Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕೆXIಪಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೊರೊನಾದಿಂದ ಚೇತರಿಕೆ

Kings XI Punjab batsman Karun Nair recovers from Covid-19

ಬೆಂಗಳೂರು, ಆಗಸ್ಟ್ 13: ವೀರೇಂದ್ರ ಸೆಹ್ವಾಗ್ ಬಿಟ್ಟರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಒಬ್ಬನೇ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೊರೊನಾವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕರುಣ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಕರುಣ್ ನಾಯರ್ ಆಗಸ್ಟ್ 8ರಂದೇ ಕೊರೊನಾ ನೆಗೆಟಿವ್ ಆಗಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಮುಂದಿನ ತಿಂಗಳು ಯುಎಇಯಲ್ಲಿ ನಡೆಯುವ ಐಪಿಎಲ್‌ಗಾಗಿ ಕರುಣ್ ಕೆXIಪಿ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.

ವರದಿಯ ಪ್ರಕಾರ, ತಾನು ಕೊರೊನಾ ಪಾಸಿಟಿವ್ ಬಂದ ಬಳಿಕ ಕರುಣ್ ನಾಯರ್ ಎರಡು ವಾರಗಳಿಗೂ ಹೆಚ್ಚು ಕಾಲ ಸೆಲ್ಫ್ ಐಸೊಲೇಶನ್‌ ನಲ್ಲಿದ್ದರು. ಅಲ್ಲದೆ ಯುಎಇಗೆ ವಿಮಾನ ಹತ್ತುವುದಕ್ಕೂ ಮುನ್ನವೂ ಕರುಣ್ ಮೂರು ಬಾರಿ ಪರೀಕ್ಷೆ ನಡೆಸಿಕೊಳ್ಳಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಗ್ನಿಕ್‌ಗೂ ಕೊರೊನಾ ಸೋಂಕು ತಗುಲಿತ್ತು. ಅಂದ್ಹಾಗೆ, ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

Story first published: Thursday, August 13, 2020, 18:08 [IST]
Other articles published on Aug 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+