For Quick Alerts
ALLOW NOTIFICATIONS  
For Daily Alerts
 

KKR vs CSK: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೆಕೆಆರ್‌

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಸೆಯನ್ನು ಹೊಂದಿದೆ. ಚೆನ್ನೈ ವಿರುದ್ಧ ಗೆಲುವು ದಾಖಲಿಸಿ ಹ್ಯಾಟ್ರಿಕ್‌ ಜಯದ ನಗೆ ಬೀರುವ ಆಸೆಯನ್ನು ಕೆಕೆಆರ್‌ ಹೊಂದಿದೆ.

ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ 19 ಹಾಗೂ ಕೆಕೆಆರ್‌ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಉಭಯ ತಂಡಗಳು ಅಂಗಳಕ್ಕೆ ಇಳಿದಾಗ 235 ರನ್‌ ಗರಿಷ್ಠ ಮೊತ್ತವಾಗಿದೆ. ಈ ಬಾರಿ ಚೆನ್ನೈ ತಂಡ ತನ್ನ ಘನತೆಗೆ ತಕ್ಕ ಆಟವನ್ನು ಆಡಿಲ್ಲ. ಹಾಲಿ ಚಾಂಪಿಯನ್‌ ಕೆಕೆಆರ್‌ ಟೂರ್ನಿಯ ಆರಂಭದಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದ್ದು, ಈಗ ಕೋಲ್ಕತ್ತಾಕ್ಕೆ ಪ್ರತಿ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

KKR and CSK Set for High-Stakes Clash at Eden Gardens to Keep Playoff Hopes Alive

ಗೆಲುವಿನ ಒತ್ತಡ

ಕೆಕೆಆರ್‌ ತಂಡದಲ್ಲಿ ರಹಮತುಲ್ಲಾ ಗುರ್ಬಾಜ್‌ ಹಾಗೂ ಸುನಿಲ್ ನರೈನ್‌ ಜೋಡಿ ಕೆಕೆಆರ್‌ ತಂಡಕ್ಕೆ ಉತ್ತಮ ಆರಂಭವನ್ನು ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಅವರು ತಮ್ಮ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಅಗತ್ಯ ಕಾಣಿಕೆ ನೀಡಬೇಕಿದೆ. ಇವರ ಬ್ಯಾಟ್‌ ಈ ಲೀಗ್‌ನಲ್ಲಿ ಆರ್ಭಟಿಸಿದೆ. ಇದೇ ಫಾರ್ಮ್‌ನ್ನು ರಹಾನೆ ಕಂಟಿನ್ಯೂ ಮಾಡಬೇಕಿದೆ. ಉಳಿದಂತೆ ಅಂಗ್ಕ್ರಿಶ್ ರಘುವಂಶಿ ರನ್‌ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಇನ್ನು ಸ್ಟಾರ್ ಆಟಗಾರರಾದ ವೆಂಕಟೇಶ್‌ ಅಯ್ಯರ್‌, ಆಂಡ್ರೆ ರಸೆಲ್‌, ರಿಂಕು ಸಿಂಗ್‌ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬೇಕಿದೆ.

ಹೊಸ ಚೆಂಡಿನೊಂದಿಗೆ ಹರ್ಷಿತ್ ರಾಣಾ, ವೈಭವ್‌ ಆರೋರ್‌ ಪವರ್‌ ಪ್ಲೇನಲ್ಲಿ ಪವರ್ ಫುಲ್ ಆರಂಭವನ್ನು ನೀಡಬೇಕಿದೆ. ಮಿಡ್ಲ್ ಓವರ್‌ಗಳಲ್ಲಿ ಆಂಡ್ರೆ ರಸೆಲ್‌ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ವರುಣ್‌ ಚಕ್ರವರ್ತಿ ಹಾಗೂ ಮೋಯಿನ್ ಅಲಿ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿಗಳನ್ನು ಕಾಡಬೇಕಿದೆ.

KKR and CSK Set for High-Stakes Clash at Eden Gardens to Keep Playoff Hopes Alive

ಯುವಕರೇ ಆಧಾರ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಯುಷ್ ಮಾತ್ರೆ ಭರವಸೆಯ ಮೂಡಿಸಿದ್ದಾರೆ. ಆರ್‌ಸಿಬಿ ವಿರುದ್ಧ ಶತಕ ವಂಚಿತರಾಗಿದ್ದಾ ಮಾತ್ರೆ ಎಲ್ಲರ ಗಮನ ಸೆಳೆದಿದ್ದರು. ಇವರು ಬುಧವಾರ ಕಣಕ್ಕೆ ಇಳಿಯಲಿದ್ದು ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿರಲಿವೆ. ಇನ್ನು ಶೇಕ್ ರಶೀದ್ ಇನ್ನೋರ್ವ ಆರಂಭಿಕ ಆಟಗಾರನಾಗಿ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್‌. ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್‌, ಡೇವಲ್ಡ್ ಬ್ರೇವಿಸ್, ರವೀಂದ್ರ ಜಡೇಜಾ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ಜವಾಬ್ದಾರಿಗೆ ಅನುಸಾರವಾಗಿ ಈ ಆಟಗಾರರು ಆಡುವ ಅನಿವಾರ್ಯತೆ ಇದೆ. ಚೆನ್ನೈ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮತೀಶ್ ಪತಿರಾಣ್ ಬಿಗುವಿನ ದಾಳಿ ನಡೆಸಬೇಕಿದೆ. ಇನ್ನು ಸ್ಪಿನ್ ಬೌಲರ್ ನೂರ್ ಅಹ್ಮದ್‌ ಎದುರಾಳಿ ಬ್ಯಾಟರ್‌ಗಳಿಗೆ ಕಾಡಬಲ್ಲರು. ಚೆನ್ನೈ ಸಂಘಟಿತ ಆಟ ನೀಡಿದ್ದೇ ಆದಲ್ಲಿ ಗೆಲುವು ಸಾಧ್ಯ.

Story first published: Wednesday, May 7, 2025, 8:04 [IST]
Other articles published on May 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+