ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ಕ್ರಿಸ್ ಗ್ರೀನ್ ಬೌಲಿಂಗ್‌ನಿಂದ ನಿಷೇಧ!

ಬೆಂಗಳೂರು, ಜನವರಿ 8: ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಾಲಾಗಿದ್ದ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ರಿಸ್ ಗ್ರೀನ್, ಬೌಲಿಂಗ್‌ನಿಂದ 3 ತಿಂಗಳ ಕಾಲ ನಿಷೇಧಿಸಲ್ಪಟ್ಟಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಗ್ರೀನ್‌ಗೆ ನಿಷೇಧ ಶಿಕ್ಷೆ ವಿಧಿಸಿದೆ.
ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡುತ್ತಿದ್ದಾಗ ಕ್ರಿಸ್ ಗ್ರೀನ್ ಅವರ ಬೌಲಿಂಗ್ ಆ್ಯಕ್ಷನ್ ಅನುಮಾನಾಸ್ಪದವಾಗಿದೆ ಎಂದು ವರದಿಯಾಗಿತ್ತು. ವರದಿಯ ಬೆನ್ನಲ್ಲೇ ಗ್ರೀನ್ ಅವರನ್ನು ಬೌಲಿಂಗ್‌ನಿಂದ ನಿಷೇಧಿಸಲಾಗಿದೆ. ಕಳೆದ ವಾರ ಬಿಬಿಎಲ್‌ನಲ್ಲಿ ಮೆಲ್ಬರ್ನ್ ಸ್ಟಾರ್ಸ್ ವಿರುದ್ಧ ಆಡುತ್ತಿದ್ದಾಗ ಕ್ರಿಸ್ ಬೌಲಿಂಗ್ ಆ್ಯಕ್ಷನ್‌ನ ಬಗ್ಗೆ ಆರೋಪ ಕೇಳಿಬಂದಿತ್ತು.
ಹರಾಜಿನ ವೇಳೆ 26ರ ಹರೆಯದ ಅನ್‌ಕ್ಯಾಪ್ಡ್ ಆಟಗಾರ ಕ್ರಿಸ್ ಗ್ರೀನ್ ಅವರನ್ನು ಮೂಲಬೆಲೆಯಾದ 20 ಲಕ್ಷ ರೂ.ಗೆ ಮಾಜಿ ಚಾಂಪಿಯನ್ಸ್ ಕೆಕೆಆರ್ ಖರೀದಿಸಿತ್ತು. ಇನ್ನು 3 ತಿಂಗಳ ಕಾಲ ಗ್ರೀನ್ ಬೌಲಿಂಗ್ ಮಾಡುವಂತಿಲ್ಲವಾದ್ದರಿಂದ ಐಪಿಎಲ್ ಆರಂಭವಾಗುವ ಮಾರ್ಚ್ 29ರ ವೇಳೆ ಲಿನ್‌ಗೆ ಆಡಲು ಅವಕಾಶ ಸಿಗಲಿದೆಯೋ ಇಲ್ಲವೋ ತಿಳಿದುಬಂದಿಲ್ಲ.
ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನಿಂದ ಕ್ರಿಸ್ ಗ್ರೀನ್‌ಗೆ ಅನುಮೋದನೆ ಲಭಿಸಬೇಕು. ಆದರೆ ಗ್ರೀನ್ ನಿಷೇಧ ಮಾರ್ಚ್ ತಿಂಗಳವರೆಗೂ ಇರುವುದರಿಂದ ಆಡಲು ಅವಕಾಶ ಸಿಗಲಿದೆಯೋ ಇಲ್ಲವೋ ಎಂಬುದು ಸ್ಪಷ್ಟಗೊಂಡಿಲ್ಲ. ಆದರೆ ಗ್ರೀನ್ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications