Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಉತ್ತಮ ಆಟಗಾರರನ್ನು ಒಳಗೊಂಡ ಕೆಕೆಆರ್ ಪಡೆ ಹೇಗಿದೆ?

DC Team 2022 Players List: Full List of Kolkata knight riders With Price in Kannada

ಈ ಬಾರಿಯ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಉತ್ತಮ ಆಟಗಾರರನ್ನು ಕೊಂಡುಕೊಳ್ಳಲು ಯಶಸ್ವಿಯಾಗಿದೆ. ಈ ಬಾರಿಯ ಆವೃತ್ತಿಗೂ ಮುನ್ನ ನಾಯಕನಾಗಿದ್ದ ಜೋಸ್ ಬಟ್ಲರ್ ಯುವ ಆಟಗಾರ ಶುಬ್ಮನ್ ಗಿಲ್, ಅನುಭವಿ ದಿನೇಶ್ ಕಾರ್ತಿಕ್, ಪ್ಯಾಟ್ ಕಮ್ಮಿನ್ಸ್ ಅವರನ್ನು ಹರಾಜುಪಟ್ಟಿಗೆ ಬಿಡುಗಡೆಗೊಳಿಸಿ ಅದೃಷ್ಠ ಪರೀಕ್ಷೆಗೆ ಇಳಿದಿತ್ತು. ಇದರಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು ಈ ಮುಂಬರುವ ಐಪಿಎಲ್ ಆವೃತ್ತಿಗೆ ನಾಯಕನ ಹುಡುಕಾಟದಲ್ಲಿದ್ದ ಕೆಕೆಆರ್ ಫ್ರಾಂಚೈಸಿ ಶ್ರೇಯಸ್ ಐಯ್ಯರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಐಯ್ಯರ್ ಅವರೇ ಕೆಕೆಆರ್ ತಂಡದ ಮುಂದಿನ ನಾಯಕ ಎಂಬುದು ನಿರೀಕ್ಷೆಯಾಗಿದೆ. ಆಸಿಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಕೂಡ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿರುವ ಕಾರಣ ಇವರಿಬ್ಬರಲ್ಲಿ ಕೆಕೆಆರ್ ಯಾರನ್ನು ನಾಯಕ ಎಂದು ಘೋಷಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ನಾಯಕತ್ವದ ದೃಷ್ಟಿಯಿಂದಲೇ ಶ್ರೇಯಸ್ ಐಯ್ಯರ್ ಅವರನ್ನು ದೊಡ್ಡ ಮೊತ್ತಕ್ಕೆ ಕೆಕೆಆರ್ ಖರೀದಿಸಿತು ಎಂಬುದು ಕೂಡ ಗಮನಾರ್ಹ ಸಂಗತಿ.

ಪ್ಯಾಟ್ ಕಮ್ಮಿನ್ಸ್ (7.25 ಕೋಟಿ), ಶ್ರೇಯಸ್ ಅಯ್ಯರ್ (12.25 ಕೋಟಿ), ನಿತೀಶ್ ರಾಣಾ (8 ಕೋಟಿ), ಶಿವಂ ಮಾವಿ (7.25 ಕೋಟಿ), ಶೆಲ್ಡನ್ ಜಾಕ್ಸನ್ (60 ಲಕ್ಷ), ಅಜಿಂಕ್ಯ ರಹಾನೆ (1 ಕೋಟಿ), ರಿಂಕು ಸಿಂಗ್ (55 ಲಕ್ಷ), ಅನುಕುಲ್ ರಾಯ್ (20 ಲಕ್ಷ, ಪ್ರಥಮ್ ಸಿಂಗ್ (20 ಲಕ್ಷ), ಅಭಿಜೀತ್ ತೋಮರ್ (40 ಲಕ್ಷ), ರಾಸಿಖ್ ಸಲಾಂ (20 ಲಕ್ಷ), ಬಾಬಾ ಇಂದ್ರಜಿತ್ (20 ಲಕ್ಷ), ಚಾಮಿಕಾ ಕರುಣಾರತ್ನೆ (50 ಲಕ್ಷ), ಅಶೋಕ್ ಶರ್ಮಾ ( 55 ಲಕ್ಷ), ಸ್ಯಾಮ್ ಬಿಲ್ಲಿಂಗ್ಸ್ (2 ಕೋಟಿ) / ಅಲೆಕ್ಸ್ ಹೇಲ್ಸ್ (1.5 ಕೋಟಿ), ಟಿಮ್ ಸೌಥಿ (1.5 ಕೋಟಿ), ರಮೇಶ್ ಕುಮಾರ್ (20 ಲಕ್ಷ), ಮೊಹಮ್ಮದ್ ನಬಿ (1.0 ಕೋಟಿ), ಉಮೇಶ್ ಯಾದವ್ (20 ಲಕ್ಷ)

ಹರಾಜಿಗೆ ಮುನ್ನ ರೀಟೈನ್ ಆಗಿದ್ದ ಆಟಗಾರರು: ಇನ್ನು ಈ ಬಾರಿಯ ಹರಾಜಿಗೆ ಮುನ್ನ ಕೆಕೆಆರ್ ಫ್ರಾಂಚೈಸಿ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ಅನುಭವಿ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು 12 ಕೋಟಿ ರೂಪಾಯಿಗೆ ಉಳಿದಿಕೊಂಡಿದ್ದ ಕೆಕೆಆರ್, ವರುಣ್ ಚಕ್ರವರ್ತಿ ಅವರನ್ನು 8 ಕೋಟಿ ನೀಡಿ ಉಳಿಸಿಕೊಂಡಿತ್ತು. ಆಲ್‌ರೌಂಡರ್ ವೆಂಕಟೇಶ್ ಐಯ್ಯರ್‌ಗೆ ಕೂಡ 8 ಕೋಟಿ ಮೊತ್ತವನ್ನು ಫ್ರಾಂಚೈಸಿ ನೀಡಿತ್ತು. ಇನ್ನು ಅನುಭವಿ ಆಲ್‌ರೌಂಡರ್ವ ಸುನಿಲ್ ನರೈನ್ ಅವರನ್ನು 6 ಕೋಟಿಗೆ ಉಳಿಸಿಕೊಂಡಿತ್ತು.

Story first published: Monday, February 14, 2022, 9:27 [IST]
Other articles published on Feb 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+