For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ KKR ಸ್ಟಾರ್ ರಸೆಲ್ ಇತಿಹಾಸ: ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ

ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್ ತಂಡದ ಆಟಗಾರರು ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ. ಅಲ್ಲದೆ ಹಲವು ದಾಖಲೆಗಳಿಗೆ ತಮ್ಮದೆ ಹೆಸರನ್ನು ನಮೂದಿಸಿದ್ದಾರೆ. ಈಗ ಈ ಲೀಸ್ಟ್‌ಗೆ ಆಂಡ್ರೆ ರಸೆಲ್‌ ಸೇರಿಕೊಂಡಿದ್ದಾರೆ. ಮೊದಲಿನಿಂದಲೂ ರಸೆಲ್‌ ಇದೇ ಪಟ್ಟಿಯಲ್ಲಿ ಇದ್ದರು. ಆದರೆ ತಮ್ಮದೇ ದಾಖಲೆಯನ್ನು ಮತ್ತಷ್ಟು ಬಲಿಷ್ಠ ಪಡಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವದಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ ಅಮೆರಿಕದಲ್ಲಿ ಮೆಜಕ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ನಡೆಯುತ್ತಿದೆ. ಈ ಟೂರ್ನಿಯಲ್ಲಿ ವಿಶ್ವದ ಸ್ಟಾರ್ ಆಟಗಾರರು ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಲಾಸ್‌ ಎಂಜಿಲಸ್ ನೈಟ್‌ರೈಡರ್ಸ್‌ ಹಾಗೂ ವಾಶಿಂಗ್ಟನ್‌ ಫ್ರೀಡಂ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಲಾಸ್‌ ಎಂಜಿಲಸ್ ನೈಟ್‌ರೈಡರ್ಸ್‌ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಟಾರ್ ಆಲ್‌ರೌಂಡರ್ ರಸೆಲ್‌ ಇತಿಹಾಸ ಬರೆದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಲೆಕ್ಕಾಚಾರದಲ್ಲಿ ಇವರಿಗೆ ಮೂರನೇ ಸ್ಥಾನ.

KKR Star Andre Russell Becomes Third Player Globally to Hit 750 T20 Sixes

ವಾಶಿಂಗ್ಟನ್‌ ಫ್ರೀಡಂ ವಿರುದ್ಧ ಮೊದಲು ಬ್ಯಾಟ್ ಮಾಡಿದ ಲಾಸ್ ಎಂಜಿಲಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿತು. ಈ ವೇಳೆ ಲಾಸ್ ತಂಡದ ಆರಂಭಿಕ ಆಟಗಾರ ಆಂಡ್ರೆ ಫ್ಲೆಚರ್ 7 ಬೌಂಡರಿ, 6 ಸಿಕ್ಸರ್ ಸಹಾಯದಿಂದ 104 ರನ್‌ ಸಿಡಿಸಿ ಔಟ್ ಆದರು. ಇನ್ನು ಉನ್ಮುಕ್ತ್ ಚಾಂದ್ 40 ರನ್‌ ಸಿಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 120 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಇದೇ ವೇಳೆ ರಸೆಲ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು.

ಆಂಡ್ರೆ ರಸೆಲ್‌ ಕೇವಲ 13 ಎಸೆತಗಳಲ್ಲಿ 3 ಮುಗಿಲೆತ್ತರದ ಸಿಕ್ಸರ್ ಸಹಾಯದಿಂದ ಅಜೇಯ 30 ರನ್‌ ಸಿಡಿಸಿದರು. ಇವರೆಲ್ಲರ ಅಬ್ಬರದ ಆಟದ ನೆರವಿನಿಂದ ಲಾಸ್‌ ಎಂಜಿಲಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್‌ ಸೇರಿಸಿತು. ಈ ವೇಳೆ ರಸೆಲ್ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು. ಈ ಪಂದ್ಯದಲ್ಲಿ ರಸೆಲ್‌ 3 ಸಿಕ್ಸರ್‌ ಬಾರಿಸುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ 750ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

KKR Star Andre Russell Becomes Third Player Globally to Hit 750 T20 Sixes

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು ಒಟ್ಟಾರೆ 1056 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕೀರನ್ ಪೋಲಾರ್ಡ್‌ ಇದ್ದು ಇವರು 916 ಸಿಕ್ಸರ್ ಸಿಡಿಸಿದ್ದಾರೆ. ರಸೆಲ್‌ಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನ. ಇವರು 751 ಸಿಕ್ಸರ್ ದಾಖಲಿಸಿದ್ದಾರೆ.

ರಸೆಲ್‌ ತಂಡಕ್ಕೆ ಸೋಲು

ಲಾಸ್ ಎಂಜಿಲಸ್ ತಂಡದ ನೀಡಿದ್ದ 214 ರನ್‌ಗಳ ಗುರಿಯನ್ನು ವಾಶಿಂಗ್ಟನ್‌ ಫ್ರೀಡಂ ತಂಡ 5 ವಿಕೆಟ್‌ ನಷ್ಟಕ್ಕೆ ಕಳೆದುಕೊಂಡು ಮುಟ್ಟಿತು. ಈ ಮೂಲಕ ಲೀಗ್‌ನಲ್ಲಿ ಫ್ರೀಡಂ ತಂಡ 5ನೇ ಗೆಲುವು ದಾಖಲಿಸಿತು.

Story first published: Friday, June 27, 2025, 15:08 [IST]
Other articles published on Jun 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+