For Quick Alerts
ALLOW NOTIFICATIONS  
For Daily Alerts
 

Kieron Pollard: ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ದಾಖಲೆ ಅಳಿಸಿದ ಪೊಲಾರ್ಡ್‌

ಅಮೆರಿಕದಲ್ಲಿ ಈಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಈ ಲೀಗ್‌ನಲ್ಲಿ ಆಡುತ್ತಿರುವ ವೆಸ್ಟ್‌ ಇಂಡೀಸ್ ತಂಡದ ದಿಗ್ಗಜ ಆಟಗಾರ ಕಿರನ್ ಪೊಲಾರ್ಡ್‌ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಲೀಗ್‌ನಲ್ಲಿ ಅವರು ಎಂಐ ನ್ಯೂಯಾರ್ಕ್‌ ತಂಡದ ಪರ ಕಣಕ್ಕೆ ಇಳಿದಿದ್ದಾರೆ. ಅಲ್ಲದೆ ದೊಡ್ಡ ದಾಖಲೆಗೆ ಕಿರನ್ ಪೊಲಾರ್ಡ್‌ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ.

ಟೆಕ್ಸಸ್ ಸೂಪರ್ ಕಿಂಗ್ಸ್‌ ಹಾಗೂ ಎಂಐ ನ್ಯೂ ಯಾರ್ಕ್‌ ತಂಡಗಳ ನಡುವೆ ಪಂದ್ಯ ಇತ್ತೀಚಿಗೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಎಂಐ ನ್ಯೂ ಯಾರ್ಕ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 182 ರನ್‌ ಸೇರಿಸಿ 3 ರನ್‌ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ಎಂಐ ಪರ ಬ್ಯಾಟ್ ಮಾಡಿದ ಕಿರನ್ ದೊಡ್ಡ ಸಾಧನೆ ಮಾಡಿದರು.

Kieron Pollard Surpasses Virat Kohli in All-Time T20 Run Scorers List During MLC

ಕಿರನ್ 16 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು. ಇವರ ಈ ಇನಿಂಗ್ಸ್‌ ಸಹಾಯದಿಂದ ಕಿರನ್‌ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಿರನ್ ವಿರಾಟ್ ಅವರನ್ನು ಹಿಂದಿಕ್ಕಿದ್ದಾರೆ.

ವಿರಾಟ್ ದಾಖಲೆ ಅಳಿಸಿದ ಪೊಲಾರ್ಡ್‌

ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಬ್ಯಾಟ್ ಮಾಡುವ ಕಿರನ್ ಪೊಲಾರ್ಡ್‌ 696 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 13569 ರನ್‌ ಕಲೆ ಹಾಕಿದ್ದಾರೆ. ಈ ಮೂಲಕ ಇವರು ವಿರಾಟ್‌ ಕೊಹ್ಲಿ ರನ್‌ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರಾಟ್‌ ಟಿ20 ಕ್ರಿಕೆಟ್‌ನಲ್ಲಿ 414 ಪಂದ್ಯಗಳನ್ನು ಆಡಿದ್ದು 13543 ರನ್‌ ಸಿಡಿಸಿದ್ದಾರೆ.

ಗೇಲ್‌ ದಿ ಬಾಸ್‌

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಕೀರ್ತಿ ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್ ಅವರಿಗೆ ಸಲ್ಲುತ್ತದೆ. ಕ್ರಿಸ್‌ ಗೇಲ್‌ 463 ಪಂದ್ಯಗಳಲ್ಲಿ 14562 ರನ್‌ ಕಲೆ ಹಾಕಿದ್ದು ಅತಿ ಹೆಚ್ಚು ಕಲೆ ಹಾಕಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಕೀರ್ತಿ ಅಲೆಕ್ಸ್‌ ಹೆಲ್ಸ್‌ಗೆ ಸಲ್ಲುತ್ತದೆ. ಅಲೆಕ್ಸ್‌ 497 ಪಂದ್ಯಗಳಲ್ಲಿ 13704 ರನ್‌ ಸಿಡಿಸಿದ್ದಾರೆ. ಇನ್ನು ಪಾಕ್‌ ತಂಡದ ಶೋಯಿಬ್ ಮಲಿಕ್ 557 ಪಂದ್ಯಗಳಲ್ಲಿ 13571 ರನ್‌ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Kieron Pollard Surpasses Virat Kohli in All-Time T20 Run Scorers List During MLC

ಕಿರನ್‌ ಪೊಲಾರ್ಡ್‌ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಆಯ್ದ ಲೀಗ್‌ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡುತ್ತಾರೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಸದ್ಯ ಇವರು ಮೇಜರ್‌ ಕ್ರಿಕೆಟ್‌ ಲೀಗ್‌ನಲ್ಲಿ ಎಂಐ ನ್ಯೂ ಯಾರ್ಕ್ ತಂಡದ ಪರ ಆಡುತ್ತಿದ್ದಾರೆ.

Story first published: Sunday, June 15, 2025, 16:55 [IST]
Other articles published on Jun 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+