ಕೆಕೆಆರ್ ತಂಡದ ಆಂಗಿಕ ಭಾಷೆಯೇ ಅವರ ಆತ್ಮವಿಶ್ವಾಸವನ್ನು ಹೇಳುತ್ತಿದೆ: ದೀಪ್‌ದಾಸ್ ಗುಪ್ತ

ಸಾಕಷ್ಟು ಪ್ರತಿಭಾನ್ವಿತ ಹಾಗೂ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿದೆ. ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ಕೆಕೆಆರ್ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಕೆಕೆಆರ್ ತಂಡ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಮಾಜಿ ಕ್ರಿಕೆಟಿಗ ದೀಪ್‌ದಾಸ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.
"ನಾಲ್ಕು ಪಂದ್ಯಗಳನ್ನು ಸೋತಿರುವ ಕಾರಣ ಅವರಿ ಆತ್ಮವಿಶ್ವಾಸವನ್ನು ಸಹಜವಾಗಿಯೇ ಕಳೆದುಕೊಂಡಿದ್ದಾರೆ. ಅದನ್ನು ಅವರ ಆಂಗಿಕ ಭಾಷೆಯೇ ಹೇಳುತ್ತಿದೆ. ಅವರು ತಿರುಗಿ ಬೀಳಲು ಆರಂಭಿಸಿದರೆ ಆತ್ಮವಿಶ್ವಾಸ ಹೆಚ್ಚಲಿದೆ. ಅದಕ್ಕಾಗಿ ಅವರ ಡ್ರೆಸ್ಸಿಂಗ್ ರೂಮ್ ವಾತಾವರಣ ಹೇಗಿದೆ ಎಂಬುದನ್ನು ಗಮನಿಸಬೇಕು. ಅವರು ಅಲ್ಲಿ ಸಂತೋಷವಾಗಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ" ಎಂದು ದೀಪ್‌ದಾಸ್ ಗುಪ್ತ ಹೇಳಿದ್ದಾರೆ.
"ಅವರು ನಿರುತ್ಸಾಹಗೊಂಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಅದು ಅವರ ಂಏಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರಬಹುದು. ಎಲ್ಲರೂ ಕೂಡ ಫ್ರಾಂಚೈಸಿ ಪರವಾಗಿ ಉತ್ತಮ ಪ್ರದರ್ಶನ ನಿಡಲು ಉತ್ಸುಕರಾಗಿದ್ದಾರೆ. ವೈಯ್ಯಕ್ತಿಕವಾಗಿ ಅವರ ಭವಿಷ್ಯಕ್ಕೆ ಇದು ಬಹಳಷ್ಟು ಪರಿಣಾಮವನ್ನು ಬೀರಲಿದೆ" ಎಂದಿದ್ದಾರೆ ದೀಪ್‌ದಾಸ್ ಗುಪ್ತ.
ಅಂಕಪಟ್ಟಿಯಲ್ಲಿ ಕೆಕೆಆರ್ ಸದ್ಯ ಅಂತಿಮ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳ ಪೈಕಿ ಕೆಕೆಆರ್ ಮೊದಲ ಪಂದ್ಯವನ್ನು ಗೆದ್ದುಕೊಂಡಿತ್ತು. ಆದರೆ ನಂತರದ ಸತತ ನಾಲ್ಕು ಪಂದ್ಯಗಳನ್ನು ಸೋತಿದೆ. ಮುಂದಿನ ಪಂದ್ಯವನ್ನು ಕೆಕೆಆರ್ ಏಪ್ರಿಲ್ 26ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 26ರಂದು ಪಂಜಾಬ್ ವಿರುದ್ಧ ಸೆಣೆಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications