ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕಿಂಗ್ಸ್ XI ಪಂಜಾಬ್ ಮಾಜಿ ನಾಯಕ ಆರ್ ಅಶ್ವಿನ್!

ನವದೆಹಲಿ, ನವೆಂಬರ್ 8: ಕಿಂಗ್ಸ್ XI ಪಂಜಾನ್ ತಂಡದ ಮಾಜಿ ನಾಯಕ, ಸ್ಪಿನ್ನರ್ ಆರ್ ಅಶ್ವಿನ್, ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಪಂಜಾಬ್ ತಂಡ ಅಶ್ವಿನ್ ಅವರನ್ನು 1.5 ಕೋ.ರೂ.ಗಾಗಿ ಡೆಲ್ಲಿಗೆ ಮಾರಾಟ ನಡೆಸಿ, ಡೆಲ್ಲಿ ತಂಡದಿಂದ ಕರ್ನಾಟಕದ ಸ್ಪಿನ್ನರ್ ಜಗದೀಶ್ ಸುಚಿತ್ ಅವರನ್ನು ಬದಲಾಗಿ ಪಡೆದುಕೊಂಡಿದೆ.
ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ತಂಡ, ಪಂಜಾಬ್ ಜೊತೆ ಕಳೆದೆರಡು ತಿಂಗಳಿನಿಂದಲೂ ಚೌಕಾಸಿ ನಡೆಸುತ್ತಿತ್ತು. ಅಂದ್ಹಾಗೆ ಅಶ್ವಿನ್ ಅವರನ್ನು ನೀಡಿ ಹಣ, ಸುಚಿತ್ ಪಡೆದಿರುವ ಪಂಜಾಬ್, ಡೆಲ್ಲಿ ತಂಡದಲ್ಲಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರಿಗೂ ಬೇಡಿಕೆಯಿಟ್ಟಿತ್ತು. ಆದರೆ ಡೆಲ್ಲಿ ತಂಡ ಪಂಜಾಬ್‌ಗೆ ಬೌಲ್ಟ್ ಅನ್ನು ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ.
'ನಮಗೆ ಸಂತೋಷವಾಗಿದೆ. ಅಶ್ವಿನ್‌ಗೆ ಸಂತೋಷವಾಗಿದೆ, ಡೆಲ್ಲಿಗೂ ಖುಷಿಯಾಗಿದೆ. ಅಶ್ವಿನ್ ಮಾರಾಟ ಮಾಡುವ ಬಗ್ಗೆ ನಾವು 3 ತಂಡಗಳೊಂದಿಗೆ ಮಾತನಾಡಿದ್ದೆವು. ಅಂತೂ ನಾವೀ ಕೊಡು-ಕೊಳ್ಳುವಿಕೆಯನ್ನು ಕೊನೆಗೊಳಿಸಿದ್ದೇವೆ. ಅಶ್ವಿನ್‌ಗೆ ಒಳ್ಳೆಯದಾಗಲಿ,' ಎಂದು ಕೆXIಪಿ ಸಹ ಮಾಲಕ ನೆಸ್ ವಾಡಿಯಾ, ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.
ಅಶ್ವಿನ್, ಅವರ ಹರಾಜು ಬೆಲೆ ಸುಮಾರು 7.6 ಕೋ.ರೂ.ಗೆ ಡೆಲ್ಲಿ ಪಾಲಾಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಡೆಲ್ಲಿ ತಂಡ ಕೊಂಚ ಹಣ ಮತ್ತು ಒಬ್ಬ ಆಟಗಾರನನ್ನು ಅಶ್ವಿನ್‌ಗೆ ಬದಲಾಗಿ ನೀಡಿದೆ. ಐಪಿಎಲ್ ಆಟಗಾರರ ಬದಲಾವಣೆಗೆ ಕಡೇ ದಿನಾಂಕವಾದ ನವೆಂಬರ್ 14ಕ್ಕೂ ಮುನ್ನ ತಂಡಗಳು ತಮ್ಮ ಬದಲು ಆಟಗಾರರ ಔಪಚಾರಿಕ ಘೋಷಣೆ ಮಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications