Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಪ್ರವಾಸಕ್ಕೆ ಪ್ರಾಥಮಿಕ ತಂಡವನ್ನು ಆಯ್ಕೆ ಮಾಡಿದ ಆಸ್ಟ್ರೇಲಿಯಾ

Khawaja, Stoinis Named In Preliminary Squad For England Tour

ಆಸ್ಟ್ರೇಲಿಯಾ ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಕೊರೊನಾ ವೈರಸ್ ಬಳಿಕದ ತನ್ನ ಮೊದಲ ಪ್ರವಾಸವನ್ನು ನಡೆಸಲಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕ ತಂಡವನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ಕೆಲ ಪ್ರಮುಖ ಹೆಸರುಗಳು ಮತ್ತೆ ಕಾಣಿಸಿಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ 26 ಆಟಗಾರರ ತಂಡವನ್ನು ಆಸ್ಟ್ರೇಲಿಯಾ ಆಯ್ಕೆ ಮಾಡಿದೆ. ಕಳೆದ ಒಂದು ವರ್ಷದಿಂದ ಉಸ್ಮಾನ್ ಖವಾಜ ಹಾಗೂ ಮಾರ್ಕಸ್ ಸ್ಟೋನಿಸ್ ತಂಡದಿಂದ ಹೊರಗುಳಿದಿದ್ದರು. ಈಗ ಪ್ರಾಥಮಿಕ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಋತುವಿನ ರಾಷ್ಟ್ರೀಯ ಒಪ್ಪಂದವನ್ನೂ ಈ ಇಬ್ಬರು ಆಟಗಾರರು ಕಳೆದುಕೊಂಡಿದ್ದರು.

ಈ ಪ್ರಾಥಮಿಕ ತಂಡದಲ್ಲಿರುವ ಮತ್ತೊಂದು ಅಚ್ಚರಿಯ ಹೆಸರೆಂದರೆ ಹಿರಿಯ ವೇಗದ ಬೌಲರ್ ಅಂಡ್ರೋ ಟೈ. ಹಲವು ವರ್ಷಗಳಿಂದ ತಂಡದಿಂದ ದೂರವಿದ್ದ ಟೈ 26 ಆಟಗಾರರ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇನ್ನು ಕಳೆದ ವಿಶ್ವಕಪ್ ತಂಡದಲ್ಲಿ ಕಾಣಿಸಿಕಿಂಡು ಬಳಿಕ ಹೊರಬಿದ್ದಿದ್ದ ಆಟಗಾರರಾದ ಶಾನ್ ಮಾರ್ಶ್ ಹಾಗೂ ನಥನ್ ಕೌಂಟರ್‌ನೈಲ್ ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೀಟರ್ ಹ್ಯಾಂಡ್ಸ್‌ಕೋಬ್‌ ಕೂಡ ಇದ್ದಾರೆ. ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಇನ್ನಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಬೇಕಾದ ಕೆಲ ಯುವ ಕ್ರಿಕೆಟಿಗರೂ ಈ ತಂಡದಲ್ಲಿದ್ದಾರೆ.

ಅನ್‌ಕ್ಯಾಪ್‌ಡ್ ಆಟಗಾರರಾದ ಡೇನಿಯಲ್ ಸ್ಯಾಮ್ಸ್, ರಿಲೇ ಮೆರೆಡಿತ್ ಮತ್ತು ಜೋಶ್ ಫಿಲಿಪ್ಪೆ ಕಳೆದ ಬಿಗ್ ಬ್ಯಾಶ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಎಡಗೈ ವೇಗಿ ಡೇನಿಯಲ್ ಸ್ಯಾಮ್ ಬಿಬಿಎಲ್‌ನ ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಆಸ್ಟ್ರೇಲಿಯಾ ಆರಂಭದಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಸರಣಿಗಾಗಿ ಇದೇ ತಿಂಗಳಿನಲ್ಲಿ ಪ್ರವಾಸಕ್ಕೆ ತೆರಳಲು ವೇಳಾಪಟ್ಟಿ ನಿಗದಿ ಮಾಡಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಪ್ರವಾಸವನ್ನು ಮುಂದೂಡಿದೆ. ಸದ್ಯ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪ್ರವಾಸ ಆಯೋಜನೆಗೆ ಸಿದ್ಧತೆ ನಡೆಸುತ್ತಿದೆ.

Story first published: Thursday, July 16, 2020, 13:36 [IST]
Other articles published on Jul 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+