Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs LSG IPL 2024: ಸಾಲ್ಟ್, ಅಯ್ಯರ್ ಭರ್ಜರಿ ಬ್ಯಾಟಿಂಗ್; ಲಕ್ನೋ ವಿರುದ್ಧ ಕೋಲ್ಕತ್ತಾಗೆ ಚೊಚ್ಚಲ ಗೆಲುವು

ಭಾನುವಾರ, ಏಪ್ರಿಲ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 28ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.

ಗಮನಾರ್ಹವಾಗಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮೊದಲ ಗೆಲುವು ಸಾಧಿಸಿದೆ. 2022ರಲ್ಲಿ ಐಪಿಎಲ್ ಪ್ರವೇಶಿಸಿದ ಎಲ್‌ಎಸ್‌ಜಿ ತಂಡ ಕೆಕೆಆರ್ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು.

KKR vs LSG IPL 2024 Kolkata Knight Riders Beat Lucknow Super Giants By 8 Wickets in 28th Match

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಕೋಲಸ್ ಪೂರನ್ ಮತ್ತು ಕೆಎಲ್ ರಾಹುಲ್ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್‌ಗಳನ್ನು ಕಲೆಹಾಕಿತು.

162 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫಿಲ್ ಸಾಲ್ಟ್ ಅವರ ಅಮೋಘ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅಜೇಯ ಬ್ಯಾಟಿಂಗ್ ಸಹಾಯದಿಂದ 15.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 164 ರನ್‌ ಗಳಿಸಿ ಗೆಲುವಿನ ಗುರಿ ಸೇರಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಕೇವಲ 1.3 ಓವರ್‌ನಲ್ಲಿ 22 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 6 ರನ್ ಗಳಿಸಿದ್ದ ಸುನಿಲ್ ನರೈನ್ ವಿಕೆಟ್ ಒಪ್ಪಿಸಿದರು. ನಂತ ಬಂದ ಆಂಗ್‌ಕ್ರಿಶ್ ರಘುವಂಶಿ ಕೇವಲ 7 ರನ್‌ಗಳಿಗೆ ಔಟಾದರು.

ನಂತರ ಜೊತೆಗೂಡಿದ ಫಿಲ್ ಸಾಲ್ಟ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಕೊನೆಯವರೆಗೂ ಬ್ಯಾಟಿಂಗ್ ಮಾಡಿ ತಮ್ಮ ತಂಡವನ್ನು ಗೆಲ್ಲಿಸಿದರು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಫಿಲ್ ಸಾಲ್ಟ್ ಕೇವಲ 47 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ ಅಜೇಯ 89 ರನ್ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 6 ಬೌಂಡರಿಗಳ ಮೂಲಕ 38 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೊಹ್ಸಿನ್ ಖಾನ್ ಮಾತ್ರ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ವಿಕೆಟ್ ರಹಿತರಾದರು.

ಇದಕ್ಕೂ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಪರ ಕೆಎಲ್ ರಾಹುಲ್ 39 ರನ್, ಕ್ವಿಂಟನ್ ಡಿ ಕಾಕ್ 10 ರನ್, ದೀಪಕ್ ಹೂಡಾ 8 ರನ್, ಆಯುಷ್ ಬಡೋನಿ 29 ರನ್, ಮಾರ್ಕಸ್ ಸ್ಟೊಯಿನಿಸ್ 10 ರನ್, ನಿಕೋಲಸ್ ಪೂರನ್ 45 ರನ್ ಕೃನಾಲ್ ಪಾಂಡ್ಯ 7 ರನ್ ಮತ್ತು ಅರ್ಷದ್ ಖಾನ್ ಅವರ 5 ರನ್‌ಗಳು 160 ರನ್‌ಗಳ ಗಡಿ ದಾಟಲು ನೆರವಾದವು.

Story first published: Sunday, April 14, 2024, 19:45 [IST]
Other articles published on Apr 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+