ತವರು ದೇಶಕ್ಕೆ ಮರಳಲು ಕೆವಿನ್ ಪೀಟರ್ಸನ್ ಇಚ್ಛೆ
ಲಂಡನ್, ಜುಲೈ 20: 40 ವರ್ಷ ವಯಸ್ಸಿನಲ್ಲಿ ಮತ್ತೊಮ್ಮೆ ಕ್ರಿಕೆಟ್ ಇನ್ನಿಂಗ್ಸ್ ಆರಂಭಿಸಲು ಕ್ರಿಕೆಟರ್ ಕೆವಿನ್ ಪೀಟರ್ಸನ್ ಇಚ್ಛಿಸಿದ್ದಾರೆ. ಆದರೆ, ಇಂಗ್ಲೆಂಡ್ ಬದಲಿಗೆ ತಮ್ಮ ತವರು ದೇಶ ದಕ್ಷಿಣ ಆಫ್ರಿಕಾ ಪರ ಬ್ಯಾಟ್ ಬೀಸಲು ಮುಂದಾಗಿದ್ದಾರೆ.
2013-14ರ ಆಷ್ಯಸ್ ಸರಣಿ ಸೋಲಿನ ನಂತರ ಇಂಗ್ಲೆಂಡ್ ತಂಡಕ್ಕೆ ಮತ್ತೆ ಆಯ್ಕೆಯಾಗಿಲ್ಲ. ಈಗ 2019ರಲ್ಲಿ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡಲು ಕೆವಿನ್ ಬಯಸಿದ್ದಾರೆ.

'ಮುಂದಿನ ಎರಡು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿ ನಾನು ಹೆಚ್ಚೆಚ್ಚು ಕ್ರಿಕೆಟ್ ಆಡುತ್ತೇನೆ. ಇನ್ನೆರಡು ವರ್ಷಗಳಲ್ಲಿ ಅಲ್ಲೇ ಕ್ರಿಕೆಟ್ ವೃತ್ತಿ ಮುಂದುವರೆಸುವ ಸಾಧ್ಯತೆಯಿದೆ' ಎಂದು 37 ವರ್ಷ ವಯಸ್ಸಿನ ಕ್ರಿಕೆಟರ್ ಕೆವಿನ್ ಹೇಳಿದ್ದಾರೆ.
ಓವಲ್ ಮೈದಾನದಲ್ಲಿ 24 ಸಾವಿರ ಪ್ರೇಕ್ಷಕರ ಎದುರಿನಲ್ಲಿ ನಡೆದ ಎಸೆಕ್ಸ್ ಹಾಗೂ ಸರೆ ನಡುವಿನ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಕೆವಿನ್ ಅವರು ಸರೆ ತಂಡಕ್ಕೆ 10 ರನ್ ಗಳ ಅಮೋಘ ಜಯ ತಂದಿತ್ತರು. ಕೆವಿನ್ ಬಾರಿಸಿದ 35 ಎಸೆತಗಳಲ್ಲಿ 52 ರನ್ (4 ಸಿಕ್ಸರ್) ನೆರವಿನಿಂದ ಸರೆ 150/9 ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಎಸೆಕ್ಸ್ 140/7 ಮಾತ್ರ ಗಳಿಸಿ ಸೋಲೊಪ್ಪಿಕೊಂಡಿದೆ.(ಎಎಫ್ ಪಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications