ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸುವ 10 ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ ಇಂತಹದ್ದೇ ಒಂದು ಕನಸನ್ನು ಹೊತ್ತಿಕೊಂಡು ಈ ಬಾರಿ ಕಣಕ್ಕೆ ಇಳಿಯಲಿದೆ. ಲೀಗ್ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದಿಂದ ಚೇತರಿಸಿಕೊಂಡಿಲ್ಲ. ಇವರು ಐಪಿಎಲ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಕೆಕೆಆರ್ ತಂಡ ಹರ್ಷಿತ್ ರಾಣಾ ಬದಲಿಗೆ ಬೇರೆ ಆಟಗಾರರನ್ನು ನೋಡುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಕೆಕೆಆರ್ ನಂಬುವಂತೆ ತಮ್ಮ ಬಳಿ ಸಾಕಷ್ಟು ವೇಗದ ಬೌಲಿಂಗ್ ಆಯ್ಕೆಗಳಿವೆ ಮತ್ತು ಹರ್ಷಿತ್ ಬದಲಿಗೆ ಬೇರೆ ಆಟಗಾರರ ಅಗತ್ಯವಿಲ್ಲ ಎಂದು ಲೆಕ್ಕಾಚಾರ ಹಾಕಿಕೊಂಡಿದೆ.

ಶ್ರೀಲಂಕಾದ ವೇಗದ ಬೌಲರ್ ಮತೀಶ ಪತಿರಾಣ್ ಸಹ ಲೀಗ್‌ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳಿವೆ. ಟಿ20 ವಿಶ್ವಕಪ್ ಸಮಯದಲ್ಲಿ ಮತೀಶ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು. ಇವರು 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಸಂದೇಹವಿದೆ. ಕೆಕೆಆರ್ ಇವರನ್ನು ಮಿನಿ ಹರಾಜಿನಲ್ಲಿ 18 ಕೋಟಿ ರೂ. ನೀಡಿ ಖರೀದಿಸಿತ್ತು.
ಕ್ರಿಕ್‌ಬಜ್ ವರದಿಯ ಪ್ರಕಾರ, ಕೆಕೆಆರ್ ಗಾಯಾಳು ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ಹುಡುಕುತ್ತಿಲ್ಲ. ವೈಭವ್ ಅರೋರಾ, ಉಮ್ರಾನ್ ಮಲಿಕ್, ಆಕಾಶ್ ದೀಪ್ ಮತ್ತು ಕಾರ್ತಿಕ್ ತ್ಯಾಗಿ ಕೋಲ್ಕತ್ತಾ ತಂಡದ ಭಾಗವಾಗಿದ್ದಾರೆ. ಇವರ ಮೇಲೆ ತಂಡ ನಂಬಿಕೆ ಇಟ್ಟಿದೆ.

ಕೆಕೆಆರ್ ತಂಡ ಇತ್ತೀಚಿಗೆ ಜಿಂಬಾಬ್ವೆ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರು ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದರು. ಜಿಂಬಾಬ್ವೆ ತಂಡದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಸ್ಥಾನ. ಅವರ ಆಗಮನವು ನಿಸ್ಸಂದೇಹವಾಗಿ ಕೆಕೆಆರ್‌ನ ಬೌಲಿಂಗ್ ಘಟಕವನ್ನು ಬಲಪಡಿಸಿದೆ.
ಹರ್ಷಿತ್ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 2024 ರ ಋತುವಿನಲ್ಲಿ 19 ವಿಕೆಟ್, ಕಳೆದ ಆವೃತ್ತಿಯಲ್ಲಿ 15 ವಿಕೆಟ್ ಪಡೆದು ಭರವಸೆ ಮೂಡಿಸಿದ್ದರು.
ಕೋಲ್ಕತ್ತಾ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29 ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ಆಡಲಿದೆ. ಎರಡನೇ ಪಂದ್ಯವನ್ನು ಈಡನ್ ಗಾರ್ಡನ್‌ನಲ್ಲಿ ಎಸ್‌ಆರ್‌ಎಚ್ ವಿರುದ್ಧ ಏ.2 ರಂದು, ತವರು ಅಭಿಮಾನಿಗಳ ಸಮ್ಮುಖದಲ್ಲಿ ಏ.6 ರಂದು ಪಂಜಾಬ್ ವಿರುದ್ಧ, ನಾಲ್ಕನೇ ಪಂದ್ಯವನ್ನು ಈಡನ್ ಮೈದಾನದಲ್ಲಿ ಏ.9 ರಂದು ಲಕ್ನೋ ವಿರುದ್ಧ ಆಡಲಿದೆ.