IPL 2024: KKR ಚಿಂತೆ ಹೆಚ್ಚಿಸಿದ 'ದುಬಾರಿ' ಆಟಗಾರ
ಇನ್ನೇನು ಎರಡು ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳಿ ಕಾದಾಟ ನಡೆಸಲಿವೆ. ಈ ಪಂದ್ಯ ರೋಚಕತೆ ಹೆಚ್ಚಿಸಿದೆ. 17ನೇ ಆವೃತ್ತಿಗೆ ಎಲ್ಲ ತಂಡಗಳು ಭರದ ಸಿದ್ಧತೆ ನಡೆಸಿವೆ. ಆದರೆ, ಕೆಕೆಆರ್ ಅಭ್ಯಾಸ ಪಂದ್ಯದಿಂದಲೇ ಟೆನ್ಷನ್ ಹಚ್ಚಿಸಿಕೊಂಡಿದೆ.
ಐಪಿಎಲ್ 2024 ರ ಋತುವಿನ ಅತ್ಯಂತ ದುಬಾರಿ ಆಟಗಾರ, ಮಿಚೆಲ್ ಸ್ಟಾರ್ಕ್ ಕೆಲವು ದಿನಗಳ ಹಿಂದೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ ಎಲ್ಲರಂತೆ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಸ್ಟಾರ್ ಆಟಗಾರರಿಗೆ ಕೆಕೆಆರ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಸ್ಟಾರ್ಕ್ 24 ಕೋಟಿ 75 ಲಕ್ಷ ರೂ. ಪಡೆದಿದ್ದಾರೆ.

ಅಭ್ಯಾಸದಲ್ಲಿ ಸ್ಟಾರ್ಕ್ ಫ್ಲಾಪ್!
ಸ್ಟಾರ್ಕ್ ವೇಗದ ಬೌಲಿಂಗ್ ದಾಳಿಯ ಮೇಲೆ ಕೆಕೆಆರ್ ಭರವಸೆ ಹೆಚ್ಚಿದೆ. ಅದೇ ಸಮಯದಲ್ಲಿ, KKR ತಂಡವು ಋತುವಿನ ಆರಂಭದ ಮೊದಲು ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನು ಆಡುತ್ತಿದೆ, ಈ ಪಂದ್ಯವೇ ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ದ್ವಿಗುಣ ಗೊಳಿಸಿದೆ.
ಸ್ಟಾರ್ಕ್ ಮೈಚಳಿ ಬಿಡಿಸಿದ ರಿಂಕು
ಅಭ್ಯಾಸ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ರಿಂಕು ಸಿಂಗ್ ಆಡಿದ ಧಾಟಿ ಈಗ ಸಖತ್ ವೈರಲ್ ಆಗುತ್ತಿದೆ. ಕೆಕೆಆರ್ ತವರು ಅಂಗಳ ಈಡನ್ ಗಾರ್ಡನ್ಸ್‌ನಲ್ಲಿ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ಟೀಮ್ ಪರ್ಪಲ್ ಮತ್ತು ಟೀಮ್ ಗೋಲ್ಡ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸ್ಟಾರ್ಕ್ ಅವರ ಪ್ರದರ್ಶನ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಒಂದೇ ಓವರ್‌ನಲ್ಲಿ 20 ರನ್ ಬಾರಿಸಿದ ರಿಂಕು
ಈ ಪಂದ್ಯದಲ್ಲಿ ಸ್ಟಾರ್ಕ್ ಅವರು ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 20 ರನ್ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಇವರು ಅಭ್ಯಾಸ ಪಂದ್ಯದಲ್ಲಿ ಮಾಡಿದ 4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಪಡೆಯಲು ಸಫಲರಾಗಿದ್ದಾರೆ. ಅಲ್ಲದೆ ಒಟ್ಟು 40 ರನ್ ನೀಡಿದ್ದಾರೆ. ಈ ಸಮಯದಲ್ಲಿ, ರಿಂಕು ಸಿಂಗ್ ಸ್ಟಾರ್ಕ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದರು.
ಕೊನೆಯ ಓವರ್‌ನಲ್ಲಿ ಸ್ಟಾರ್ಕ್ ಚೆಂಡನ್ನು ಯಾರ್ಕರ್ ಮಾಡಲು ಪ್ರಯತ್ನಿಸಿದರು. ಈ ಚೆಂಡನ್ನು ರಿಂಕು ಮುಂದೆ ಬಂದು ಫುಲ್ ಟಾಸ್ ಆಗಿ ಪರಿವರ್ತಿಸಿದರು. ಇನ್ನೊಂದು ಚೆಂಡು ಮೊಣಕಾಲಿನ ಕೆಳಗಿತ್ತು ಇದನ್ನು ಸ್ಕ್ವೇರ್ ಲೆಗ್ ಕಡೆಗೆ ಸಿಕ್ಸರ್‌ಗೆ ಕಳುಹಿಸಿದರು. ಕಳೆದ ಐಪಿಎಲ್ ಸೀಸನ್‌ನಲ್ಲಿ ರಿಂಕು ಸಿಂಗ್ ಉತ್ತಮ ಆಟವಾಡಿ ಗಮನ ಸೆಳೆದಿದ್ದರು. ಕೆಕೆಆರ್ ತಂಡ ಅವರಿಗೆ ನೀಡಿದ್ದ ಫಿನಿಶರ್ ಪಾತ್ರವನ್ನು ರಿಂಕು ಉತ್ತಮವಾಗಿ ನಿರ್ವಹಿಸಿದ್ದಾರೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬಹಳ ಸಮಯದ ನಂತರ ಐಪಿಎಲ್‌ನಲ್ಲಿ ಆಡಲಿದ್ದಾರೆ. ಅವರು ಕೊನೆಯ ಬಾರಿ 2015 ರ ಋತುವಿನಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದ ಸ್ಟಾರ್ಕ್ ಗಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಳೆದ ಹಲವಾರು ಐಪಿಎಲ್ ಸೀಸನ್‌ಗಳಲ್ಲಿ ಆಡಲಿಲ್ಲ. ಅವರು 2014 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಇವರು ಆರ್‌ಸಿಬಿ ಪರ ಎರಡೂ ಸೀಸನ್‌ಗಳನ್ನು ಆಡಿದ್ದಾರೆ. ಸ್ಟಾರ್ಕ್ ಐಪಿಎಲ್‌ನಲ್ಲಿ 27 ಪಂದ್ಯ ಆಡಿದ್ದು 34 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications