For Quick Alerts
ALLOW NOTIFICATIONS  
For Daily Alerts
 

KKR vs LSG IPL 2024: ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ vs ಲಕ್ನೋ ಕಾಳಗ; ಸಂಭಾವ್ಯ ಆಡುವ 11ರ ಬಳಗ

ಭಾನುವಾರ, ಏಪ್ರಿಲ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 28ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ರೋಚಕ ಹಣಾಹಣಿಗೆ ಸಜ್ಜಾಗಿವೆ. ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯದಲ್ಲಿ ಐಪಿಎಲ್ 2024ರ ಮೊದಲ ಸೋಲನ್ನು ಅನುಭವಿಸಿದ ನಂತರ, ಲೀಗ್‌ನಲ್ಲಿ ಪುಟಿದೇಳುವ ಗುರಿಯನ್ನು ಹೊಂದಿದೆ.

KKR vs LSG IPL 2024 Kolkata Knight Riders vs Lucknow Super Giants Match Preview Probable Playing 11

ಕೆಕೆಆರ್ ತವರಿನ ಈಡನ್ ಗಾರ್ಡನ್ಸ್‌ಗೆ ಮರಳಿರುವ ಖುಷಿಯಲ್ಲಿದ್ದಾರೆ ಮತ್ತು ಐಪಿಎಲ್ 2024ರ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಮತ್ತೆ ಎರಡು ಅಂಕಗಳನ್ನು ಕಲೆಹಾಕಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಲಿದ್ದಾರೆ. ಕೆಕೆಆರ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.

ಮತ್ತೊಂದೆಡೆ, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2024ರಲ್ಲಿ ಹಿಂದುಳಿದಿಲ್ಲ. ಆಡಿದ 5 ಪಂದ್ಯಳಲ್ಲಿ 3 ಗೆಲುವು ಮತ್ತು 2 ಸೋಲಿನೊಂದಿಗೆ 4ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನೊಂದಿಗೆ ಈ ಪಂದ್ಯಕ್ಕೆ ಬರಲಿದೆ.

ಕೆಕೆಆರ್ vs ಎಲ್‌ಎಸ್‌ಜಿ ಪಂದ್ಯದ ವಿವರ

ಸ್ಥಳ ಮತ್ತು ದಿನಾಂಕ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2024ರ ಪಂದ್ಯವು ಭಾನುವಾರ, ಏಪ್ರಿಲ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

KKR vs LSG IPL 2024 Kolkata Knight Riders vs Lucknow Super Giants Match Preview Probable Playing 11

ಪಂದ್ಯದ ಸಮಯ: ಕೆಕೆಆರ್ ಮತ್ತು ಎಲ್‌ಎಸ್‌ಜಿ ನಡುವಿನ ಐಪಿಎಲ್ 2024ರ ಪಂದ್ಯವು ದಿನದ ಆಟವಾಗಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಕೆಕೆಆರ್ vs ಎಲ್‌ಎಸ್‌ಜಿ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ಮಾಹಿತಿ

ಐಪಿಎಲ್ 2024ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ಕೆಕೆಆರ್ vs ಎಲ್‌ಎಸ್‌ಜಿ ಸಂಭಾವ್ಯ ಆಡುವ 11ರ ಬಳಗ

ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಯಶ್ ಠಾಕೂರ್.

ಕೋಲ್ಕತ್ತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್‌ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಅನುಕುಲ್ ರಾಯ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.

Story first published: Sunday, April 14, 2024, 13:22 [IST]
Other articles published on Apr 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+