Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಮಹಿಳಾ ಕ್ರಿಕೆಟ್ ಕೋಚ್ ಶಾರ್ಟ್ ಲಿಸ್ಟ್‌ನಲ್ಲಿ ಗ್ಯಾರಿ, ಪೊವಾರ್, ಗಿಬ್ಸ್!

Kirsten, Powar, Gibbs in shortlist for India women head coach

ನವದೆಹಲಿ, ಡಿಸೆಂಬರ್ 19: ಬಿಸಿಸಿಐಯು ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಶಾರ್ಟ್ ಲಿಸ್ಟ್‌ನಲ್ಲಿ ಗ್ಯಾರಿ ಕಸ್ಟರ್ನ್, ರಮೇಶ್ ಪೊವಾರ್ ಮತ್ತು ಹರ್ಷೆಲ್ ಗಿಬ್ಸ್ ಇದ್ದಾರೆ. ಗುರುವಾರ (ಡಿಸೆಂಬರ್ 20) ಮುಖ್ಯ ಕೋಚ್ ಸ್ಥಾನಕ್ಕಾಗಿ ಈ ಮೂವರಿಗೂ ಸಂದರ್ಶನ ನಡೆಯಲಿದೆ.

ಐಪಿಎಲ್‌ ಹರಾಜು 2019 ವಿಶೇಷ ಪುಟ

ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್‌ನಲ್ಲಿ ಭಾರತದ ವನಿತೆಯರು ಆಂಗ್ಲ ವನಿತೆಯರೆದುರು ಮುಖಭಂಗ ಅನುಭವಿಸಿದ್ದರು. ಈ ಪಂದ್ಯದಲ್ಲಿ ಮಿಥಾಲಿ ರಾಜ್‌ ಅವರನ್ನು ಆಡಿಸಿರಲಿಲ್ಲ. ಇದೇ ವಿವಾದಕ್ಕೆ ಸಂಬಂಧಿಸಿ ಹಿಂದಿನ ಕೋಚ್ ರಮೇಶ್ ಪೊವಾರ್ ಅವರನ್ನು ಸ್ಥಾನದಿಂದ ಬಿಸಿಸಿಐ ಕೆಳಗಿಳಿಸಿತ್ತು.

ನವೆಂಬರ್ 30ರಂದು ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನವನ್ನು ಪೊವಾರ್ ಬಿಟ್ಟುಕೊಡಬೇಕಾಗಿತ್ತು. ಆದರೆ ಪೊವಾರ್ ಮರು ಅರ್ಜಿ ಸಲ್ಲಿಸಲು ಬಿಸಿಸಿಐ ಅವಕಾಶ ಮಾಡಿ ಕೊಟ್ಟಿತ್ತು. ರಮೇಶ್ ಮರು ಅರ್ಜಿ ಸಲ್ಲಿಸುವಲ್ಲಿ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್ ಮತ್ತು ಸ್ಮೃತಿ ಮಂಧಾನ ಪ್ರಮುಖ ಪಾತ್ರಧಾರಿಗಳಾಗಿದ್ದರು.

ಎರಡು ವರ್ಷಗಳ ಪೂರ್ಣಾವಧಿ ಕೋಚ್‌ಗಾಗಿ ಬಿಸಿಸಿಐ ಅರ್ಜಿ ಕರೆದಾಗ ಒಟ್ಟು 28 ಅರ್ಜಿಗಳು ಬಂದಿದ್ದವು. ಇದರಲ್ಲಿ 10 ಅಭ್ಯರ್ಥಿಗಳು ವಿದೇಶಿಯರಿದ್ದರು. ಅರ್ಜಿ ಸಲ್ಲಿಸಿದವರ ಶಾರ್ಟ್ ಲಿಸ್ಟ್ ಅನ್ನು ಈಗ ಪ್ರಕಟಿಸಲಾಗಿದ್ದು, ಇದರಲ್ಲಿ ಭಾರತದ ಪುರುಷರ ತಂಡವನ್ನು ಮುನ್ನಡೆಸಿದ್ದ ಕೋಚ್‌, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್, ಆಫ್ರಿಕಾದವರೇ ಆದ ಹರ್ಷೆಲ್ ಗಿಬ್ಸ್ ಮತ್ತು ಪೊವಾರ್ ಇದ್ದಾರೆ.

Story first published: Wednesday, December 19, 2018, 17:29 [IST]
Other articles published on Dec 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+