RCB ಸೇರಿದಂತೆ ಮೂರು ತಂಡಗಳಿಂದ ಶಮಿಗೆ ಗಾಳ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಬಿಸಿಸಿಐ ಇತ್ತೀಚಿಗೆ ರಿಟೇನ್ಶನ್ ಲೀಸ್ಟ್ ರಿಲೀಸ್ ಮಾಡಿತ್ತು. ಮಾಲೀಕರು ಸಹ ಉಳಿಸಿಕೊಳ್ಳಬೇಕೆಂಬ ಆಟಗಾರರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ.
ಆರ್‌ಸಿಬಿ ಸಹ ಈ ಹಾರಿಜಿನಲ್ಲಿ ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಈ ಹಾರಜಿನಲ್ಲಿ ಆರ್‌ಸಿಬಿ ದೇಶೀಯ ವೇಗದ ಬೌಲರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಹಾಗಿದ್ದರೆ ಯಾವ ಪ್ಲೇಯರ್‌ಗೆ ಟಾರ್ಗೆಟ್ ಮಾಡಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ, ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಇವರು ತಮ್ಮ ಅನುಭವವನ್ನು ತಂಡದ ಪರ ಮಿಂಚಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಾಯದ ಸಮಸ್ಯೆಯಿಂದ ಶಮಿ ಅಂಗಳಕ್ಕೆ ಇಳಿದಿರಲಿಲ್ಲ. ಇನ್ನು ಗುಜರಾತ್ ಟೈಟನ್ಸ್ ಒಂದು ವೇಳೆ ಶಮಿ ಅವರಿಗೆ ಉಳಿಸಿಕೊಳ್ಳದೇ ಇದ್ದರೆ, ಇವರಿಗೆ ಲಾಟರಿ ಹೊಡೆಯುವ ಸಾಧ್ಯತೆ ಇದೆ. ಈ ಬಾರಿಯ ಐಪಿಎಲ್ ಹರಾಜಿಗೆ ಶಮಿ ಪ್ರವೇಶ ಪಡೆದರೆ ದೊಡ್ಡ ಮೊತ್ತವನ್ನು ಜೇಬಿಗೆ ಹಾಕಿಕೊಳ್ಳಬಹುದು. ಇವರಿಗೆ ಮೂರು ಮಾಲೀಕರು ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ.
ಶಮಿಗೆ ಆರ್‌ಸಿಬಿ ಟಾರ್ಗೆಟ್
ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ದೊಡ್ಡ ಆಟಗಾರರಿಗೆ ಟಾರ್ಗೆಟ್ ಮಾಡಲಿದೆ. ಶಮಿ ಅವರ ಟ್ರ್ಯಾಕ್ ರೆಕರ್ಡ್ ಅವರತ್ತ ಮಾಲೀಕರು ನೋಡುವಂತೆ ಮಾಡಿದೆ. ಆರ್‌ಸಿಬಿ ಕಳೆದ ಕೆಲವು ಆವೃತ್ತಿಗಳಲ್ಲಿ ಬೌಲಿಂಗ್ ಸಮಸ್ಯೆಯನ್ನು ಎದುರಿಸಿತ್ತು. ಒಂದು ವೇಳೆ ಮೊಹಮ್ಮದ್ ಶಮಿ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಸಿಕೊಂಡಿದ್ದೇ ಆದಲ್ಲಿ ಬೌಲಿಂಗ್ ಸಮಸ್ಯೆಗೆ ಗುಡ್ ಬಾಯ್ ಹೇಳಬಹುದು. ಇವರು ಮೊಹಮ್ಮದ್ ಸಿರಾಜ್ ಅವರೊಂದಿಗೆ ಬೌಲಿಂಗ್ ನೊಗವನ್ನು ಹೊತ್ತರೆ ತಂಡಕ್ಕೆ ಆಧಾರವಾಗಬಲ್ಲರು.

ಶಮಿ ಮೇಲೆ ಕೆಕೆಆರ್ ಕಣ್ಣು
ಮೊಹಮ್ಮದ್ ಶಮಿ ಈಗಾಗಲೇ ಕೆಕೆಆರ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಇವರ ಮೇಲೆ ಕೆಕೆಆರ್ ಒಂದು ಕಣ್ಣು ನೆಟ್ಟಿದೆ. ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಮ್ಮ ಸ್ಟಾರ್ ಆಟಗಾರರನ್ನು ರಿಲೀಸ್ ಮಾಡದೇ ಇದ್ದರೆ, ಕೆಕೆಆರ್ ಶಮಿ ಕಡೆ ಮುಖ ಮಾಡುವುದಿಲ್ಲ. ಒಂದು ವೇಳೆ ಪ್ರೈಮ್ ಬೌಲರ್‌ಗಳಲ್ಲಿ ಯಾರಾದ್ರೂ ಒಬ್ಬರನ್ನು ಬಿಟ್ಟರೂ ಅದು ಶಮಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಣದ ಹೊಳೆ ಹರಿಸಬಹುದು.
ಪಂಜಾಬ್ ಕಿಂಗ್ಸ್
2019ರ ಐಪಿಎಲ್ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ಪಂಜಾಬ್ ಕಿಂಗ್ಸ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯನ್ನು ಶಮಿ ಹೊಂದಿದ್ದಾರೆ. ಒತ್ತಡದ ಸನ್ನಿವೇಶದಲ್ಲಿ ಬಿಗುವಿನ ದಾಳಿಯನ್ನು ನಡೆಸಬಲ್ಲ ಕ್ಷಮತೆ ಹೊಂದಿರುವುದುರಿಂದ ಇವರನ್ನು ಕೊಳ್ಳಲು ಪಂಜಾಬ್ ಒಂದು ಕೈ ನೋಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications