Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

100 ಮೀಟರ್‌ಗಿಂತ ಉದ್ದದ ಸಿಕ್ಸ್ ಬಾರಿಸಿದರೆ ಅಧಿಕ ರನ್ಸ್ ; ಬರಲಿದೆಯಾ ಈ ಹೊಸ ರೂಲ್ಸ್?

Kevin Pietersen wants the ICC to introduce a ’12-run’ rule in T20I cricket

ಕ್ರಿಕೆಟ್ ಜಗತ್ತು ಕಂಡ ಪ್ರಖ್ಯಾತ ಕ್ರಿಕೆಟಿಗರುಗಳಲ್ಲಿ ಒಬ್ಬರಾದ ಕೆವಿನ್ ಪೀಟರ್ಸನ್ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಹೊಸ ಬದಲಾವಣೆಯನ್ನು ಬಯಸಿ ತಮ್ಮ ಹೊಸ ಚಿಂತನೆಯೊಂದನ್ನು ಹಂಚಿಕೊಂಡಿದ್ದಾರೆ. ಕೆವಿನ್ ಪೀಟರ್ಸನ್ ಟಿ ಟ್ವೆಂಟಿ ಪಂದ್ಯಗಳಲ್ಲಿ 12 ರನ್‌ಗಳ ಹೊಸತನವನ್ನು ತರಬೇಕು ಎಂದು ಮನವಿ ಮಾಡಿದ್ದಾರೆ.

ಹೌದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 12 ರನ್‌ಗಳ ಹೊಸ ನಿಯಮವನ್ನು ಜಾರಿಗೆ ತರಬೇಕೆಂದು ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಟ್ವಿಟರ್ ಮೂಲಕ ಬೇಡಿಕೆಯೊಂದನ್ನು ಸಲ್ಲಿಸಿದ್ದಾರೆ. ಟಿ ಟ್ವೆಂಟಿ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ 100 ಮೀಟರ್‌ಗಿಂತ ಉದ್ದದ ಸಿಕ್ಸರ್ ಬಾರಿಸಿದರೆ ಅದನ್ನು ಸಿಕ್ಸ್ ಬದಲು 12 ರನ್ ಎಂದು ಪರಿಗಣಿಸಬೇಕೆಂದು ಕೆವಿನ್ ಪೀಟರ್ಸನ್ ಮನವಿ ಮಾಡಿದ್ದಾರೆ.

ಪೀಟರ್ಸನ್ ಹೇಳಿದಂತೆ 100 ಮೀಟರ್‌ಗಿಂತ ಉದ್ದದ ಸಿಕ್ಸರ್ ಬಾರಿಸುವುದು ಸುಲಭದ ಮಾತಲ್ಲ. ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಪರಿಗಣಿಸಿದರೆ ಟೂರ್ನಿಯಲ್ಲಿ ಇದುವರೆಗೂ 21 ಪಂದ್ಯಗಳು ಮುಗಿದಿದ್ದು, ಇದರಲ್ಲಿ ದಾಖಲಾಗಿರುವ 100ಮೀಟರ್ ಅಥವಾ 100 ಮೀಟರ್‌ಗಿಂತ ಉದ್ದದ ಸಿಕ್ಸ್‌ಗಳ ಸಂಖ್ಯೆ ಕೇವಲ 2. ಹೌದು ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್ 105 ಮೀಟರ್‌ ಉದ್ದದ ಸಿಕ್ಸರ್ ಸಿಡಿಸಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ 100 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಬೇರೆ ಯಾವುದೇ ಆಟಗಾರರು ಸಹ 100 ಮೀ. ಸಿಕ್ಸ್ ಬಾರಿಸಲು ಆಗಿಲ್ಲ.

ಪ್ರಸ್ತುತ ಐಪಿಎಲ್ ಟೂರ್ನಿಯ ಈ ಅಂಕಿ ಅಂಶಗಳನ್ನು ಗಮನಿಸಿದರೆ ಕೆವಿನ್ ಪೀಟರ್ಸನ್ ಆಲೋಚನೆ ಉತ್ತಮವಾದದ್ದು ಎನಿಸದೆ ಇರಲಾರದು. ಇನ್ನು ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಸಹ 100 ಮೀಟರ್‌ಗಿಂತ ಉದ್ದದ ಸಿಕ್ಸ್‌ಗಳನ್ನು ಬ್ಯಾಟ್ಸ್‌ಮನ್‌ಗಳು ಹೆಚ್ಚಾಗಿ ಬಾರಿಸುವುದು ಕಷ್ಟ. ಹೀಗಾಗಿ ಮುಂಬರುವ ದಿನಗಳಲ್ಲಿ ಕೆವಿನ್ ಪೀಟರ್ಸನ್ ಅವರ ಮನವಿಯಂತೆ 100 ಮೀಟರ್‌ಗಿಂತ ಉದ್ದದ ಸಿಕ್ಸ್ ಬಾರಿಸಿದರೆ 12 ರನ್ ಎಂಬ ನಿಯಮ ಜಾರಿಯಾಗುತ್ತಾ ಕಾದು ನೋಡಬೇಕು.

Story first published: Tuesday, April 27, 2021, 15:17 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+