Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್‌ ಇಬ್ಬರು ಆಟಗಾರರಿಗೆ 43.20 ಕೋಟಿ ರೂ. ಖರ್ಚು: ತಂಡ ಯಾರಿಗೆಲ್ಲಾ ಮಣೆ ಹಾಕಿದೆ?

ಮಾಜಿ ಚಾಂಪಿಯನ್‌ ಕೆಕೆಆರ್ ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಹಣದ ಹೊಳೆಯನ್ನು ಹರಿಸಿದೆ. ಐಪಿಎಲ್‌ ಹರಾಜಿನಲ್ಲಿ ಅತ್ಯಂತ ಗರಿಷ್ಠ ಮೊತ್ತದೊಂದಿಗೆ ಹರಾಜು ಅಂಗಳ ಪ್ರವೇಶಿಸಿತ್ತು. ಇದರ ಸಂಪೂರ್ಣ ಲಾಭ ಪಡೆದ ಕೋಲ್ಕತ್ತಾ ನೈಟ್‌ ರೈಡರ್ಸ್‌ ದುಬಾರಿ ಆಟಗಾರರಿಗೆ ಮಣೆ ಹಾಕಿದೆ.

ಈ ಬಾರಿಯ ಹರಾಜಿನಲ್ಲಿ ಕೆಕೆಆರ್‌ 64.3 ಕೋಟಿ ರೂ.ಗಳನ್ನು ಹೊಂದಿತ್ತು. ಈ ಹಣದಲ್ಲಿ 13 ಆಟಗಾರನ್ನು ಖರೀದಿಸುವ ಅವಕಾಶ ಇತ್ತು. ಈ ವೇಳೆ ಕೆಕೆಆರ್‌ ತಂಡ ಇಬ್ಬರು ಆಟಗಾರರಿಗೆ 43.20 ಕೋಟಿ ರೂ. ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಈ ವೇಳೆ ವಿದೇಶಿ ಆಟಗಾರರಿಗೆ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ವೇಳೆ ಕೆಕೆಆರ್ ಅತ್ಯಂತ ದುಬಾರಿ ಆಟಗಾರನಾಗಿ ಕ್ಯಾಮರೂನ್‌ ಗ್ರೀನ್ ಅವರನ್ನು ಬರ ಮಾಡಿಕೊಂಡಿದೆ. ಇವರಿಗೆ ಕೆಕೆಆರ್‌ 25.20 ಕೋಟಿ ರೂ. ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

KKR Spends 43 20 Cr on Green and Pathirana Who Else Did They Buy

ಕೆಕೆಆರ್ ಆಂಡ್ರೆ ರಸೆಲ್‌ ಬದಲಿಗೆ ಕ್ಯಾಮರೂನ್ ಅವರನ್ನು ಖರೀದಿಸಿದೆ. ಗ್ರೀನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಬಲ್ಲ ಪ್ಲೇಯರ್. ಇವರು ಈಗಾಗಲೇ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದು, ಇವರಿಗೆ ಕೋಲ್ಕತ್ತಾ ಮಣೆ ಹಾಕಿದೆ.

ಕೆಕೆಆರ್ ತಮ್ಮ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಲು ಶ್ರೀಲಂಕಾ ಮತೀಶ್ ಪತಿರಾಣಾ ಅವರಿಗೆ ಬಲೆ ಹಾಕಿದೆ. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಇವರಿಗೆ 18 ಕೋಟಿ ರೂ. ನೀಡಿದ ಕೋಲ್ಕತ್ತಾ ತಂಡಕ್ಕೆ ಸೇರಿಸಿಕೊಂಡಿದೆ.


ಕೆಕೆಆರ್‌ ಖರೀದಿಸಿದ ಆಟಗಾರರ ಪಟ್ಟಿ

ಕ್ಯಾಮರೂನ್ ಗ್ರೀನ್- ₹25.20 ಕೋಟಿ
ಮತೀಶ ಪತಿರಾಣ- ₹18 ಕೋಟಿ
ಮುಸ್ತಫಿಜುರ್ ರೆಹಮಾನ್- ₹9.20 ಕೋಟಿ
ಫಿನ್ ಅಲೆನ್- ₹2 ಕೋಟಿ
ರಚಿನ್ ರವೀಂದ್ರ- ₹2 ಕೋಟಿ
ಟಿಮ್ ಸೀಫರ್ಟ್- ₹1.5 ಕೋಟಿ
ಆಕಾಶ್ ದೀಪ್- ₹1 ಕೋಟಿ
ರಾಹುಲ್ ತ್ರಿಪಾಠಿ- ₹75 ಲಕ್ಷ
ತೇಜಸ್ವಿ ಸಿಂಗ್- ₹3 ಕೋಟಿ
ಕಾರ್ತಿಕ್ ತ್ಯಾಗಿ- ₹30 ಲಕ್ಷ
ಪ್ರಶಾಂತ್ ಸೊಲಂಕಿ- ₹30 ಲಕ್ಷ
ಸಾರ್ಥಕ್ ರಂಜನ್- ₹30 ಲಕ್ಷ
ದಕ್ಷ್ ಕಾಮ್ರಾ- ₹30 ಲಕ್ಷ

Story first published: Tuesday, December 16, 2025, 23:43 [IST]
Other articles published on Dec 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+