For Quick Alerts
ALLOW NOTIFICATIONS  
For Daily Alerts
 

ಸಂಶಯಾಸ್ಪದ ಬೌಲಿಂಗ್ ಶೈಲಿ: ಕೆಕೆಆರ್‌ನ ಸುನಿಲ್ ನರೈನ್‌ ನಿರಾಳ

KKRs Sunil Narine cleared by IPL suspect bowling action committee

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಲ್ ರೌಂಡರ್ ಸುನಿಲ್ ನರೈನ್‌ ಈಗ ಕೊಂಚ ನಿರಾಳರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಬೌಲಿಂಗ್ ಶೈಲಿ ಬಗ್ಗೆ ದೂರು ಕೇಳಿ ಬಂದಿತ್ತು. ಅವರ ಆ್ಯಕ್ಷನ್ ಸಂಶಯಾಸ್ಪದವಾಗಿದೆ, ಅಕ್ರಮ ರೀತಿಯಲ್ಲಿದೆ ಎಂದು ಫೀಲ್ಡ್ ಅಂಪೈರ್‌ ದೂರಿತ್ತಿದ್ದರು.

ಸುನಿಲ್ ನರೈನ್ ಬೌಲಿಂಗ್ ಆ್ಯಕ್ಷನ್ ಅನ್ನು ಪರಿಶೀಲಿಸಿರುವ ಐಪಿಎಲ್‌ನ ಸಂಶಯಾಸ್ಪದ ಬೌಲಿಂಗ್ ಆ್ಯಕ್ಷನ್ ಪರಿಶೀಲನಾ ಸಮಿತಿ ನರೈನ್‌ ಬೌಲಿಂಗ್‌ ಶೈಲಿ ಸರಿಯಿದೆ ಎಂದಿದೆ. ಐಪಿಎಲ್ ಮಾಧ್ಯಮ ಹೇಳಿಕೆಯಲ್ಲಿ ಭಾನುವಾರ (ಅಕ್ಟೋಬರ್ 18) ಈ ವಿಚಾರ ತಿಳಿಸಿದೆ.

ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಸುನಿಲ್ ನರೈನ್ ಬೌಲಿಂಗ್ ಆ್ಯಕ್ಷನ್ ಬಗ್ಗೆ ದೂರು ಕೇಳಿ ಬಂದಿತ್ತು. ಆವತ್ತು ಕೆಕೆಆರ್ ತಂಡ ರೋಚಕ 2 ರನ್‌ನಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ನರೈನ್‌ಗೆ 2 ವಿಕೆಟ್‌ ಕೂಡ ಲಭಿಸಿತ್ತು.

'ನರೈನ್ ಬೌಲಿಂಗ್ ಆ್ಯಕ್ಷನ ಪರಿಶೀಲಿಸುವಂತೆ ಐಪಿಎಲ್ ಸಂಶಯಾಸ್ಪದ ಬೌಲಿಂಗ್ ಆ್ಯಾಕ್ಷನ್ ಪರಿಶೀಲನಾ ಸಮಿತಿಯನ್ನು ಕೆಕೆಆರ್‌ ಕೇಳಿಕೊಂಡಿತ್ತು. ಹೀಗಾಗಿ ಸಮಿತಿ ನರೈನ್ ಅವರನ್ನು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಿದೆ. ನರೈನ್ ಶೈಲಿ ಅನುಮತಿ ನೀಡಿದ ಪರಿಧಿಯೊಳಗಿದೆ,' ಎಂದು ಐಪಿಎಲ್ ಹೇಳಿಕೆ ನೀಡಿದೆ.

2015ರಲ್ಲಿ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದಿದ್ದ ಶ್ರೀಲಂಕಾ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯದ ವೇಳೆ ಮೊದಲ ಬಾರಿ ವಿಂಡೀಸ್ ಬೌಲರ್ ನರೈನ್ ವಿರುದ್ಧ ಅಕ್ರಮ ಬೌಲಿಂಗ್ ದೂರು ಕೇಳಿ ಬಂದಿತ್ತು. ಮತ್ತೆ 2015ರ ಐಪಿಎಲ್‌ ವೇಳೆಯೂ ಸಂಶಯಾಸ್ಪದ ಬೌಲಿಂಗ್ ಮಾಡಿದ್ದರು.

Story first published: Monday, October 19, 2020, 9:56 [IST]
Other articles published on Oct 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+