Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Harshit Rana: ಬಿಸಿಸಿಐ ಕಠಿಣ ಶಿಕ್ಷೆಗೆ ಗುರಿಯಾದ ಕೆಕೆಆರ್‌ ಬೌಲರ್‌ ಹರ್ಷಿತ್‌ ರಾಣಾ

ಸೋಮವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವು ಸಾಧಿಸಿತ್ತು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡರು 153 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟ 157 ರನ್ ಹೊಡೆದು ಗೆಲುವಿನ ದಡ ಸೇರಿತ್ತು. ಕೆಕೆಆರ್‌ ಪರ ಫಿಲಿಪ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್‌ ಮಾಡಿ ಅರ್ಧಶತಕ ಬಾರಿಸಿದ್ದರು.

KKR bowler Harshit Rana was severely punished by BCCI

ಈ ಪಂದ್ಯ ಕೆಕೆಆರ್‌ ವೇಗದ ಬೌಲರ್‌ ಹರ್ಷಿತ್‌ ರಾಣಾ ಎರಡನೇ ಬಾರಿಗೆ ದಂಡಕ್ಕೆ ಗುರಿಯಾಗಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಯುವ ಬ್ಯಾಟರ್‌ ಅಭಿಷೇಕ್‌ ಪೊರೆಲ್‌ ಉತ್ತಮ ಲಯದಲ್ಲಿದ್ದರು. ಈ ಮೂಲಕ ನಿಧಾನವಾಗಿ ರನ್‌ ಗಳಿಸುತ್ತಿದ್ದರು. ಈ ವೇಳೆ ದಾಳಿಗಿಳಿದ ಕೆಕೆಆರ್‌ ವೇಗಿ ಹರ್ಷಿತ್‌ ರಾಣಾ ಅಭಿಷೇಕ್‌ ಪೊರೆಲ್‌ (18) ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಯಾದರು.

ಈ ವೇಳೆ ಹರ್ಷಿತ್‌ ರಾಣಾ ಮಾಡಿದ ಸಂಭ್ರಮಾಚರಣೆ ಬಹಳ ಕೆಟ್ಟಾದಗಿತ್ತು. ಪೊರೆಲ್‌ ಬೋಲ್ಡ್‌ ಆಗುತ್ತಿದ್ದಂತೆ ಹೊರಗೆ ನಡಿ ಎಂದು ಹರ್ಷಿತ್‌ ರಾಣಾ ಸನ್ನೆ ಮಾಡಿ ತೋರಿಸಿದ್ದರು. ಹೀಗಾಗಿ ಎರಡನೇ ಬಾರಿಗೆ ಭಾರಿ ಪ್ರಮಾಣದಲ್ಲಿ ದಂಡಕ್ಕೆ ಗುರಿಯಾಗಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರಿಗೆ ಪಂದ್ಯ ಶುಲ್ಕದ ಶೇ.100ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ, ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ.

ಫ್ಲೈಯಿಂಗ್ ಕಿಸ್‌ ಕೊಟ್ಟಿದಕ್ಕೆ ಬಿತ್ತು ದಂಡ :

KKR bowler Harshit Rana was severely punished by BCCI

ಇದಕ್ಕೂ ಮುನ್ನ ಮಾರ್ಚ್ 23 ರಂದು ಈಡನ್ ಗಾರ್ಡನ್ಸ್‌ನಲ್ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲೂ ಹರ್ಷಿತ್‌ ರಾಣಾ ಇದೇ ರೀತಿ ವರ್ತನೆ ತೋರಿದ್ದರು. ಹೈದರಾಬಾದ್ ವಿರುದ್ಧ ಕೆಕೆಆರ್‌ 4 ರನ್‌ಗಳ ಜಯ ಕಂಡಿತ್ತು. ಈ ಗೆಲುವಿನಲ್ಲಿ ತಮ್ಮ ಅದ್ಭುತ ಅಂತಿಮ ಓವರ್‌ ಮೂಲಕ ಹೀರೋ ಆಗಿ ಹೊರಹೊಮ್ಮಿದ ಹರ್ಷಿತ್‌ ರಾಣಾ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮೊದಲು ಹೈದರಾಬಾದ್ ಆರಂಭಿಕ ಮಯಾಂಕ್‌ ಅಗರ್ವಾಲ್‌ ವಿಕೆಟ್‌ ಅನ್ನು ಹರ್ಷಿತ್‌ ರಾಣಾ ಪಡೆದಿದ್ದರು. ಈ ವೇಳೆ ಪೆವಿಲಿಯನ್‌ ಕಡೆ ಔಟ್‌ ಆಗಿ ಹೋಗುತ್ತಿದ್ದ ಮಯಾಂಕ್‌ ಅಗರ್ವಾಲ್‌ ಕಡೆಗೆ ಫ್ಲೈಯಿಂಗ್ ಕಿಸ್ ಮಾಡಿ ಕೋಪದಿಂದ ನೋಡಿದ್ದರು. ಈ ನಡೆಯನ್ನು ಕ್ರಿಕೆಟ್‌ ಅಭಿಮಾನಿಗಳು ಸರಿಯಿಲ್ಲ ಎಂದು ಟೀಕಿಸಿದ್ದರು. ಅಲ್ಲದೆ ಹಲವು ಕ್ರಿಕೆಟಿಗರು ಸಹಾ ಹಿರಿಯ ಆಟಗಾರರಿಗೆ ಈ ರೀತಿ ಅಗೌರವ ತೋರುವುದು ತಪ್ಪು ಎಂದಿದ್ದರು.

ಈ ಸಂದರ್ಭದಲ್ಲೂ ಹರ್ಷಿತ್‌ ರಾಣಾ ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಎರಡು ಹಂತ 1 ಅಪರಾಧಗಳನ್ನು ಮಾಡಿದ್ದಾರೆ ಎಂದು ಪಂದ್ಯದ ಶುಲ್ಕದ ಶೇ.50% ರಷ್ಟು ದಂಡವನ್ನು ವಿಧಿಸಲಾಗಿತ್ತು.

Story first published: Wednesday, May 1, 2024, 8:06 [IST]
Other articles published on May 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+