KKR vs RR: 1 ರನ್ ರೋಚಕ ಜಯ ದಾಖಲಿಸಿದ ಕೆಕೆಆರ್ ಪ್ಲೇ ಆಫ್ ಆಸೆ ಜೀವಂತ
ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ರೋಚಕ ಜಯ ದಾಖಲಿಸಿದೆ. ಕೊನೆಯ ಓವರ್ ವರೆಗೂ ರೋಚಕತೆ ಹೆಚ್ಚಿಸಿದ್ದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಪಡೆ ರೋಚಕ ಜಯ ಸಾಧಿಸಿ, 2 ಪೂರ್ಣ ಅಂಕಗಳನ್ನು ಕಲೆ ಹಾಕಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 206 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಸೇರಿಸಿ ಸೋಲು ಕಂಡಿತು.

ಸವಾಲಿನ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ವೈಭವ್ ಸೂರ್ಯವಂಶಿ (4), ಕುನಾಲ್ ಸಿಂಗ್ ರಾಠೋರ್ (0) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕ ಯಶಸ್ವಿ ಜೈಸ್ವಾಲ್ ಅಮೋಘ ಲಯದಲ್ಲಿ ಕಂಡು ಬಂದರು. ಈ ವೇಳೆ ಜೈಸ್ವಾಲ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇನ್ನು ಧ್ರುವ್ ಜುರೇಲ್ ಸೊನ್ನೆ ಸುತ್ತಿದರು. ಆಲ್‌ರೌಂಡರ್ ವನಿಂದು ಹಸರಂಗ ಸಹ ಬಂದು ಹೋಗುವ ಸಂಪ್ರದಾಯ ಮುಗಿಸಿದರು.
ಪರಾಗ್ 95
71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಯಾನ್ ಪರಾಗ್ ಹಾಗೂ ಶಿಮ್ರೋನ್ ಹೆಟ್ಮೆಯರ್ ಜೋಡಿ ಆಸರೆಯಾಯಿತು. ಈ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಆರನೇ ವಿಕೆಟ್‌ಗೆ ಪರಾಗ್ ಹಾಗೂ ಹೆಟ್ಮೆಯರ್ 48 ಎಸೆತಗಳಲ್ಲಿ 92 ರನ್ ಸಿಡಿಸಿದರು. ಈ ವೇಳೆ ಶಿಮ್ರೋನ್ ಹೆಟ್ಮೆಯರ್ 29 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ನಾಯಕ ರಿಯಾನ್ ಪರಾಗ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 5 ರನ್‌ಗಳಿಂದ ಶತಕ ವಂಚಿತರಾದರು. ಆದರೆ ಇವರ ಅಬ್ಬರದ ಬ್ಯಾಟಿಂಗ್‌ಗೆ ಅಭಿಮಾನಿಗಳು ಮನಸೋತರು. ಇವರು 6 ಬೌಂಡರಿ, 8 ಸಿಕ್ಸರ್ ಸಹಾಯದಿಂದ 95 ರನ್ ಸಿಡಿಸಿದರು. ಶುಭಂ ದುಬೆ ಅಜೇಯ 25 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಕೆಕೆಆರ್ ತಂಡದ ಪರ ಮೋಯಿನ್ ಅಲಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಕಬಳಿಸಿದರು.

ರಸೆಲ್ ಬಿರುಸಿನ ಅರ್ಧಶತಕ
ಕೆಕೆಆರ್ ತಂಡದ ಆರಂಭಿಕ ಸುನಿಲ್ ನರೈನ್ (11) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ರಹಮತುಲ್ಲಾ ಗುರ್ಬಾಜ್ (35) ಹಾಗೂ ಅಜಿಂಕ್ಯಾ ರಹಾನೆ ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮೂರನೇ ವಿಕೆಟ್‌ಗೆ ಅಂಗ್‌ಕ್ರಿಶ್ ರಘುವಂಶಿ ಹಾಗೂ ರಹಾನೆ 42 ರನ್ ಜೊತೆಯಾಟದ ಕಾಣಿಕೆ ನೀಡಿದರು. ನಾಲ್ಕನೇ ವಿಕೆಟ್‌ಗೆ ಅಂಗ್‌ಕ್ರಿಶ್ ರಘುವಂಶಿ (44) ಹಾಗೂ ಆಂಡ್ರೆ ರಸೆಲ್ 25 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications