For Quick Alerts
ALLOW NOTIFICATIONS  
For Daily Alerts
 

ಧೋನಿ, ಯುವಿ ರೀತಿ ಚಾಣಾಕ್ಷ ಫಿನಿಷರ್ ಆಗಬಲ್ಲ ಆಟಗಾರ ಈತ: ಯುವ ಕ್ರಿಕೆಟಿಗನ ಬಗ್ಗೆ ಮೋರೆ ಭರವಸೆ

ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ರೀತಿ ಪರಿಣಾಮಕಾರಿಯಾದ ಚಾಣಾಕ್ಷ ಫಿನಿಷರ್ ಆಗಬಲ್ಲ ಯುವ ಕ್ರಿಕೆಟಿಗನನ್ನು ಹೆಸರಿಸಿದ್ದಾರೆ ಕಿರಣ್ ಮೋರೆ.

ಆ ಕ್ರಿಕೆಟಿಗ ಯಾರೂ ಅಲ್ಲ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಗಳಿಸಿಕೊಂಡ ರಿಂಕು ಸಿಂಗ್. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನಸೆಳೆದಿರುವ ರಿಂಕು ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮುಡಿಸಿರುವ ಕ್ರಿಕೆಟಿಗ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪರವಾಗಿ ರಿಂಕು ಸಿಂಗ್ ಪದಾರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಯುವ ಕ್ರಿಕೆಟಿಗನ ಬಗ್ಗೆ ವಿಶೇಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Kiran More praises Rinku Singh said he can be brilliant finisher like MS Dhoni and Yuvraj Singh

ರಿಂಕು ಸಿಂಗ್ ಅವರಲ್ಲಿರುವ ವಿಶೇಷ ಸಾಮರ್ಥ್ಯದ ಬಗ್ಗೆ ಕಿರಣ್ ಮೋರೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಯುವ ಆಟಗಾರ ನಿರಾಯಾಸವಾಗಿ ಯಾವುದೇ ಹಂತದಿಂದಲೂ ಪಂದ್ಯವನ್ನು ತನ್ನ ಪರವಾಗಿ ಮುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.

ಕಳೆದ ಐಪಿಎಲ್ 2023 ಆವೃತ್ತಿಯಲ್ಲಿ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗೊ ಅಮೋಘ ಪ್ರದರ್ಶನ ನೀಡಿದ್ದರು. 5-6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದರು ಈ ಯುವ ಆಟಗಾರ. ಆಡಿದ 13 ಇನ್ನಿಂಗ್ಸ್‌ಗಳಲ್ಲಿ 145.5ರ ಸ್ಟ್ರೈಕ್‌ರೆಟ್‌ನಲ್ಲಿ ಅವರು 416 ರನ್‌ಗಳನ್ನು ಗಳಿಸಿದ್ದರು. ಇನ್ನು ಡೆತ್ ಓವರ್‌ನಲ್ಲಿ ಕನಿಷ್ಠ 75 ಎಸೆತಗಳನ್ನು ಎದುರಿಸಿದ ಆಟಗಾರರ 12 ಆಟಗಾರರಲ್ಲಿ ಸ್ಟ್ರೈಕ್‌ರೆಟ್‌ 186.67ರಷ್ಟು ಹೊಂದಿದ್ದು ಇದು ಡೆತ್ ಓವರ್‌ನಲ್ಲಿ ಕ್ಲಾಸೆನ್ ಅವರನ್ನು ಹೊರತುಪಡಿಸಿದರೆ ಎರಡನೇ ಅತ್ಯುತ್ತ ಸ್ಟ್ರೈಕ್‌ರೇಟ್ ಎನಿಸಿಕೊಂಡಿತ್ತು.

ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿಯೇ ರಿಂಕು ಸಿಂಗ್ ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಪರವಾಗಿ ಕಣಕ್ಕಿಳಿದಿದ್ದರು. ಮಳೆಯಿಂದಾಗಿ ಪಂದ್ಯ ಬೇಗನೆ ಸ್ಥಗಿತವಾಗಿದ ಕಾರಣ ಡಿಎಲ್ ನಿಯಮದಲ್ಲಿ ಭಾರತ 2 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಹೀಗಾಗಿ ಬ್ಯಾಟಿಂಗ್‌ನಲ್ಲಿ ಕಣಕ್ಕಿಳಿಯುವ ಅವಕಾಶ ರಿಂಕು ಸಿಂಗ್‌ಗೆ ದೊರೆಯಲಿಲ್ಲ.

"ಭಾರತ ತಂಡದಲ್ಲಿ ಆತನಿಗೆ ಅವಕಾಶ ದೊರೆಯಬೇಕು ಎಂದು ನಾನು ಬಹಳ ಕಾದಿದ್ದೇನೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ಆತ ಬಹಳ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಚಾಣಾಕ್ಷ ಪಿನಿಷರ್ ಎನಿಸಿಕೊಳ್ಳಬಲ್ಲರು. ನಾವು ಈ ಮೊದಲು ಎಂಎಸ್ ಧೋನಿ, ಯುವರಾಜ್ ಸಿಂಗ್ ಅವರಂಥಾ ಆಟಗಾರರನ್ನು ನೋಡಿದ್ದೇವೆ. ಆದರೆ ಅವರ ಬಳಿಕ ಆ ರೀತಿಯ ಆಟಗಾರರು ನಮಗೆ ದೊರೆತಿಲ್ಲ. ಕೆಲ ಆಟಗಾರರನ್ನು ಆ ಸ್ಥಾನಕ್ಕೆ ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ"

"ತಿಲಕ್ ಕೂಡ ಇದ್ದಾರೆ, ಅವರು ಕೂಡ ಆ ಸ್ಥಾನವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ರಿಂಕು ಸಿಂಗ್ ಫಿಲ್ಡಿಂಗ್‌ನಲ್ಲಿಯೂ ಅದ್ಭುತವಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿಯೂ ಆತನ ಆಟವನ್ನು ನಾನು ನೋಡಿದ್ದೇನೆ. ಆತ ಬಹಳಷ್ಟು ಬೆಳವಣಿಗೆ ಕಂಡಿದ್ದಾರೆ" ಎಂದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Story first published: Saturday, August 19, 2023, 13:18 [IST]
Other articles published on Aug 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+