Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

''ನಾನು ಚುನಾವಣೆ ಗೆದ್ದೆ'' ಎಂದ ಟ್ರಂಪ್‌ ಟ್ರಾಲ್ ಮಾಡಿದ ಜಾಫರ್

Kings XI Punjab batting coach Jaffer trolls Trump after Biden wins US elections

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಲನ್ನು ಅರಗಿಸಿಕೊಳ್ಳಲಾಗದೆ ಪದೇ ಪದೇ ಮಾಡುತ್ತಿದ್ದ ಟ್ವೀಟ್ ಗಳನ್ನು ಟ್ವಿಟ್ಟರ್ ತೆಗೆದು ಹಾಕತೊಡಗಿದ್ದು ಗೊತ್ತಿರಬಹುದು. ಈ ನಡುವೆ ''ನಾನು ಈ ಚುನಾವಣೆಯಲ್ಲಿ ಭಾರಿ ಅಂತರರಿಂದ ಗೆದ್ದೆ'' ಎಂಬರ್ಥ ಟ್ವೀಟ್ ಸಕತ್ ವೈರಲ್ ಆಗಿದ್ದು, ಇದಕ್ಕೆ ಐಪಿಎಲ್ ಫ್ರಾಂಚೈಸಿ ಕೋಚ್ ಸಕತ್ ಪ್ರತಿಕ್ರಿಯೆ ನೀಡಿದ್ದಾರೆ.

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಭಾರಿ ಕುತೂಹಲ ಕೆರಳಿಸಿದ್ದ ಪೆನ್ಸಿಲ್ವೇಲಿಯಾದ ಫಲಿತಾಂಶ ಶನಿವಾರದಂದು ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ (270 +) ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ.

ಮತದಾನ ನಿಲ್ಲಿಸಿ, ಮತ ಎಣಿಕೆ ನಿಲ್ಲಿಸಿ ಎಂದು ಅಬ್ಬರಿಸುತ್ತಿದ್ದ ಟ್ರಂಪ್ ಅವರು ಕೊನೆ ತನಕ ಹೋರಾಟ ನಡೆಸುವುದಾಗಿ ಟ್ವೀಟ್ ಮಾಡುತ್ತಲೇ ಇದ್ದರು. I WON THIS ELECTON, BY A LOT! ಎಂದು ಟ್ರಂಪ್ ಟ್ವೀಟ್ ಮಾಡಿದ್ದಕ್ಕೆ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಂ ಜಾಫರ್ ಅವರು ಟ್ರಾಲ್ ಮಾಡಿದ್ದಾರೆ.

ಹೌದು ನಿಮ್ಮ ಮಾತು ನಿಜ ಐಪಿಎಲ್ 2020ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಕುಡಾ BY A LOT ಗೆದ್ದುಕೊಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಬೈಡನ್ ಹ್ಯಾರೀಸ್ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಐಪಿಎಲ್ 2020ರಲ್ಲಿ ಲೀಗ್ ಹಂತದಲ್ಲೇ ಪಂಜಾಬ್ ತಂಡ ಮುಗ್ಗರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Sunday, November 8, 2020, 12:29 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+