ಈ ಫ್ರಾಂಚೈಸಿಯ ಯಾವ ತಂಡದಲ್ಲಾದರೂ ಆಡಲು ಸಿದ್ದ ಎಂದ ಸುನಿಲ್ ನರೈನ್

ವೆಸ್ಟ್ ಇಂಡೀಸ್‌ನ ಸ್ಪಿನ್ ಬೌಲರ್ ಸುನಿಲ್ ನರೈನ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ಸು ಕಂಡ ಆಟಗಾರ. ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಮಾತ್ರವಲ್ಲ ಬ್ಯಾಟಿಂಗ್ ಮೂಲಕವೂ ಮಿಂಚುವಲ್ಲಿ ನರೇನ್ ಯಶಸ್ವಿಯಾಗಿದ್ದಾರೆ. ಈಗ ತಾನು ಪ್ರತಿನಿಧಿಸುವ ತಂಡದ ಫ್ರಾಂಚೈಸಿ ಬಗ್ಗೆ ನರೈನ್ ಹೇಳಿಕೆಯನ್ನು ನೀಡಿದ್ದಾರೆ.
ವಿಶ್ವದ ಯಾವುದೇ ಭಾಗದಲ್ಲಾದರೂ ನಡೆಯುವ ಟೂರ್ನಮೆಂಟ್‌ನಲ್ಲಿ ನೈಟ್ ರೈಡರ್ಸ್ ಫ್ರಾಂಚೈಸಿ ತಂಡವನ್ನು ಹೊಂದಿದ್ದರೆ ನಾನು ಆ ತಂಡದ ಭಾಗವಾಗಲು ಬಯಸುತ್ತೇನೆ ಎಂದಿದ್ದಾರೆ ನರೈನ್. ಇದು ಹಣಕ್ಕಾಗಿ ಅಂತವಾ ಹಣಕ್ಕಾಗಿ ಅಂತಲ್ಲ. ಅದು ನನ್ನ ಕುಟುಂಬದಂತೆ ಆಗಿಬಿಟ್ಟಿದೆ ಎಂದು ಹೇಳಿದ್ದಾರೆ ಸುನಿಲ್ ನರೈನ್.
ಸುನಿಲ್ ನರೈನ್ ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡವನ್ನು 2012ರಿಂದ ಪ್ರತಿನಿಧಿಸುತ್ತಿದ್ದಾರೆ. ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ನೈಟ್ ರೈಡರ್ಸ್ ಫ್ರಾಂಚೈಸಿ ಟ್ರಿನ್‌ಬ್ಯಾಗೋ ನೈಟ್ ಟೈಡರ್ಸ್ ತಂಡವನ್ನು ಹೊಂದಿದೆ. ಅಲ್ಲಿಯೂ ಸುನಿಲ್ ನರೈನ್ ಈ ತಂಡದ ಭಾಗವಾಗಿದ್ದಾರೆ.
32ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸುನಿಲ್ ನರೈನ್ ಕೆಕೆಆರ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಪ್ರತಿ ಬಾರಿ ಬಂದಾಗಲೂ ಅಭೂತಪೂರ್ವ ಸ್ವಾಗತ ದೊರೆಯುತ್ತದೆ. ನಮಗೆ ಎಲ್ಲವೂ ಆರಾಮದಾಯಕವಾಗಿರುವಂತೆ ವ್ಯವಸ್ಥೆಗಳಾಗಿರುತ್ತದೆ. ಪ್ರತಿ ವರ್ಷ ಇಲ್ಲಿಂದ ವಾಪಾಸ್ ತೆರಳುವಾಗಲೂ ನನಗೆ ಎರಡನೇ ಮನೆಯನ್ನು ಬಿಟ್ಟು ತೆರಳುತ್ತಿರುವ ಭಾವನೆಯುಂಟಾಗುತ್ತದೆ ಎಂದು ಸುನಿಲ್ ನರೈನ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಆಡುವುದೆಂದರೆ ನನಗೆ ತವರಿನಲ್ಲಿ ಆಡುವಷ್ಟೇ ಹತ್ತಿರವಾಗಿದೆ ಎಂದಿರುವ ಸುನಿಲ್ ನರೈನ್ ಈ ಬಾರಿ ಐಪಿಎಲ್‌ನ ಉತ್ಸಾಹ, ಅಭಿಮಾನಿಗಳು, ಪ್ರೀತಿಪಾತ್ರರ ನೋಡುವ ಉತ್ಸಾಹವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸುನಿಲ್ ನರೈನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications