ಸಿಪಿಎಲ್: ಖಾರಿ ಪಿಯರೆ ಆಕರ್ಷಕ ಆಟ, ನೈಟ್ ರೈಡರ್ಸ್ ನಿಲ್ಲದ ಗೆಲುವಿನೋಟ

ಪೋರ್ಟ್ ಆಫ್ ಸ್ಪೇನ್: ಖಾರಿ ಪಿಯರೆ ಮಾರಕ ಬೌಲಿಂಗ್ ನೆರವಿನಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 16ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಟ್ರಿನ್‌ಬಾಗೊ ನೈಟ್ ರೈಡರ್ಸ್ 7 ವಿಕೆಟ್ ಗೆಲುವು ದಾಖಲಿಸಿದೆ. ಇದರೊಂದಿಗೆ ನೈಟ್ ರೈಡರ್ಸ್ ಸೋಲಿಲ್ಲದ ಸರದಾರನಾಗಿ ಟೂರ್ನಿಯಲ್ಲಿ ಮುನ್ನಡೆದಿದೆ.
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗಯಾನಾ ಅಮೆಜಾನ್ ವಾರಿಯರ್ಸ್, ಶಿಮ್ರನ್ ಹೆಟ್ಮೈಯರ್ 26, ರಾಸ್ ಟೇಲರ್ 26, ಕೀಮೋ ಪೌಲ್ 28 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 112 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಿಂದ ಲೆಂಡ್ಲ್ ಸಿಮನ್ಸ್ 19, ಟಿಯೋನ್ ವೆಬ್‌ಸ್ಟರ್ 27, ಡ್ಯಾರೆನ್ ಬ್ರಾವೋ 26, ಟಿಮ್ ಸೀಫರ್ಟ್ 39 ರನ್ ಸೇರಿಸಿದರು. ನೈಟ್ ರೈಡರ್ಸ್ 18.2 ಓವರ್‌ನಲ್ಲಿ 3 ವಿಕೆಟ್ ಕಳೆದು 115 ಗುರಿ ತಲುಪಿತು.
ಅಮೆಜಾನ್ ವಾರಿಯರ್ಸ್ ಇನ್ನಿಂಗ್ಸ್‌ನಲ್ಲಿ ನೈಟ್ ರೈಡರ್ಸ್‌ನ ಎಡಗೈ ವೇಗಿ ಖಾರಿ ಪಿಯರೆ 18 ರನ್‌ಗೆ 3 ವಿಕೆಟ್ ಪಡೆದು ಗಮನ ಸೆಳೆದರು. ಪಿಯರೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಈ ಗೆಲುವಿನೊಂದಿಗೆ ನೈಟ್ ರೈಡರ್ಸ್ ಆಡಿದ ಐದು ಪಂದ್ಯಗಳಲ್ಲಿ ಐದರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications