Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

28 ಎಸೆತಗಳಲ್ಲಿ 72 ರನ್ ಚಚ್ಚಿದ ಕೀರನ್ ಪೊಲಾರ್ಡ್: ವೈರಲ್ ವೀಡಿಯೊ

Kieron Pollard Smashes 72 Off 28 Balls: Watch

ಪೋರ್ಟ್ ಆಫ್ ಸ್ಪೇನ್: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಅಬ್ಬರದ ಬ್ಯಾಟಿಂಗ್ ನಡೆಸಿರುವ ವೀಡಿಯೊ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು.

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಶನಿವಾರ ನಡೆದಿದ್ದ ಸಿಪಿಎಲ್ 17ನೇ ಪಂದ್ಯದಲ್ಲಿ ಬಾರ್ಬೊಡೋಸ್ ಟ್ರೈಡೆಂಟ್ಸ್ ವಿರುದ್ಧ ಪೊಲಾರ್ಡ್ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆವತ್ತು ಪೊಲಾರ್ಡ್ ಕೇವಲ 28 ಎಸೆತಗಳಲ್ಲಿ 72 ರನ್ ಚಚ್ಚಿದ್ದರು.

ಸಿಪಿಎಲ್‌ನಲ್ಲಿ, ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುವ ನಾಯಕ ಪೊಲಾರ್ಡ್ 7ನೇ ಕ್ರಮಾಂಕದಲ್ಲಿ ಬಂದು ಭರ್ಜರಿ 9 ಸಿಕ್ಸರ್‌ಗಳು ಮತ್ತು 2 ಫೋರ್ಸ್‌ಗಳನ್ನು ಸಿಡಿದರು. ಪೊಲಾರ್ಡ್ ಬ್ಯಾಟಿಂಗ್‌ ನೆರವಿನಿಂದ ಟಿಕೆಆರ್‌ ಸತತ 6ನೇ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ಟ್ರೈಡೆಂಟ್ಸ್‌, ಜಾನ್ಸನ್ ಚಾರ್ಲ್ಸ್ 47, ಕೈಲ್ ಮೇಯರ್ಸ್ 42, ಆ್ಯಶ್ಲೆ ನರ್ಸ್ 19, ರಶೀದ್ ಖಾನ್ 12 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 148 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಟ್ರಿನ್‌ಬಾಗೊ ನೈಟ್ ರೈಡರ್ಸ್, ಲೆಂಡ್ಲೆ ಸಿಮನ್ಸ್ 32, ಪೊಲಾರ್ಡ್ 72 ರನ್‌ನೊಂದಿಗೆ 19.5 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 149 ಪೇರಿಸಿತು.

Story first published: Tuesday, September 1, 2020, 10:03 [IST]
Other articles published on Sep 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+