For Quick Alerts
ALLOW NOTIFICATIONS  
For Daily Alerts
 

2023ರಲ್ಲಿ ಟೀಮ್ ಇಂಡಿಯಾದ ಗೆಲುವಿನ ಹೀರೋಗಳು ಇವರು

By ನಾಗೇಶ್

ಪ್ರಸಕ್ತ ವರ್ಷ ಕ್ರಿಕೆಟ್‌ ಪ್ರಿಯರಿಗೆ ಹಬ್ಬದೂಟ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಹಾಗೂ ಭಾರತದಲ್ಲಿ ಏಕದಿನ ವಿಶ್ವಕಪ್ ಗಳು ನಡೆಯಲಿವೆ. 2023ರಲ್ಲಿ ಭಾರತ ತಂಡ ಇದುವರೆಗೂ ಉತ್ತಮ ಪ್ರದರ್ಶನವನ್ನೇ ನೀಡಿದೆ. ಏಕದಿನ ಮಾದರಿಯಲ್ಲಿ ತವರಿನಲ್ಲಿ ನಡೆದ ಸರಣಿಗಳನ್ನು ಗೆದ್ದಿದೆ, ವೆಸ್ಟ್ ಇಂಡೀಸ್‌ನಲ್ಲಿ ನಡೆದ ಸರಣಿಯನ್ನು ಕೂಡ ಗೆದ್ದು, ಏಷ್ಯಾಕಪ್‌ಗೆ ಸಿದ್ಧವಾಗುತ್ತಿದೆ.

ಈ ವರ್ಷ ಭಾರತದ ಪರವಾಗಿ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ತಂಡದ ರೇಸ್‌ನಲ್ಲಿದ್ದಾರೆ. ಪ್ರಮುಖ ಆಟಗಾರರು ಗಾಯಗೊಂಡ ಬಳಿಕ ಹಲವು ಯುವ ಪ್ರತಿಭೆಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

key-players-for-team-india-in-2023

ಪ್ರಸಕ್ತ ವರ್ಷ ಹಿರಿಯರು ಹಾಗೂ ಯುವ ಆಟಗಾರರು ಭರ್ಜರಿ ಫಾರ್ಮ್‌ಗೆ ಬಂದಿದ್ದಾರೆ. ಇನ್ನು ಟೀಮ್ ಇಂಡಿಯಾದ ಬಾಗಿಲು ಮುಚ್ಚಿಯೇ ಬಿಟ್ಟಿದೆ, ಎಂದು ತಿಳಿದುಕೊಂಡಿದ್ದ ಆಟಗಾರರು ಸಹ ಭರ್ಜರಿ ಪ್ರದರ್ಶನ ನೀಡಿ ಕಮ್ ಬ್ಯಾಕ್ ಮಾಡಿದ್ದಾರೆ. ಈ ಆಟಗಾರರ ಪ್ರದರ್ಶನ ನಿಶ್ಚಿತವಾಗಿ ಎದುರಾಳಿ ತಂಡದ ನಿದ್ದೆಯನ್ನು ಗೆಡಿಸಿದೆ. ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಶುಭಮನ್‌ ಗಿಲ್.

ಶುಭಮನ್ ಗಿಲ್ ಭರ್ಜರಿ ಪ್ರದರ್ಶನ

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದ ಶುಭಮನ್‌ ಗಿಲ್‌, ಈ ಬಾರಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬ್ಯಾಟ್‌ ಮಾಡಿರುವ ಶುಭಮನ್‌ ಗಿಲ್‌ ಆರ್ಭಟಿಸಿದ್ದಾರೆ.

ಗಿಲ್‌ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಸಾಧನೆ ಮಾಡಿದ್ದಾರೆ. ಈ ಮೂಲಕ ಎಲೈಟ್‌ ಗ್ರೂಪ್ ಸಹ ಸೇರಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲಿ ಪ್ರಸಕ್ತ ವರ್ಷ ಗರಿಷ್ಠ ರನ್‌ ಕಲೆ ಹಾಕಿದ ಭಾರತೀಯ ಆಟಗಾರ ಎಂಬ ಶ್ರೇಯ್ ಇವರಿಗೆ ಸಲ್ಲುತ್ತದೆ. ಶುಭಮನ್‌ 68.18ರ ಸರಾಸರಿಯಲ್ಲಿ ಈ ವರ್ಷ 750 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸಹ ಸೇರಿವೆ.

ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್

ಇನ್ನು ಗರಿಷ್ಠ ರನ್ ಸಾಧಕರಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಇವರು ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್‌, ವಿಶ್ವಕಪ್‌ಗೂ ಮುನ್ನ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದಾರೆ. 2023ರಲ್ಲಿ ವಿರಾಟ್‌ 53.37ರ ಸರಾಸರಿಯಲ್ಲಿ 2 ಶತಕ ಸೇರಿದಂತೆ, 427 ರನ್ ಬಾರಿಸಿದ್ದಾರೆ.

ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಗರಿಷ್ಠ ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲಿದ್ದಾರೆ. ಇವರು 47.87ರ ಸರಾಸರಿಯಲ್ಲಿ 383 ರನ್ ಸೇರಿಸಿದ್ದು, ಇದರಲ್ಲಿ ಒಂದು ಶತಕ ಸಹ ಸೇರಿದೆ. ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಇದ್ದು, ಇವರು 226 ರನ್ ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಮಿಂಚಿದ್ಯಾರು?

ಇನ್ನು ಬೌಲಿಂಗ್‌ನಲ್ಲೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಕುಲ್‌ದೀಪ್ ಯಾದವ್. ಅಂತಾರಾಷ್ಟ್ರೀಯ ವೃತ್ತಿ ಬದುಕು ಮುಗಿದೇ ಬಿಟ್ಟಿತಾ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗಲೇ ಇವರಿಗೆ ಅವಕಾಶ ಒಂದು ಲಭಿಸಿತು. ಪ್ರಸಕ್ತ ವರ್ಷ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧಕರ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ. ಕುಲ್‌ದೀಪ್‌ ಏಕದಿನ ಪಂದ್ಯಗಳಲ್ಲಿ ಒಟ್ಟು 22 ವಿಕೆಟ್ ಕಬಳಿಸಿದ್ದು, 4.87ರ ಸರಾಸರಿ ಹೊಂದಿದ್ದಾರೆ.

ಮೊಹಮ್ಮದ್ ಸಿರಾಜ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬರೀ ಟೆಸ್ಟ್‌ ಪಂದ್ಯಗಳಿಗೆ ಸೀಮಿತವಾಗಿದ್ದ ಸಿರಾಜ್‌, ಬ್ಲ್ಯೂ ಜೆರ್ಸಿ ತೊಡುವ ಅವಕಾಶ ಲಭಿಸಿದಾಗ ಶಿಸ್ತು ಬದ್ಧ ದಾಳಿ ಸಂಘಟಿಸಿದರು. ಇವರು ಒಟ್ಟಾರೆ 4.61ರ ಎಕನಾಮಿಯಲ್ಲಿ ಒಟ್ಟು 19 ವಿಕೆಟ್ ಪಡೆದಿದ್ದಾರೆ. ಗರಿಷ್ಠ ವಿಕೆಟ್‌ ಪಡೆದ ಸಾಧಕರ ಪಟ್ಟಿಯಲ್ಲಿ ಶಾರ್ದೂಲ್‌ ಠಾಕೂರ್‌ಗೂ ಸ್ಥಾನ ನೀಡಲಾಗಿದೆ. ಶಾರ್ದೂಲ್‌ 14 ವಿಕೆಟ್‌ ಗಳನ್ನು ಪಡೆದು ಬೀಗಿದ್ದಾರೆ.

ಟೀಮ್ ಇಂಡಿಯಾ ಈ ಏಳು ಸ್ಟಾರ್‌ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದ್ದು, ವಿಶ್ವಕಪ್‌ನಲ್ಲಿ ಯಾರು ಹೀರೋ ಆಗಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿವೆ.

Story first published: Thursday, August 17, 2023, 13:08 [IST]
Other articles published on Aug 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+