KKRನಲ್ಲಿ ರಸೆಲ್ ಸ್ಥಾನವನ್ನು ತುಂಬುವುದು ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಗೆ ಭರದ ತಯಾರಿಗಳು ನಡೆದಿವೆ. ಈಗಾಗಲೇ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ವೇಳೆ ಕೆಕೆಆರ್ ತಂಡ ಸಹ ಪಟ್ಟಿ ರಿಲೀಸ್ ಮಾಡಿದೆ. ಈ ವೇಳೆ ತಂಡ ಸ್ಟಾರ್ ಪ್ಲೇಯರ್ ಒಬ್ಬರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಹಾಗಿದ್ದರೆ ಆ ಸ್ಟಾರ್ ಆಲ್‌ರೌಂಡರ್ ಸ್ಥಾನಕ್ಕಾಗಿ ಮಿನಿ ಹರಾಜಿನಲ್ಲಿ ಭರ್ಜರಿ ಹುಡುಕಾಟ ನಡೆಯಲಿದೆ. ಈ ವೇಳೆ ಕೆಕೆಆರ್ (KKR) ಆ ಪ್ಲೇಯರ್‌ನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಹಣದ ಹೊಳೆಯನ್ನೇ ಹರಿಸಲಿದೆ.
ಶಾರೂಖ್ ಖಾನ್ ಒಡೆತನದ ಕೆಕೆಆರ್ ತಂಡ ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ಸಂಘಟಿತ ಆಟ ತಂಡದಲ್ಲಿ ಎದ್ದು ಕಾಣುತ್ತಿತ್ತು. ಅಲ್ಲದೆ ಆ ಒಬ್ಬ ಪ್ಲೇಯರ್ ಕೊಡುಗೆಯನ್ನು ಸಹ ಕೆಕೆಆರ್ ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ಈ ಪ್ಲೇಯರ್ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡದ ಕಾರಣಕ್ಕೆ ಫ್ರಾಂಚೈಸಿ ಇವರಿಗೆ ಗೇಟ್ ಪಾಸ್ ನೀಡಿದೆ. ಈ ಪ್ಲೇಯರ್ ಅದೆಷ್ಟೋ ಪಂದ್ಯಗಳ ಗತಿಯನ್ನೇ ಬದಲಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆನೆ ಬಲ ತುಂಬಿದ್ದ ಪ್ಲೇಯರ್ ಈಗ ಹರಾಜು ಅಂಗಳ ಪ್ರವೇಶಿಸಲಿದ್ದಾರೆ.

ಕೆಕೆಆರ್ ಕೈ ಬಿಟ್ಟ ಆ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell). ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರನ್‌ಗಳನ್ನು ಕಲೆ ಹಾಕಿ ಬೃಹತ್ ಮೊತ್ತದ ಟಾರ್ಗೆಟ್ ನೀಡುವಲ್ಲಿ ಹಾಗೂ ಚೇಸ್ ಮಾಡುವಲ್ಲಿ ನಿಸ್ಸೀಮರು. ಇವರು ಕೆಕೆಆರ್ ತಂಡದ ಜೊತೆಗೆ ಕಳೆದ 12 ವರ್ಷದಿಂದ ಆಡುತ್ತಿದ್ದರು. ಆದರೆ ಇವರನ್ನು ತಂಡ ಕೈ ಬಿಟ್ಟು ಎಡವಟ್ಟು ಮಾಡಿತಾ? ಎಂಬ ಮಾತುಗಳು ಅಭಿಮಾನಿಗಳ ಒಲಯದಲ್ಲಿ ಕೇಳಿ ಬರುತ್ತಿವೆ.
ರಸೆಲ್ ಸಾಧನೆ
ಆಂಡ್ರೆ ರಸೆಲ್ ಐಪಿಎಲ್‌ನಲ್ಲಿ 140 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಬ್ಯಾಟಿಂಗ್‌ನಲ್ಲಿ 174ರ ಸ್ಟ್ರೈಕ್ ರೇಟ್‌ನಲ್ಲಿ 2651 ರನ್ ಸೇರಿಸಿದ್ದಾರೆ. ಈ ವೇಳೆ 12 ಅರ್ಧಶತಕಗಳು ಸಹ ಸೇರಿವೆ. ಇನ್ನು ಬೌಲಿಂಗ್‌ನಲ್ಲೂ 37 ವರ್ಷದ ರಸೆಲ್ ಕಮಾಲ್ ಮಾಡಿದ್ದು, 123 ವಿಕೆಟ್ ಕಬಳಿಸಿದ್ದಾರೆ. ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಸದ್ಯ ಹರಿದಾಡುತ್ತಿವೆ.

ರಸೆಲ್ ಸ್ಥಾನ ತುಂಬುವುದು ಯಾರು?
ಆಂಡ್ರಿ ರಸೆಲ್ ಸ್ಥಾನವನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ (cameron green) ತುಂಬ ಬಹುದು. ಕ್ಯಾಮರೂನ್ ಗ್ರೀನ್ ಕಳೆದ ಬಾರಿಯ ಐಪಿಎಲ್‌ನಲ್ಲಿ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ. ಆದರೆ ಇವರು ಈ ಬಾರಿ ಫುಲ್ ಫಿಟ್ ಆಗಿದ್ದು, ಈ ಬಾರಿ ಹರಾಜಿನ ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ. ಇವರು ಸ್ಫೋಟಕ ಬ್ಯಾಟಿಂಗ್ ಹಾಗೂ ಬಿಗುವಿನ ದಾಳಿಯನ್ನು ನಡೆಸಿ ತಂಡಕ್ಕೆ ನೆರವಾಗಬಹುದು. ಹೀಗಾಗಿ ಇವರು ಬಿಳಿ ಆನೆಯಂತೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರನ್ನು ಬಿಟ್ಟರೆ ಕೆಕೆಆರ್ ತಂಡ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಟಾರ್ಗೆಟ್ ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications