Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rinku Singh: ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಗೆಲುವು ಸಾಧಿಸಿದ ಕೆಕೆಆರ್!

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ರಣರೋಚಕ ಪಂದ್ಯವೊಂದು ಭಾನುವಾರ ನಡೆದಿದೆ. 205 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಕೊನೆಯ ಓವರ್ ನಲ್ಲಿ 31 ರನ್‌ ಗಳಿಸುವ ಮೂಲಕ ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದರು. ರಿಂಕು ಸಿಂಗ್ ಕೊನೆಯ ಓವರ್ ನಲ್ಲಿ ಸತತವಾಗಿ 5 ಸಿಕ್ಸರ್ ಸಿಡಿಸುವ ಮೂಲಕ ಹಲವು ದಾಖಲೆ ಬರೆದರು.

ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ವೃದ್ಧಿಮಾನ್ ಸಾಹ 17 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಜೊತೆಯಾಟ ಆಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 67 ರನ್‌ಗಳನ್ನು ಕಲೆಹಾಕಿತು. ಶುಭಮನ್ ಗಿಲ್ 39 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ ಅರ್ಧಶತಕ ಗಳಿಸಿದರು. 38 ಎಸೆತಗಳಲ್ಲಿ 53 ರನ್ ಗಳಿಸಿ ಮಿಂಚಿದರು.

Rinku Singh Creates New Record

ಅಭಿನವ್ ಮನೋಹರ್ 8 ಎಸೆತಗಳಲ್ಲಿ 14 ರನ್ ಗಳಿಸಿದರೆ, ವಿಜಯ್ ಶಂಕರ್ ಸ್ಫೋಟಕ ಇನ್ನಿಂಗ್ಸ್ ಆಡಿದರು. 24 ಎಸೆತಗಳಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 63 ರನ್ ಗಳಿಸಿದರು. ಕೊನೆಯ ಎರಡು ಓವರ್ ಗಳಲ್ಲಿ 45 ರನ್ ಗಳಿಸಿದ ಗುಜರಾತ್ ಟೈಟನ್ಸ್ ಕೆಕೆಆರ್ ತಂಡಕ್ಕೆ 205 ರನ್‌ಗಳ ಬೃಹತ್ ಗುರಿ ನೀಡಿದರು.

Rinku Singh Creates New Record

ಅಯ್ಯರ್ ಅಬ್ಬರ, ರಶೀದ್ ಖಾನ್ ಹ್ಯಾಟ್ರಿಕ್

ಬೃಹತ್ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. 28 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ನಂತರ ಬಂದ ವೆಂಕಟೇಶ್ ಅಯ್ಯರ್ ಮತ್ತು ನಾಯಕ ನಿತೀಶ್ ರಾಣಾ ಮೂರನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ಆಡಿದರು. ನಿತೀಶ್ ರಾಣ 29 ಎಸೆತಗಳಲ್ಲಿ 45 ರನ್ ಗಳಿಸಿದರೆ, ಅಯ್ಯರ್ 40 ಎಸೆತಗಳಲ್ಲಿ 83 ರನ್ ಗಳಿಸಿದರು. ಈ ಸಂದರ್ಭದಲ್ಲಿ ದಾಳಿಗೆ ಬಂದ ರಶೀದ್ ಖಾನ್ 2023ರ ಐಪಿಎಲ್‌ನ ಮೊದಲ ಹ್ಯಾಟ್ರಿಕ್ ಪಡೆದು ಪಂದ್ಯದ ಗತಿಯನ್ನು ಬದಲಾಯಿಸಿದರು.

ಕೊನೆಯ ಎರಡು ಓವರ್ ನಲ್ಲಿ ಕೆಕೆಆರ್ ಗೆಲುವಿಗೆ 43 ರನ್‌ಗಳ ಅಗತ್ಯವಿತ್ತು. 19ನೇ ಓವರ್ ನಲ್ಲಿ 14 ರನ್ ಗಳಿಸಿದ ಬಳಿಕ ಕೊನೆಯ ಓವರ್ ನಲ್ಲಿ 29 ರನ್ ಬೇಕಾಗಿತ್ತು. ಮೊದಲನೇ ಎಸೆತದಲ್ಲಿ ಉಮೇಶ್ ಯಾದವ್ ಒಂದು ರನ್ ಪಡೆದು ರಿಂಕು ಸಿಂಗ್‌ಗೆ ಸ್ಟ್ರೈಕ್ ನೀಡಿದರು. 5 ಎಸೆತಗಳಲ್ಲಿ ಸತತವಾಗಿ 5 ಸಿಕ್ಸ್ ಸಿಡಿಸಿದ ರಿಂಕು ಸಿಂಗ್ ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದರು.

Rinku Singh Creates New Record

ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ರಿಂಕುಸಿಂಗ್

ಅಮೋಘ ಇನ್ನಿಂಗ್ಸ್ ಮೂಲಕ ಹಲವು ರಿಂಕು ಸಿಂಗ್ ದಾಖಲೆ ಬರೆದರು, ಒಂದೇ ಓವರ್ ನಲ್ಲಿ 5 ಸಿಕ್ಸರ್ ಸಿಡಿಸಿದ 5ನೇ ಬ್ಯಾಟರ್ ಎನಿಸಿಕೊಂಡರು. ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ, ಮಾರ್ಕಸ್ ಸ್ಟೊಯಿನಿಸ್, ರವೀಂದ್ರ ಜಡೇಜಾ ಮಾತ್ರ ಈವರೆಗೆ ಈ ಸಾಧನೆ ಮಾಡಿದ್ದರು. ಇನ್ನು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಓವರ್ ನಲ್ಲಿ 29 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. 2016ರಲ್ಲಿ ಪಂಜಾಬ್ ವಿರುದ್ಧ ಪುಣೆ ಸೂಪರ್ ಜೈಂಟ್ಸ್ 23 ರನ್ ಗಳಿಸಿ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಯಶ್ ದಯಾಳ್ 4 ಓವರ್ ನಲ್ಲಿ 69 ರನ್ ಬಿಟ್ಟುಕೊಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಎರಡನೇ ದುಬಾರಿ ಬೌಲರ್ ಎನಿಸಿಕೊಂಡರು.

Story first published: Sunday, April 9, 2023, 22:26 [IST]
Other articles published on Apr 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+