KKR Mock Auction: ರಿಷಭ್ ಪಂತ್‌ಗೆ 18.75 ಕೋಟಿ ರೂ., ಬಟ್ಲರ್‌ಗೆ 17.25 ಕೋಟಿ ರೂ.
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಿದೆ. ಈ ಲೀಗ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಹಲವು ತಂಡಗಳು ಐಪಿಎಲ್ ಹರಾಜಿಗೆ ಅಣಕು ಹರಾಜು ನಡೆಸುತ್ತಿವೆ. ಇತ್ತೀಚಿಗೆ ಆರ್‌ಸಿಬಿ ಸಹ ಮಾಕ್ ಆಕ್ಷನ್ ನಡೆಸಿ ಎಲ್ಲರ ಚಿತ್ತ ಕದ್ದಿತ್ತು. ಈಗ ಕೋಲ್ಕತಾ ನೈಟ್ ರೈಡರ್ಸ್ ಸಹ ಕೆಕೆಆರ್ ಅಣಕು ಹರಾಜು ನಡೆಸಿ ಎಲ್ಲರ ಚಿತ್ತ ಕದ್ದಿದೆ.
ಕೋಲ್ಕತಾ ನೈಟ್ ರೈಡರ್ಸ್ ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನಾರಯಣ್, ಆಂಡ್ರಿ ರಸೆಲ್, ಹರ್ಷಿತ್ ರಾಣಾ, ರಮಣದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಕೆಕೆಆರ್ ತಂಡಕ್ಕೆ ಚಾಂಪಿಯನ್ ಪಟ್ಟಕ್ಕೆ ತೋಡಿಸಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಹ ಕೈ ಬಿಟ್ಟಿದೆ. ಹೀಗಾಗಿ ಕೆಕೆಆರ್ ಒಳ್ಳೆಯ ಕ್ಯಾಪ್ಟನ್ ಹುಡುಕಾಟ ನಡೆಸಿದೆ.

ಕೋಲ್ಕತಾ ನೈಟ್ ರೈಡರ್ಸ್ 63 ಕೋಟಿ ರೂಪಾಯಿ ಹೊಂದಿದ್ದು, ಆಟಗಾರರನ್ನು ಖರೀದಿ ಮಾಡಲು ಹೂಡಲಿದೆ. ಈ ನಿಟ್ಟಿನಲ್ಲಿ ಕೆಕೆಆರ್ ಅಣಕು ಹರಾಜು ನಡೆಸಿತು. ಕೆಕೆಆರ್ ಫ್ರಾಂಚೈಸಿ ಒಟ್ಟು 30 ಸೂಪರ್ ಅಭಿಮಾನಿಗಳನ್ನು ಒಟ್ಟುಗೂಡಿಸಿ, ಐದು ಗುಂಪುಗಳಾಗಿ ವಿಂಗಡಿಸಿದೆ. ಈ ಎಲ್ಲಾ ಸೂಪರ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಬಿಡ್ ಮಾಡುತ್ತಾರೆ.
ಪಂತ್‌ಗೆ 18.75 ಕೋಟಿ ರೂ.
ನಾಯಕನ ಹುಡುಕಾಟದಲ್ಲಿರುವ ಕೆಕೆಆರ್ ಸ್ಟಾರ್ ಆಟಗಾರನ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್ ಅವರಿಗೆ ಮಣೆ ಹಾಕಲಿದೆ. ಇವರು ಮಿಡ್ಲ್ ಆರ್ಡರ್ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು. ಅಲ್ಲದೆ ಇವರು ನಾಯಕನಾಗಿ ಮಿಂಚು ಹರಿಸಿದ್ದಾರೆ. ಹೀಗಾಗಿ ಇವರಿಗೆ ಕೆಕೆಆರ್ ಬಿಡ್ ಮಾಡಲಿದೆ.

ಈ ಅಣಕು ಹರಾಜು ನವೆಂಬರ್ 13 ರಂದು ನಡೆದಿದ್ದು, ಇದರಲ್ಲಿ ಪಂತ್‌ಗೆ 18.75 ಕೋಟಿ ರೂ. ಬಿಡ್ ಮಾಡಲಾಗಿದೆ. ಕೆಕೆಆರ್ ಮ್ಯಾನೇಜ್ಮೆಂಟ್ ತನ್ನ ಸೂಪರ್ ಅಭಿಮಾನಿಗಳನ್ನು ಐದು ತಂಡಗಳಲ್ಲಿ ವಿಂಗಡಿಸಿತ್ತು. ನೋಬಲ್ ನೈಟ್ಸ್, ಪರ್ಪಲ್ ನೈಟ್ಸ್, ಗೋಲ್ಡನ್ ನೈಟ್ಸ್, ಥಂಡರ್ ನೈಟ್ಸ್ ಮತ್ತು ರೀಗಲ್ ನೈಟ್ಸ್ ಎಂದು ಹರಾಜಿನ ಅಂಗಳಕ್ಕೆ ಇಳಿದಿದ್ದವು. ಈ ಪೈಕಿ ಪಂತ್ ಅವರನ್ನು ಗೋಲ್ಡನ್ ನೈಟ್ಸ್ 18.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
ಬಟ್ಲರ್‌ಗೆ ಬಂಪರ್
ಕೆಕೆಆರ್ ನಡೆಸಿದ ಅಣಕು ಹರಾಜಿನಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎಂಬ ಕೀರ್ತಿ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಅವರಿಗೆ ಸಲ್ಲುತ್ತದೆ. ಇವರು 17.25 ಕೋಟಿ ರೂ. ನೀಡಿ ಖರೀದಿಸಿದೆ. ವೆಂಕಟೇಶ್ ಅಯ್ಯರ್ ಅವರಿಗೆ ಕೆಕೆಆರ್ 14.75 ಕೋಟಿ ರೂ. ನೀಡಿ ಖರೀದಿಸಲು ಮನಸ್ಸು ಮಾಡಿದೆ. ಇನ್ನು ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ 4.4 ಕೋಟಿ ರೂಪಾಯಿ ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications