For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಕಾಮೆಂಟರಿ ತ್ಯಜಿಸಿದ್ದಕ್ಕೆ ಕಾರಣ ಹೇಳಿದ ಕೆವಿನ್ ಪೀಟರ್ಸನ್

Kevin Pietersen Reveals the reason behind to leave IPL Commentary half way

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗೆ ಕಾಮೆಂಟರಿ ನೀಡುತ್ತಿದ್ದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಟೂರ್ನಿ ಮಧ್ಯದಿಂದಲೇ ಕಾಮೆಂಟರಿಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣವೇನೆಂದು ಸ್ವತಃ ಪೀಟರ್ಸನ್ ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್ 19ರಿಂದ ಆರಂಭಗೊಂಡಿರುವ 2020ರ ಐಪಿಎಲ್‌ನ 31 ಪಂದ್ಯಗಳ ಈಗಾಗಲೇ ಮುಗಿದಿವೆ. ನವೆಂಬರ್ 10ರ ವರೆಗೂ ಟೂರ್ನಿ ನಡೆಯಲಿದೆ. ಆದರೆ ಈ ಮಧ್ಯೆಯೇ ಪೀಟರ್ಸನ್ ಕಾಮೆಂಟರಿಯಿಂದ ದೂರ ಉಳಿದಿದ್ದು ಕ್ರಿಕೆಟ್ ಪ್ರಿಯರನ್ನು ಅಚ್ಚರಿಗೀಡುಮಾಡಿತ್ತು. ಪೀಟರ್ಸನ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ಪೀಟರ್ಸನ್, 'ಐಪಿಎಲ್‌ ಅನ್ನು ಅರ್ಧದಲ್ಲೇ ತ್ಯಜಿಸಿದ್ದೇನೆ ಯಾಕೆಂದರೆ ನನ್ನ ಮಕ್ಕಳಿಗಾಗಿ ನಾನು ಮನೆಯಲ್ಲಿರಬೇಕಾಗಿದೆ. ಇದೊಂಥರಾ ವಿಚಿತ್ರ ವರ್ಷ. ಹೀಗಾಗಿ ಅವರಿಗೀಗ ಶಾಲೆಯಿಲ್ಲ. ಆದ್ದರಿಂದ ಪ್ರತಿದಿನವೂ ನಾನು ಅವರ ಜೊತೆ ಇರಬೇಕಾಗಿದೆ,' ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಪರ ಪೀಟರ್ಸನ್ 104 ಟೆಸ್ಟ್ ಪಂದ್ಯಗಳಲ್ಲಿ 8181 ರನ್, 136 ಏಕದಿನ ಪಂದ್ಯಗಳಲ್ಲಿ 4440 ರನ್, 37 ಟಿ20ಐ ಪಂದ್ಯಗಳಲ್ಲಿ 1176 ರನ್ ಬಾರಿಸಿದ್ದಾರೆ. 36 ಐಪಿಎಲ್ ಪಂದ್ಯಗಳನ್ನಾಡಿರುವ ಪೀಟರ್ಸನ್ 1001 ರನ್ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.

Story first published: Friday, October 16, 2020, 16:28 [IST]
Other articles published on Oct 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+