Kiran Navgire: ದೇಶೀಯ ಟೂರ್ನಿಯಲ್ಲಿ ಸ್ಫೋಟಿಸಿದ ಬ್ಯಾಟರ್: ಒಂದೇ ಓವರ್‌ನಲ್ಲಿ 5 ಸಿಕ್ಸರ್
ಭಾರತ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿಯೇ ಸುದ್ದಿ ಮಾಡಿರುವ ಪುರುಷ ಕ್ರಿಕೆಟ್ ಆಟಗಾರರನ್ನು ನೀವು ನೋಡಿದ್ದೀರಿ. ಸಿಕ್ಸರ್ ಜೊತೆಗೆ ತಮ್ಮ ಹೆಸರನ್ನು ತಳುಕು ಹಾಕಿಸಿಕೊಂಡಿರುವ ನವಜೋತ್ ಸಿಂಗ್ ಸಿದ್ಧು, ದೇಶೀಯ ಟೂರ್ನಿಯಲ್ಲಿ ಆರು ಸಿಕ್ಸರ್ ಬಾರಿಸಿ ಸಂಚಲನ ಮೂಡಿಸಿದ್ದ ರವಿ ಶಾಸ್ತ್ರಿ ಹೆಸರುಗಳು ಸಿಕ್ಸರ್ ಎಂದಾಗ ಕಣ್ಣ ಮುಂದೆ ಬರುತ್ತದೆ. ಆದರೆ ಈ ಎಲ್ಲದಕ್ಕಿಂತಲೂ ಮೊದಲು ಸಿಕ್ಸರ್ ಎಂದರೆ ನೆನಪಾಗುವುದು, ಯುವರಾಜ್ ಸಿಂಗ್. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ ಯುವಿ ಇಂಗ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ತಮ್ಮತ್ತ ಇಡೀ ವಿಶ್ವವೇ ನೋಡುವಂತೆ ಮಾಡಿದ್ದರು.
ಕ್ರಿಕೆಟ್ ಅಂಗಳದಲ್ಲಿ ಪುರಷರಂತೆ ಈಗ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಸಹ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪುರಷರಂತೆ ಮಹಿಳಾ ಆಟಗಾರ್ತಿಯರು ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಮಹಿಳಾ ಕ್ರಿಕೆಟ್‌ನಲ್ಲಿ ಹಲವು ಆಟಗಾರ್ತಿಯರ ಹೆಸರುಗಳು ಕೇಳಿ ಬರುತ್ತವೆ. ಈ ಪಟ್ಟಿಗೆ ಇಲ್ಲೊಬ್ಬರು ನ್ಯೂ ಎಂಟ್ರಿ ನೀಡಿದ್ದಾರೆ.

ಒಂದೇ ಓವರ್‌ನಲ್ಲಿ ಐದು ಸಿಕ್ಸರ್
ಮಹಾರಾಷ್ಟ್ರ ಮತ್ತು ರೈಲ್ವೇಸ್ ನಡುವೆ ನಡೆಯುತ್ತಿರುವ ಹಿರಿಯರ ಮಹಿಳಾ ಏಕದಿನ ಟ್ರೋಫಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಕಿರಣ್ ನವಗಿರೆ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಇವರು ರೈಲ್ವೇಸ್ ಸ್ಪಿನ್ನರ್ ಪ್ರೀತಿ ಆರ್ ಬೋಸ್ ಎಸೆತದಲ್ಲಿ ಸ್ಫೋಟಿಸಿದರು. ಇವರು ಒಂದರ ಹಿಂದೆ ಒಂದರಂತೆ ಪಟ ಪಟನೆ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಕಿರಣ್ ನವಗಿರೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 42ನೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು.
ಹೇಗಿತ್ತು ಆ ಓವರ್?
ಪ್ರೀತಿ ಎಸೆದ 42ನೇ ಓವರ್‌ನ ಮೊದಲ ಎಸೆತ ಡಾಟ್ ಆಗಿತ್ತಿ. ಎರಡನೇ ಎಸೆತದಲ್ಲಿ ಫುಟ್ ವರ್ಕ್ ಸಹಾಯದಿಂದ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲೂ ಕಾಪಿ ಪೇಸ್ಟ್ ಶಾಟ್ ಪ್ರಯೋಗಿಸಿದರು. ನಾಲ್ಕನೇ ಎಸೆತವನ್ನು ಲಾಂಗ್ ಆನ್ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡಿ ಬೌಂಡರಿ ಗೆರೆ ದಾಟಿಸಿದರು. ಐದನೇ ಎಸೆತದಲ್ಲಿ ಬೌಲರ್ ತಲೆಯ ಮೇಲೆ ಅಮೋಘ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಇನ್ನು ಕೊನೆಯ ಎಸೆತದಲ್ಲಿ 93 ಮೀಟರ್ ಉದ್ದನೆಯ ದೊಡ್ಡ ಸಿಕ್ಸರ್ ಬಾರಿಸಿ ಸ್ಫೋಟಿಸಿದರು.

ಕಿರಣ್ ನವಗಿರಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 25 ಎಸೆತಗಳಲ್ಲಿ 1 ಬೌಂಡರಿ ಹಾಗೂ 8 ಸಿಕ್ಸರ್ ಸಹಾಯದಿಂದ 256 ಸ್ಟ್ರೈಕ್ ರೇಟ್‌ನಲ್ಲಿ 64 ರನ್ ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಕಿರಣ್ ಅಬ್ಬರಕ್ಕೆ ಎದುರಾಳಿ ಥಂಡಾ ಹೊಡೆಯಿತು. ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸಿರುವ ಕಿರಣ, ನಿಶ್ಚಿತವಾಗಿ ಒಬ್ಬ ಪ್ರತಿಭಾವಂತೆ ಆಟಗಾರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications