿ ಯಾರೂ ಸಂಭ್ರಮಿಸಬೇಡಿ ಎಂದು ಎಂದು ಸಂದೇಶ ರವಾನಿಸಿದರು.
ಸಹಜವಾಗಿಯೇ ಈ ವರ್ತನೆ ಕಳೆದ ಪಂದ್ಯದಲ್ಲಿ ಕೊಹ್ಲಿ ಅಬ್ಬರಕ್ಕೆ ಬೆದರಿರಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಆದರೆ ಈ ರೀತಿ ಕೆಸ್ರಿಕ್ ವರ್ತಿಸಿದ್ದು ಮತ್ತೆ ಕೊಹ್ಲಿಯನ್ನು ಕೆಣಕಿದ್ದಾರ ಅನ್ನೋ ಅನುಮಾನ ಹುಟ್ಟಿಸಿದೆ. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ.
ವಿರಾಟ್ ಕೊಹ್ಲಿ ಈ ಹಿಂದೆ ಟೆಸ್ಟ್‌ನಲ್ಲಿ ಬೌಲರ್ ವಿಕೆಟ್ ಪಡೆದು ಸಂಭ್ರಮಿಸುವ ಸಂದರ್ಭದಲ್ಲಿ ಇದೇ ರೀತಿ ಸೈಲಂಟ್ ಸನ್ನೆಯನ್ನು ಮಾಡಿದ್ದರು. ಅದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆ ಸೆಲೆಬ್ರೇಷನ್‌ಅನ್ನು ಅಣಕಿಸಿ ಕೊಹ್ಲಿಗೆ ಮತ್ತೆ ತಿರುಗೇಟು ಕೊಟ್ರಾ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.
ಈ ಸಂಭ್ರಮವನ್ನು ಕೊಹ್ಲಿ ಹೇಗೆ ಸ್ವೀಕರಿಸಿದ್ದಾರೆ ಅನ್ನುವ ಕುತೂಹಲವಿದೆ. ಇದಕ್ಕೆ ಮುಂದಿನ ಪಂದ್ಯದಲ್ಲಿ ಕೊಹ್ಲಿಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಅನ್ನುವುದು ಕೂಡ ಕುತೂಹಲಕಾರಿ ವಿಚಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications