For Quick Alerts
ALLOW NOTIFICATIONS  
For Daily Alerts
 

6,6,6,6,6,: ರಾಶೀದ್ ಖಾನ್‌ ಎಸೆತದಲ್ಲಿ ಸತತ ಐದು ಸಿಕ್ಸರ್ ಬಾರಿಸಿದ ಕೀರನ್ ಪೊಲಾರ್ಡ್‌: ಇಲ್ಲಿದೆ ವಿಡಿಯೋ

ವೆಸ್ಟ್‌ ಇಂಡೀಸ್‌ ದೈತ್ಯ ಆಟಗಾರರ ಹೆಸರುಗಳನ್ನು ಹೇಳುತ್ತಾ ಸಾಗಿದರೆ, ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಒಂದು ಹೆಸರು ಕೀರನ್‌ ಪೊಲಾರ್ಡ್‌. ಈಗಾಗಲೇ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಆಯ್ದ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಇವರು ಅಂಗಳಕ್ಕೆ ಇಳಿದರೆ ಈಗ ಸುದ್ದಿ ಆಗುತ್ತಿದೆ.

ಕೀರನ್ ಪೊಲಾರ್ಡ್‌ ಒಬ್ಬ ಸ್ಟಾರ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡವರು. ಅಲ್ಲದೆ ಅವರೊಬ್ಬ ಬೆಸ್ಟ್ ಫೀಲ್ಡರ್‌ ಸಹ ಹೌದು. ಕೀರನ್‌ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಎರಡು ವರ್ಷ ಕಳೆದಿವೆ. ಈಗ ಅವರು ವಿಶ್ವದಾದ್ಯಂತ ಲೀಗ್‌ಗಳಲ್ಲಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಪ್ರಸ್ತುತ ಪೊಲಾರ್ಡ್‌ ಇಂಗ್ಲೆಂಡ್‌ನಲ್ಲಿ ಆಡುತ್ತಿರುವ "ದಿ ಹಂಡ್ರೆಡ್ ಮೆನ್ಸ್‌ ಕಾಂಪಿಟೇಷನ್‌"ನಲ್ಲಿ (The Hundred Men's Competition 2024) ಸದರ್ನ್ ಬ್ರೇವ್ ತಂಡದ ಪರ ಕಾಣಿಸಿಕೊಂಡಿದ್ದಾರೆ.

Kieron Pollard Smashes 5 Consecutive Sixes Leads Southern Brave to Victory

ಹಳೆಯ ಧಾಟಿಯಲ್ಲಿ ಪೊಲಾರ್ಡ್ ಅಬ್ಬರ

ಪೊಲಾರ್ಡ್‌ ಈಗಲೂ ತಮ್ಮ ಹಳೆಯ ಧಾಟಿಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಎದುರುಗಡೆ ಯಾರು ಬೌಲ್‌ ಮಾಡುತ್ತಿದ್ದಾರೆ ಎಂಬ ಚಿಂತೆಯನ್ನು ಮಾಡದೆ, ಮನ ಬಂದಂತೆ ಥಳಿಸುತ್ತಾ ಸಾಗುತ್ತಾರೆ. ಆಗಸ್ಟ್‌ 10 ರಂದು ನಡೆದ ಪಂದ್ಯದಲ್ಲಿ ಪೊಲಾರ್ಡ್‌ ಬಿರುಸಿನ ಬ್ಯಾಟಿಂಗ್ ಮತ್ತೊಮ್ಮೆ ಪ್ರದರ್ಶನವಾಗಿದೆ.

ರಶೀದ್‌ಗೆ ಸತತ ಐದು ಸಿಕ್ಸರ್

ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ಹಾಗೂ ಸದರ್ನ್ ಬ್ರೇವ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಪೊಲಾರ್ಡ್‌ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಕುತೂಹಲಕಾರಿ ಅಂಶವೆಂದರೆ ಪೊಲಾರ್ಡ್ ಅವರ ಬ್ಯಾಟ್‌ನಿಂದ ಬಂದ ಒಟ್ಟು 5 ಸಿಕ್ಸರ್‌ಗಳು ಸತತವಾಗಿ ಬಂದಿದ್ದವು.

ಅಂದಹಾಗೆ ಪೊಲಾರ್ಡ್‌ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ವಿಶ್ವದ ಕ್ಲಾಸ್‌ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಬಾರಿಸಿದ್ದಾರೆ. ಇದೀಗ ಪೊಲಾರ್ಡ್ ಅವರ ಸತತ 5 ಸಿಕ್ಸರ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Kieron Pollard Smashes 5 Consecutive Sixes Leads Southern Brave to Victory

ಟ್ರೆಂಟ್ ರಾಕೆಟ್ಸ್‌ಗೆ ಸೋಲು

ಈ ಅಮೋಘ ಆಟದ ಪರಿಣಾಮ ಸದರ್ನ್ ಬ್ರೇವ್ ತಂಡವು ಟ್ರೆಂಟ್ ರಾಕೆಟ್ಸ್ ಅನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡ 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸದರ್ನ್ ಬ್ರೇವ್ 99 ಎಸೆತಗಳಲ್ಲಿ 129 ರನ್‌ಗಳ ಗುರಿಯನ್ನು ಮುಟ್ಟಿತು. ಅದ್ಭುತ ಇನ್ನಿಂಗ್ಸ್ ಆಡಿದ ಕೀರಾನ್ ಪೊಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬಿರುಸಿನ ಬ್ಯಾಟಿಂಗ್

"ದಿ ಹಂಡ್ರೆಡ್ ಮೆನ್ಸ್‌ ಕಾಂಪಿಟೇಷನ್‌" 2024 ರಲ್ಲಿ ಪೊಲಾರ್ಡ್ ಅಬ್ಬರಿಸುತ್ತಿದ್ದಾರೆ. ಇವರು ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ 38.75 ಸರಾಸರಿ ಮತ್ತು 164.89 ಸ್ಟ್ರೈಕ್ ರೇಟ್‌ನಲ್ಲಿ 155 ರನ್ ಸಿಕ್ಸರ್ ಸಿಡಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಪೊಲಾರ್ಡ್‌ 7ನೇ ಸ್ಥಾನದಲ್ಲಿದ್ದಾರೆ.

Story first published: Saturday, August 10, 2024, 23:49 [IST]
Other articles published on Aug 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+