ಲಂಡನ್ನಿಗೆ ಹೋಗಿಲ್ಲ, ಲಮೋ ಭೇಟಿ ಮಾಡಿಲ್ಲ: ಶಾರುಖ್
ಮುಂಬೈ, ಜೂ.30: ಐಪಿಎಲ್ ಹಗರಣದ ಆರೋಪ ಹೊತ್ತಿರುವ ಲಂಡನ್ ನಿವಾಸಿ ಲಲಿತ್ ಮೋದಿ ಅವರನ್ನು ಭೇಟಿ ಮಾಡಿದ ಎಂಬ ಸುದ್ದಿಯನ್ನು ಶಾರುಖ್ ಖಾನ್ ತಳ್ಳಿಹಾಕಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿರುವ ಶಾರುಖ್ ಅವರು ಇತ್ತೀಚೆಗೆ ಯುರೋಪ್ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಲಂಡನ್ನಿಗೆ ತೆರಳಿ ಲಲಿತ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಹಾಗೂ ಅಳಿಯ ರಾಬರ್ಟ್ ಅವರನ್ನು ಲಮೋ ಭೇಟಿ ಮಾಡಿದ ಸುದ್ದಿಯ ನಂತರ ಶಾರುಖ್ ಖಾನ್ ಅವರನ್ನು ವಿಸೀಟರ್ಸ್ ಪಟ್ಟಿಗೆ ಸೇರಿಸಲಾಗಿತ್ತು.
ಅದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾರುಖ್, ನಾನು ಬಲ್ಗೇರಿಯಾಕ್ಕೆ ಹೋಗಿದ್ದೆ. ಚಿತ್ರವೊಂದರ ಶೂಟಿಂಗ್ ನಲ್ಲಿ ನಿರತನಾಗಿದ್ದೇನೆ. ಲಂಡನ್ನಿಗೆ ಹೋಗಿಲ್ಲ ಹಾಗೂ ಲಮೋ ಭೇಟಿ ಮಾಡಿಲ್ಲ. ನನಗೆ ಯಾರನ್ನೇ ಆದರೂ ಭೇಟಿ ಮಾಡುವಷ್ಟು ಟೈಂ ಇರಲಿಲ್ಲ ನನ್ನ ಮಕ್ಕಳನ್ನು ಶಾಲೆಗೆ ಸೇರಿಸಬೇಕಿತ್ತು. ಐಪಿಎಲ್ ಹಗರಣ, ಮೋದಿ ಅವರ ವಿದೇಶಿ ವೀಸಾ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನ ತಂಡ(ಕೆಕೆಆರ್) ಕೂಡಾ ಹಗರಣಗಳಿಂದ ಮುಕ್ತವಾಗಿದೆ. ಕಳ್ಳಾಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಾರುಖ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications