ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಇನ್ನುಳಿದ ಪಂದ್ಯಗಳಿಗೆ ಆಸ್ಟ್ರೇಲಿಯಾದ ವೇಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಪ್ಯಾಟ್ ಕಮಿನ್ಸ್ ಲಭ್ಯರಿಲ್ಲ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ ಆಟಗಾರರು ಬಯೋ ಬಬಲ್ ಒಳಗೆ ಒತ್ತಡ ಅನುಭವಿಸುತ್ತಿರುವುದರಿಂದ ಕೆಲ ಆಟಗಾರರು ಐಪಿಎಲ್ ಉಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಳೆದ ಶನಿವಾರ (ಮೇ 29) ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ 2021ರ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.

ಬಯೋಬಬಲ್‌ನಲ್ಲಿ ಸೋಂಕು
ಭಾರತದಲ್ಲಿ 2021ರ ಐಪಿಎಲ್ ಆರಂಭವಾಗಿ ಅರ್ಧದಷ್ಟು ಪಂದ್ಯಗಳು ಮುಗಿದಿದ್ದಾಗ ಬಯೋ ಬಬಲ್ ಒಳಗೆ ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡವು. ಕೋಲ್ಕತ್ತಾ ನೈಟ್ ರೈಡರ್ಸ್ ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು.

ಕ್ವಾರಂಟೈನ್‌ನಿಂದ ಸುಸ್ತು
ಐಪಿಎಲ್ ಮುಂದೂಡಿದ ಬಳಿಕ ಆಸ್ಟ್ರೇಲಿಯಾ ಆಟಗಾರರು ಸ್ವದೇಶಕ್ಕೆ ತೆರಳು ಪರದಾಡಿದ್ದರು. ಭಾರತದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿದ್ದರಿಂದ ಆಸ್ಟ್ರೇಲಿಯಾ ದೇಶ ಕೂಡ ಭಾರತದಿಂದ ಬರುವ ದೇಶಿಗರಿಗೆ ನಿರ್ಬಂಧ ಹೇರಿತ್ತು. ಹೀಗಾಗಿ ಐಪಿಎಲ್ ಮುಂದೂಡಿಕೆ ಬಳಿಕ ಆಸೀಸ್ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಇಷ್ಟರಲ್ಲಾಗಲೇ ಕಾಂಗರೂ ದೇಶದ ಆಟಗಾರರು ಭಾರತದಲ್ಲಿ, ಮಾಲ್ಡೀವ್ಸ್‌ನಲ್ಲಿ ಮತ್ತು ಆಸ್ಟ್ರೇಲಿಯಾಕ್ಕೆ ವಾಪಸ್ ಬಂದ ಮೇಲೂ ಸಾಲು ಸಾಲು ಕ್ವಾರಂಟೈನ್ ಅನುಭವಿಸಿ ಸುಸ್ತಾಗಿದ್ದರು. ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿರುವುದರಿಂದ ಐಪಿಎಲ್ ಬದಿಗಿರಿಸಿ ವಿಶ್ವಕಪ್‌ನತ್ತ ಗಮನ ಹರಿಸಲು ಆಸೀಸ್ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ಯಾಟ್ ಕಮಿನ್ಸ್ ಆಡಲ್ಲ
'ಪ್ಯಾಟ್ ಕಮಿನ್ಸ್ ಮಲ್ಟಿ ಮಿಲಿಯನ್ ಡಾಲರ್ ಐಪಿಎಲ್ ಕಾಂಟ್ರ್ಯಾಕ್ಟ್ ಹೊಂದಿದ್ದಾರಾದರೂ ಈ ಸೀಸನ್‌ನ ಟೂರ್ನಿಗೆ ವಾಪಸ್ಸಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಹೇಳಿದೆ. ಕೋವಿಡ್ ಕಾರಣದಿಂದ ಐಪಿಎಲ್ ಮುಂದೂಡಲ್ಪಟ್ಟ ಕೆಲವೇ ದಿನಗಳಲ್ಲಿ ಕಮಿನ್ಸ್ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications