Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಕೆಕೆಆರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾಗೆ ಕೊರೊನಾ ವೈರಸ್: ವರದಿ

KKR batsman nitish rana tests positive for COVID-19: Report

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣಾಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ನಿತೀಶ್ ರಾಣಾ ಅವರನ್ನು ಕೆಕೆಆರ್ ತಂಡದಿಂದ ಪ್ರತ್ಯೇಕಗೊಳಿಸಿ ಇರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ನಿತೀಶ್ ರಾಣಾ ಐಪಿಎಲ್‌ಗೆ ಕೆಕೆಆರ್ ತಂಡವನ್ನು ಕೂಡಿಕೊಳ್ಳುವ ಮುನ್ನ ಗೋವಾಕ್ಕೆ ತೆರಳಿ ರಜಾ ದಿನಗಳನ್ನು ಕಳೆದಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಡೆಸಿದ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನಿತೀಶ್ ರಾಣಾಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ನಿತೀಶ್ ರಾಣಾ ಇತ್ತೀಚೆಗೆ ನಡೆಸಿದ್ದ ದೇಶೀಯ ಕ್ರಿಕೆಟ್ ಟೂರ್ನಿಗಳಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಅವರು ಗೋವಾಗೆ ತೆರಳಿ ರಜಾ ದಿನಗಳನ್ನು ಕಳೆದ ಬಳಿಕ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು.

ಆದರೆ ನಿತೀಶ್ ರಾಣಾಗೆ ಕೊರೊನಾ ವೈರಸ್ ದೃಢಪಟ್ಟಿರುವುದನ್ನು ಈವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ದಿನಪತ್ರಿಕೆ 'ದೈನಿಕ್ ಭಾಸ್ಕರ್' ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದು ಕೊಲ್ಕತ್ತಾ ಶಿಬಿರದಿಂದ ರಾಣಾ ದೂರವಿದ್ದು ವೈದ್ಯರಿಂದ ಮುಂಬೈನ ಹೋಟೆಲ್‌ನಲ್ಲಿ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಕಳೆದ ಆವೃತ್ತಿಯ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನು ಮೂಡಿಸಿತ್ತು. ಯುಎಇನಲ್ಲಿ ನಡೆಸ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೂವರು ಆಟಗಾರರು ಸಹಿತ 10ಕ್ಕೂ ಹೆಚ್ಚು ಸಿಬ್ಬಂದಿಗಳಿಗೂ ಕೊರೊನಾ ವೈರಸ್ ತಗುಲಿ ಆತಂಕ ಮೂಡಿಸಿತ್ತು. ಈಗ ಮತ್ತೊಮ್ಮೆ ಅಂತಾ ಆತಂಕ ಸ್ಥಿತಿ ಉಂಟಾದಂತೆ ಕಂಡು ಬರುತ್ತಿದೆ.

Story first published: Thursday, April 1, 2021, 17:47 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+