For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ದಾರಿ ತೋರಿದ್ದು ಪೀಟರ್ಸನ್: ಬೆನ್ ಸ್ಟೋಕ್ಸ್

Kevin Pietersen paved the way for England players in IPL, Explains Ben Stokes

ವಿಶ್ವದ ಅತಿ ಜನಪ್ರಿಯ ಕ್ರಿಕೆಟ್ ಲೀಗ್ ಅಂದರೆ ಅದು ಐಪಿಎಲ್. ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರ ಜೊತೆಗೆ ವಿಶ್ವ ಕ್ರಿಕೆಟ್‌ನ ಖ್ಯಾತನಾಮರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೋಚಕ ಹಣಾಹಣಿಗೆ ಸಾಕ್ಷಿಯಾಗುವ ಈ ಕಾದಾಟ ಅಭಿಮಾನಿಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುತ್ತಿದೆ. ಬಹುಕೋಟಿ ಮೊತ್ತದ ಈ ಟೂರ್ನಿಯಲ್ಲಿ ವಿದೇಶಿ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಲ್ಳುತ್ತಿರುವ ಕಾರಣ ವಿದೇಶದಲ್ಲೂ ಇದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಆರಂಭಿಕ ಆವೃತ್ತಿಯ ಸಂದರ್ಭದಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ನಿಯಮ ಐಪಿಎಲ್‌ನಲ್ಲಿ ಅಲ್ಲಿನ ಆಟಗಾರರು ಪಾಲ್ಗೋಳ್ಳುವುದಕ್ಕೆ ವಿರುದ್ಧವಾಗಿತ್ತು. ಆದರೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಅವರ ಪ್ರಭಾವವೇ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಕಾರಣ ಎಂಬುದನ್ನು ಹೇಳಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್ ಹೀಗೆ ಹೇಳಲು ಕಾರಣವೂ ಇದೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಪಾಲ್ಗೋಳ್ಳಬೇಕಾದರೆ ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳ ನಿರಪೇಕ್ಷಣಾ ಪತ್ರ ಕಡ್ಡಾಯವಾಗಿತ್ತು, ಆದರೆ ಈ ಪತ್ರಕ್ಕೆ ಸಹಿ ಹಾಕಲು ಇಂಗ್ಲೆಂಡ್ ಮಂಡಳಿ ಒಪ್ಪಿರಲಿಲ್ಲ. ಇದನ್ನು ಸಾಧ್ಯವಾಗಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್. ಬಳಿಕ ಪ್ರತಿ ಆವೃತ್ತಿಯಲ್ಲೂ ಇಂಗ್ಲೆಂಡ್‌ನ ಹಲವಾರು ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

"ನಾವು ಕೆವಿನ್ ಪೀಟರ್‌ಸನ್ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದ ದಿನಗಳತ್ತ ಗಮನಿಸ ಬೇಕು. ಯಾಕೆಂದರೆ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಲಲು ದಾರಿ ಮಾಡಿಕೊಟ್ಟದ್ದು ಕೆವಿನ್ ಪೀಟರ್‌ಸನ್. ಇಂಗ್ಲೆಂಡ್ ಒಪ್ಪಂದ ಪದ್ದತಿಯ ಕಾರಣದಿಂದಾಗಿ ಅದು ಸಾಕಷ್ಟು ಸೂಕ್ಷ್ಮವಾಗಿದ್ದ ವಿಚಾರವಾಗಿತ್ತು. ಆ ಬಗ್ಗೆ ಪೀಟರ್‌ಸನ್ ಧ್ವನಿಯೆತ್ತಿದ್ದರು" ಎಂದು ಪೀಟರ್‌ಸನ್ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

"ಅಂದು ಕೆವಿನ್ ಪೀಟರ್‌ಸನ್ ಈ ಬಗ್ಗೆ ಧ್ವನಿ ಎತ್ತಿರದಿದ್ದರೆ ಇಂದು ಇಷ್ಟು ಪ್ರಮಾಣದಲ್ಲಿ ಇಂಗ್ಲೀಷ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ" ಎಂದು ಬೆನ್ ಸ್ಟೋಕ್ಸ್ ವಿವರಿಸಿದ್ದಾರೆ

Story first published: Saturday, October 31, 2020, 9:50 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+