ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿಶನ್ ನಾಯಕ
ಮುಂಬೈ, ಡಿ.23: ಬಾಂಗ್ಲಾದೇಶದಲ್ಲಿ 2016ರಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜಾರ್ಖಂಡ್‌ನ ಆರಂಭಿಕ ಬ್ಯಾಟ್ಸ್ ಮನ್ ಹಾಗೂ ವಿಕೆಟ್‌ಕೀಪರ್ ಐಶಾನ್ ಕಿಶನ್ ಅವರು ಭಾರತದ ಅಂಡರ್-19 ತಂಡವನ್ನು ಮುನ್ನಡೆಸಲಿದ್ದಾರೆ.
ದೆಹಲಿಯ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದ ಜನವರಿ 22 ರಿಂದ ಆರಂಭವಾಗಿ ಫೆ.14ರ ತನಕ ನಡೆಯಲಿದೆ. ಮೂರು ಬಾರಿಯ ಚಾಂಪಿಯನ್ ಭಾರತ ತಂಡ ಆಸ್ಟ್ರೇಲಿಯ, ನ್ಯೂಜಿಲೆಂಡ್ ಹಾಗೂ ನೇಪಾಳ ತಂಡಗಳೊಂದಿಗೆ ಡಿ ಗುಂಪಿನಲ್ಲಿದೆ. [ದ್ರಾವಿಡ್ ಕೋಚಿಂಗ್ ಕಮಾಲ್, ಕಿರಿಯರಿಗೆ ಕಿರೀಟ]

ಜ.28 ರಂದು ಮೀರ್ ಪುರದಲ್ಲಿ ಆಸ್ಟ್ರೇಲಿಯದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಇತ್ತೀಚೆಗಷ್ಟೇ ಕೊಲಂಬೊದಲ್ಲಿ ನಡೆದ ತ್ರಿಕೋನ ಏಕದಿನ ಸರಣಿ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿಯನ್ನು ಜಯಿಸಿರುವ ಭಾರತ ತಂಡ ಜ.30 ರಂದು ನ್ಯೂಜಿಲೆಂಡ್ ತಂಡವನ್ನು ಹಾಗೂ ಫೆ.1 ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ. ಫೆ.14 ರಂದು ಫೈನಲ್ ಪಂದ್ಯ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಹಾಲಿ ಚಾಂಪಿಯನ್ ಆಗಿದೆ. ಭಾರತ 2000,2008 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಭಾರತದ ಅಂಡರ್-19 ಕ್ರಿಕೆಟ್ ತಂಡ: ಐಶಾನ್ ಕಿಶನ್(ನಾಯಕ), ರಿಷಭ್ ಪಂತ್(ಉಪ ನಾಯಕ), ವಾಷಿಂಗ್ಟನ್ ಸುಂದರ್, ಸರ್ಫ್‌ರಾಝ್ ಖಾನ್, ಅಮನ್‌ದೀಪ್ ಖರೆ, ಅನ್ಮೋಲ್‌ಪ್ರೀತ್ ಸಿಂಗ್, ಅರ್ಮಾನ್ ಜಾಫರ್, ರಿಕಿ ಭುಯ್,ಮಾಯಾಂಕ್ ದಾಗಾರ್, ಝೀಶನ್ ಅನ್ಸಾರಿ, ಮಹಿಪಾಲ್ ಲಾಮರ್, ಆವೇಶ್ ಖಾನ್, ಶುಭಂ ಮಾವಿ, ಖಲೀಲ್ ಅಹ್ಮದ್, ರಾಹುಲ್ ಬಾಥಂ.
ಕೋಚ್ : ರಾಹುಲ್ ದ್ರಾವಿಡ್
(ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications